ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನತೆಯ ಆಕ್ರೋಶ
Team Udayavani, Nov 30, 2020, 8:44 AM IST
ಸಾಂದರ್ಭಿಕ ಚಿತ್ರ
ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರ್ಪಡೆಗೊಳಿಸುವ ಜತೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿನ ರೈಲ್ವೇ ಜಾಲವನ್ನು ಇನ್ನಷ್ಟು ವಿಸ್ತರಿಸಬೇಕು ಎಂಬ ಆಶಯದೊಂದಿಗೆ ಉದಯವಾಣಿ ಯು ಆರಂಭಿಸಿರುವ “ಬಲಗೊಳ್ಳಲಿ ಕರಾವಳಿ ರೈಲು ಜಾಲ’ ಅಭಿಯಾನಕ್ಕೆ ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲ್ವೇ ಸೇವೆಗಳಿಗೆ ಸಂಬಂಧಿಸಿದ ಕರಾವಳಿಗರ ಬೇಡಿಕೆಗಳಿಗೆ ರೈಲ್ವೇ ಇಲಾಖೆಯಿಂದ ಸ್ಪಂದನೆ ದೊರಕದಿರಲು ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಈ ಭಾಗದ ರಾಜಕೀಯ ನಾಯಕರು ಮತ್ತು ಜನರಲ್ಲಿ ಕುಗ್ಗುತ್ತಿರುವ ಹೋರಾಟ ಮನೋಭಾವವೇ ಕಾರಣ ಎಂಬುದು ಬಹುತೇಕರ ಅಭಿಪ್ರಾಯ.
ಸಂಘಟಿತ ಹೋರಾಟ ಅಗತ್ಯ :
ಖಾಸಗಿ ಬಸ್‌ಗಳ ಸೇವೆ ಉತ್ತಮ ಮಟ್ಟದಲ್ಲಿ ರುವುದು ಮತ್ತು ರೈಲು ನಿಲ್ದಾಣದ ಬಳಿ ಕೇರಳದ ಲ್ಲಿರುವ ಹಾಗೆ ಮೂಲಸೌಕ ರ್ಯಗಳಿಲ್ಲದೇ ಇರುವುದ ರಿಂದ ಬಹುತೇಕ ಜನರು ರೈಲು ಸೇವೆಯನ್ನು ಪಡೆದು ಕೊಳ್ಳಲು ಹಿಂದೇಟು ಹಾಕು ತ್ತಾರೆ. ಜನಪ್ರತಿನಿಧಿಗಳು ಮತ್ತು ಜನರು ಒತ್ತಡ ಹೇರಿ ಸಂಘಟಿತ ಹೋರಾಟ ಮಾಡಬೇಕು.– ಅಲಗೇಶ್ವರಿ ಕಟಪಾಡಿ
ವಿಲೀನೀಕರಣ ಅನಿವಾರ್ಯ :
ಕೊಂಕಣ ರೈಲ್ವೇಯ ಕಳೆದ 25 ವರ್ಷಗಳ ಸೇವೆಯು ಕರಾವಳಿ ಕರ್ನಾಟಕದ ಪಾಲಿಗೆ ಇದ್ದು ಇಲ್ಲದಂತಾ ಗಿದೆ. ನಮ್ಮ ಪ್ರತಿ ಯೊಂದು ಬೇಡಿಕೆ ಗಳನ್ನು ಕಸದ ಬುಟ್ಟಿಗೆ ಎಸೆಯುವ ಪ್ರವೃತ್ತಿ ಕೊಂಕಣ ರೈಲ್ವೇಯಲ್ಲಿರುವ ಕೆಲವರಿಂದ ಆಗುತ್ತಿದೆ. ಕರಾವಳಿ ಕರ್ನಾಟಕ ಕೊಂಕಣ ರೈಲ್ವೇ ವ್ಯಾಪ್ತಿಗೆ ಸೇರಿದ್ದರೂ ಕೂಡ ಎಲ್ಲ ಸೌಕರ್ಯ, ಸವಲತ್ತು ಗೋವಾ ಮತ್ತು ಮಹಾರಾಷ್ಟ್ರಕ್ಕೆ ಸೀಮಿತವಾಗಿದೆ. ಇವಕ್ಕೆಲ್ಲ ಮುಕ್ತಿ ಸಿಗಬೇಕೆಂದರೆ ನೈಋತ್ಯ ರೈಲ್ವೇಯೊಂದಿಗೆ ಮಂಗಳೂರು ಭಾಗದ ವಿಲೀನೀಕರಣ ಅನಿವಾರ್ಯ.– ರಾಘವೇಂದ್ರ ಶೇಟ್ ಕುಂದಾಪುರ
ಸಮಸ್ಯೆಗಳಿಗೆ ಶೀಘ್ರ ಮುಕ್ತಿ ಸಿಗಲಿ :
ಕರಾವಳಿ ಭಾಗದಲ್ಲಿ ರೈಲು ಸೌಲಭ್ಯಗಳನ್ನು ಹೆಚ್ಚಿಸುವುದಕ್ಕೆ ದಕ್ಷಿಣ ರೈಲ್ವೇ ವಲಯದ ಅಧೀನದಲ್ಲಿರುವ ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆೆ ಸೇರಿಸಬೇಕೆಂಬುದು ಅತೀ ಅಗತ್ಯದ ಮತ್ತು ಅನಿವಾರ್ಯವಾದ ಬೇಡಿಕೆ. ಈ ಭಾಗದ ರೈಲ್ವೇ ಅಭಿವೃದ್ಧಿಗೆ ಇದು ಪೂರಕ. ಈಗ ಮಂಗಳೂರು ರೈಲ್ವೇ ಭಾಗ ಮೂರು ಕಡೆ ಹಂಚಿಹೋಗಿರುವ ಕಾರಣ ಜನರಿಗೆ ಗೊಂದಲದ ಸ್ಥಿತಿ ಇದೆ. ಆದಷ್ಟು ಬೇಗ ಈ ಸಮಸ್ಯೆಗಳಿಗೆ ಮುಕ್ತಿ ಸಿಗಲಿ. – ಚಂದ್ರಿಕಾ ಎಂ. ಶೆಣೈ ಮುಳ್ಳೇರಿಯಾ, ಕಾಸರಗೋಡು
ಮತ್ತೂಮ್ಮೆ ಕರ್ನಾಟಕದ ಏಕೀಕರಣವಾಗಬೇಕಾಗಿದೆ :
ರೈಲ್ವೇ ವಿಚಾರದಲ್ಲಿ ಮತ್ತೂಮ್ಮೆ ಕರ್ನಾಟಕದ ಏಕೀಕರಣವಾಗ ಬೇಕಾಗಿದೆ. ವಿವಿಧ ವಲಯಗಳಲ್ಲಿ ಹರಿದು ಹಂಚಿ ಹೋಗಿರುವ ಕರಾವಳಿಯ ರೈಲ್ವೇಯನ್ನು ಒಂದುಗೂಡಿಸುವಲ್ಲಿ ದೊಡ್ಡ ಸಮಸ್ಯೆ ಎಂದರೆ ರಾಜಕಾರಣಿಗಳ ಲ್ಲಿನ ಇಚ್ಛಾಶಕ್ತಿಯ ಕೊರತೆ ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳ ಮೊಂಡುತನ. ರಾಜ್ಯದ ಸಮಗ್ರ ರೈಲ್ವೇ ಅಭಿವೃದ್ಧಿಗಾಗಿ ಮಂಗಳೂರು ಮತ್ತು ಕಲಬುರಗಿಯ ವಿಭಾಗ ರಚಿಸಿ ನೈಋತ್ಯ ರೈಲ್ವೇಯೊಂದಿಗೆ ವಿಲೀನಗೊಳಿಸಬೇಕಾದ ಅನಿವಾರ್ಯತೆ ಇದೆ.– ವಿನಯ್ ವೆಂಕಟೇಶ ಕುಲಕರ್ಣಿ ಚಿಕ್ಕಮಗಳೂರು
ಕೇರಳದ ಲಾಬಿ :
ಮಂಗಳೂರು ಭಾಗದ ರೈಲ್ವೇಯನ್ನು ನೈಋತ್ಯ ರೈಲ್ವೇಯೊಂದಿಗೆ ವಿಲೀನ ಮಾಡುವುದಕ್ಕೆ ಇಡೀ ಕರ್ನಾಟಕದ ಬಹುತೇಕ ಜನರು ಬೆಂಬಲ ನೀಡಿದ್ದಾರೆ. ಪ್ರಸ್ತುತ ಈ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದ “ಉದಯವಾಣಿ’ ಅಭಿಯಾನ ಅಭಿನಂದನೀಯ. ಈ ಬೇಡಿಕೆ ಈಡೇರದೇ ಉಳಿಯಲು ಕೇರಳ ಲಾಬಿ ಕಾರಣವಾ ಗಿದ್ದು, ಈ ಬಗ್ಗೆ ಆದ್ಯ ಗಮನಹರಿಸುವುದು ಅಗತ್ಯವಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಯಿಂದ ಕೆಲಸ ಮಾಡಲಿ. – ಮಾಧವ ಬೆಂಗಳೂರು
ಕರಾವಳಿಗರ ದುರಾದೃಷ್ಟ :
ಮಂಗಳೂರು ಭಾಗದ ರೈಲ್ವೇಯನ್ನು ನೈಋತ್ಯ ರೈಲ್ವೇಯೊಂದಿಗೆ ವಿಲೀನ ಮಾಡುವ ಸಂಬಂಧ ಆದೇಶ ಬಂದು 16 ವರ್ಷಗಳು ಕಳೆ ದರೂ ಮಂಗಳೂರು ನೈಋತ್ಯ ರೈಲ್ವೇ ವಿಭಾಗಕ್ಕೆ ಸೇರ್ಪಡೆ ಯಾಗದಿರುವುದು ಕರಾವಳಿಗರ ದುರಾದೃಷ್ಟ. ಕರಾವಳಿಯ ಸಚಿವರು, ಜನಪ್ರತಿನಿಧಿಗಳು ಮನಸು ಮಾಡಿದರೆ ಯಾವ ಹೋರಾಟವೂ ಅಗತ್ಯವಿಲ್ಲ. ಗುಣಮಟ್ಟದ ರೈಲು ಸೇವೆ ತರಿ ಸುವ ಪ್ರಯತ್ನವನ್ನು ಏಕಮನಸ್ಸಿನಿಂದ ಮಾಡಬೇಕು. ಶೀಘ್ರ ಆ ದಿನ ಬರುವಂತಾಗಲಿ.– ಶಶಿಧರ್ ಕೆ. ಬಂಡಿತಡ್ಕ, ಕನ್ಯಾನ
ಮುತುವರ್ಜಿ ವಹಿಸಲಿ :
ಭೂ, ವಾಯು ಮತ್ತು ಜಲಸಂಪರ್ಕ ಹೊಂದಿರುವ ರಾಜ್ಯದ ಏಕೈಕ ನಗರ ಮಂಗಳೂರು. ಹಾಗಾಗಿ ಮಂಗಳೂರು ರೈಲ್ವೇಯನ್ನು ನೈಋತ್ಯ ವಲಯಕ್ಕೆ ಸೇರ್ಪಡೆಗೊಳಿಸಿದಲ್ಲಿ ನವಮಂಗಳೂರು ಬಂದರಿಗೆ ನೇರ ಸಂಪರ್ಕ ಸಾಧ್ಯವಾಗುತ್ತದೆ. ಬಂದರು ಮೂಲಕ ಸಾಗಾಟವಾಗುವ ಇಂಧನ, ಖಾದ್ಯ ತೈಲ, ರಸಗೊಬ್ಬರ ಇತ್ಯಾದಿಗಳ ಸಾಗಾಟದ ಆದಾಯವೆಲ್ಲ ನೈಋತ್ಯ ರೈಲ್ವೇಗೆ ಸಿಗುತ್ತದೆ. ಈ ಮೂಲಕ ದಕ್ಷಿಣ ಕನ್ನಡ ಮಾತ್ರವಲ್ಲದೆ ಇಡೀ ರಾಜ್ಯದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ 2003 ರ ಆದೇಶ ಜಾರಿಯಾಗುವಲ್ಲಿ ನಮ್ಮ ಜನಪ್ರತಿನಿಧಿಗಳು, ನಾಯಕರು ಮುತುವರ್ಜಿ ವಹಿಸಬೇಕು. – ಡಿ.ಪ್ರವೀಣ್ ಆನಂದ್ ಮೂಲ್ಕಿ
ಜನಪ್ರತಿನಿಧಿಗಳು ಒಗ್ಗೂಡಲಿ :
ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರ ಇರುವಾಗ ಕರಾವಳಿಯ ಸಂಸದರು, ಶಾಸಕರು ಈ ಬಗ್ಗೆ ರಾಜಕೀಯ ಇಚ್ಛಾಶಕ್ತಿ ತೋರಲಿ. ಕರಾವಳಿಯ ಜನಪ್ರತಿನಿಧಿಗಳೆಲ್ಲರೂ ಒಗ್ಗೂಡಿ ದರೆ ಮಾತ್ರ ಪ್ರತಿಫಲ ಸಾಧ್ಯ. ಶೀಘ್ರ ಮಂಗಳೂರು ಭಾಗ ರೈಲು ಜಾಲ ನೈಋತ್ಯ ರೈಲ್ವೇಗೆ ಸೇರಲಿ.– ಕಾರ್ತಿಕ್ ಅಡಿಗ ಸೌಕೂರು ಕುಂದಾಪುರ
ಜನರ ಹಕ್ಕೊತ್ತಾಯಕ್ಕೆ ಸ್ಪಂದಿಸಬೇಕು :
ದಕ್ಷಿಣ ವಲಯದಿಂದ ಮಂಗಳೂರು ರೈಲ್ವೇಯನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರ್ಪಡೆಗೊಳಿಸಿ ಕರಾವಳಿ ಭಾಗದ ಜನರ ದಶಕದ ಬೇಡಿಕೆಯನ್ನು ಈಡೇರಿಸಬೇಕು. ಇದನ್ನು ಜಾರಿಗೊಳಿಸುವಲ್ಲಿ ಯಾವುದೇ ಲಾಬಿಗೆ ಮಣಿಯದೆ ಈ ಭಾಗದ ಜನರ ಹಕ್ಕೊತ್ತಾಯಕ್ಕೆ ಸ್ಪಂದಿಸಿಬೇಕು.– ಮೋಹನ ಕೊಟ್ಟಾರಿ ಶಿರೂರು
ಎಚ್ಚೆತ್ತುಕೊಳ್ಳುವ ಸಮಯ ಇದು :
ಮಂಗಳೂರು ಒಂದು ಪ್ರಮುಖ ನಗರ. ಎಲ್ಲ ರೀತಿಯಿಂದಲೂ ಬಹಳ ಬೇಗನೇ ಅಭಿವೃದ್ಧಿ ಹೊಂದುತ್ತಿರುವ ನಗರ. ಪಾಲಾ^ಟ್‌ಗೆ ಮಂಗಳೂರನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಇದು ಎಚ್ಚೆತ್ತುಕೊಳ್ಳುವ ಸಮಯ. ಇನ್ನಾದರೂ ನಮ್ಮ ಜನಪ್ರತಿನಿಧಿಗಳು ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿ ಮಂಗಳೂರು ಪ್ರತ್ಯೇಕ ವಿಭಾಗ ಆಗಲು ಶ್ರಮಿಸಬೇಕು. ಒಗ್ಗಟ್ಟಿನ ಹೋರಾಟದಿಂದ ಬೇಡಿಕೆ ಈಡೇರಲು ಸಾಧ್ಯ.– ನವನೀತ್ ವೈ. ಕೆ. ಕುಳಾಯಿ
ಬೇಡಿಕೆ ಈಡೇರಿಕೆಗೆ ಗಮನ ಹರಿಸಿ :
ಮಂಗಳೂರು ಸಹಿತ ಕರಾವಳಿ ಭಾಗದಲ್ಲಿ ರೈಲ್ವೇ ಸೌಲಭ್ಯಗಳು ತೀರಾ ಕಡಿಮೆ. ಪ್ಲ್ರಾಟ್‌ಫಾರಂಗಳ ಸ್ಥಿತಿಯೂ ಅಷ್ಟಕಷ್ಟೇ. ಕೇರಳದ ಲಾಬಿಯಿಂದಾಗಿ ಅವರು ರೈಲು ಸಹಿತ ಎಲ್ಲ ರೈಲ್ವೇ ಸವಲತ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಇದೀಗ “ಉದಯವಾಣಿ’ ಆರಂಭಿಸಿರುವ ಅಭಿಯಾನ ನೋಡಿಯಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಬೇಡಿಕೆ ಈಡೇರಿಕೆಗೆ ಪಣ ತೊಡಲಿ. – ಜಯರಾಮ್ ವಿ. ಪ್ರಭು ಕಿನ್ನಿಮೂಲ್ಕಿ ಉಡುಪಿ
ಇಚ್ಛಾಶಕ್ತಿಯ ಕೊರತೆ :
ಜನಹಿತ ಕಾರ್ಯಗಳಿಗಾಗಿ ಪಕ್ಷ ರಾಜಕೀಯವನ್ನು ತೊರೆದು ಒಮ್ಮತದಿಂದ ಒತ್ತಾಯ ಮಾಡುವ ಇಚ್ಛಾಶಕ್ತಿ ಚುನಾಯಿತರಾದವರಲ್ಲಿ ಇಲ್ಲದಿದ್ದ ಕಾರಣ ಅವಿಭಜಿತ ದ.ಕ. ಜಿಲ್ಲೆಯ ಜನರು ಅನೇಕ ರೀತಿಯ ರೈಲ್ವೇ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮಂಗಳೂರು ಭಾಗ ನ್ಯೆಋತ್ಯ ರೈಲ್ವೇ ವಲಯಕ್ಕೆ ಸೇರದಿರಲು ಇದೂ ಒಂದು ಕಾರಣವೆಂಬುದನ್ನು ಅಲ್ಲಗಳೆಯುವಂತಿಲ್ಲ. – ಶ್ರೀನಿವಾಸ ಶೆಟ್ಟಿ ತೋನ್ಸೆ
ಮಂಗಳೂರು ವಿಭಾಗ ಆರಂಭಿಸಿ :
ಹೊಸದಾಗಿ ಮಂಗಳೂರು ವಿಭಾಗವನ್ನು ಆರಂಭಿಸಿ ಕಾರವಾರದಿಂದ ಉಪ್ಪಳದ ವರೆಗಿನ ರೈಲುಮಾರ್ಗ ಮತ್ತು ಮಂಗಳೂರಿನಿಂದ ಅರಸೀಕೆರೆ ತನಕದ ರೈಲು ಮಾರ್ಗವನ್ನು ವಿಲೀನಗೊಳಿಸಬೇಕು ಮತ್ತು ಈ ವಿಭಾಗವನ್ನು ನೈಋತ್ಯ ವಲಯಕ್ಕೆ ಸೇರಿಸಬೇಕು.– ಆಲ್ಫ್ರೆಡ್ ಫುರ್ಟಾಡೋ ಬಾರ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.