ತಳ್ಳಾಟದಿಂದ ಪುರಸಭೆ ಸದಸ್ಯೆಗೆ ಗರ್ಭಪಾತ: ಏಳು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಸದಸ್ಯೆ


Team Udayavani, Dec 1, 2020, 11:50 AM IST

ತಳ್ಳಾಟದಿಂದ ಪುರಸಭೆ ಸದಸ್ಯೆಗೆ ಗರ್ಭಪಾತ: ಏಳು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಸದಸ್ಯೆ

ಬಾಗಲಕೋಟೆ: ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಳೆದ ನ. 9ರಂದು ನಡೆದ ಚುನಾವಣೆ ವೇಳೆ ತಮ್ಮದೇ ಪಕ್ಷದ ಮಹಿಳಾ ಸದಸ್ಯೆಯನ್ನು ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ ನೂಕಿ-ತಳ್ಳಿದ್ದ ವಿವಾದ ಇದೀಗ ಹೊಸ ತಿರುವು ಪಡೆದಿದ್ದು, ಅಂದು ತಳ್ಳಾಟಕ್ಕೆ ಒಳಗಾಗಿದ್ದ ಮಹಿಳೆಗೆ ಗರ್ಭಪಾತವಾಗಿದೆ.

ಹೀಗಾಗಿ ಜಿಲ್ಲೆಯ ಮಹಿಳಾ ಸಂಘಟನೆಗಳು ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮಹಾಲಿಂಗಪುರ ಪುರಸಭೆಯ
ವಾರ್ಡ್‌ ನಂ.4ರ ಬಿಜೆಪಿ ಸದಸ್ಯೆ ಚಾಂದಿನಿ ನಾಯಕ ಅವರಿಗೆ ಗರ್ಭಪಾತವಾಗಿದ್ದು, ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ.
10 ವರ್ಷದ ಗಂಡು ಮತ್ತು 8 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಆ ಬಳಿಕ ಅವರಿಗೆ ಮಕ್ಕಳಾಗಿರಲಿಲ್ಲ. ಏಳು ವರ್ಷಗಳ ಬಳಿಕ ಮೂರು ತಿಂಗಳ ಗರ್ಭಿಣಿಯಾಗಿದ್ದ ಚಾಂದಿನಿ ಅವರ ಕುಟುಂಬ ಖುಷಿಯಲ್ಲಿತ್ತು. ನ. 9ರಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ತಮ್ಮ ನಾಯಕರಾದ ಶಾಸಕರು ಅವಕಾಶ ಕೊಡಲಿಲ್ಲ ಎಂದು ಅಸಮಾಧಾನಗೊಂಡು
ಕಾಂಗ್ರೆಸ್‌ಗೆ ಬೆಂಬಲಿಸಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ಶಾಸಕರು ಮತ್ತು ಬೆಂಬಲಿಗರು, ಚಾಂದಿನಿ ನಾಯಕ ಸಹಿತ ಇತರ ಮೂವರು ತಮ್ಮದೇ ಪಕ್ಷದ ಸದಸ್ಯರು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಪುರಸಭೆ ಕಚೇರಿ ಆವರಣದಲ್ಲೇ ತಡೆಯುವ ಪ್ರಯತ್ನ ಮಾಡಿದ್ದರು.

ಶಾಸಕರು ಹಾಗೂ ಅವರ ಬೆಂಬಲಿಗರು ಕೂಡಿ, ಸದಸ್ಯೆ ಚಾಂದಿನಿ ನಾಯಕ, ಸವಿತಾ ಹುರಕಡ್ಲಿ, ಗೋದಾವರಿ ಬಾಟ ಮತದಾನ
ಮಾಡದಂತೆ ಗೇಟ್‌ನಲ್ಲಿ ತಡೆದರು. ಈ ವೇಳೆ ತೀವ್ರ ನೂಕಾಟ, ತಳ್ಳಾಟ ನಡೆದಿದ್ದು, ಸ್ವತಃ ಶಾಸಕ ಸವದಿ ಅವರು ಮಹಿಳಾ ಸದಸ್ಯೆ
ಚಾಂದಿನಿ ಅವರನ್ನು ಪುರಸಭೆ ಕಚೇರಿಯ ಮೆಟ್ಟಿಲುಗಳ ಮೇಲಿಂದ ತಳ್ಳಿದ್ದರು. ಆಗ ನಾಯಕ ಅವರು ಮೂರು ಮೆಟ್ಟಿಲುಗಳಿಂದ
ಕೆಳಗೆ ಬಿದ್ದು, ಸಣ್ಣ-ಪುಟ್ಟ ಗಾಯಗೊಂಡಿದ್ದರು.

ಇದನ್ನೂ ಓದಿ:ಕೋವಿಡ್‌ ಔಷಧ ನಿಧಿಗಾಗಿ ಯುವಕರ ಬೈಕ್‌ ಯಾತ್ರೆ : 3 ಕೋಟಿ ರೂ. ಸಂಗ್ರಹದ ಗುರಿ

ಬಳಿಕ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಈ ತಳ್ಳಾಟದಲ್ಲಿ ಹೊಟ್ಟೆಗೆ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಗರ್ಭಪಾತವಾಗಿದೆ ಎಂದು ಚಾಂದಿನಿ ನಾಯಕ
ಅವರ ಪತಿ ನಾಗೇಶ ನಾಯಕ ತಿಳಿಸಿದ್ದಾರೆ.

ಗರ್ಭಪಾತವೇ ಸುಳ್ಳು ಎಂಬ ಮಾಹಿತಿ; ಶಾಸಕ ಸವದಿ
ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆಯ ಸದಸ್ಯೆ ಚಾಂದಿನಿ ನಾಗೇಶ ನಾಯಕ ಅವರಿಗೆ ಗರ್ಭಪಾತ ಸುಳ್ಳು ಎಂಬ ಮಾಹಿತಿ ಇದೆ. ಈ ಕುರಿತು ತನಿಖೆಯಾಗಲಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ. ಘಟನೆಯ ಕುರಿತು
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಬಂದ ಮಾಹಿತಿ ಪ್ರಕಾರ, ಚಾಂದಿನಿ ಅವರಿಗೆ ಆರು ವರ್ಷಗಳ ಹಿಂದೆಯೇ ಆಪರೇಶನ್‌ ಆಗಿದೆ. ನಿಖರವಾಗಿ ಗೊತ್ತಿಲ್ಲ. ಈ ಬಗ್ಗೆ ಸತ್ಯಾಸತ್ಯತೆ ಹೊರ ಬರಬೇಕು. ನೂಕುನುಗ್ಗಲಿನಲ್ಲಿ ಶೇ. 90ರಷ್ಟು ಕಾಂಗ್ರೆಸ್‌ನವರು ಇದ್ದರು. ನಾನು ಭಾವನಾತ್ಮಕವಾಗಿ, ಸೋದರ ಭಾವದಿಂದ ಅವರನ್ನು ಮುಟ್ಟಿದ್ದು ನಿಜ. ಅವರು ನನ್ನ
ಮಗಳ ಸಮಾನ. ಆ ಬಗ್ಗೆ ನಾನು ಕ್ಷಮೆ ಕೇಳಿದ್ದೇನೆ. ಕಾಂಗ್ರೆಸ್‌ನವರಿಗೆ ಬೇರೆ ಕೆಲಸವಿಲ್ಲ. ಇದು ನೀಚ ರಾಜಕಾರಣ. ಇಂತಹ ರಾಜಕೀಯ ಸರಿಯಲ್ಲ ಎಂದು ಹೇಳಿದ್ದಾರೆ. ರಾತ್ರೋರಾತ್ರಿ ನಮ್ಮ ಸದಸ್ಯರನ್ನು ಕಿಡ್ನಾಪ್‌ ಮಾಡಿದ್ದರು. ಎಲ್ಲ ಅಂಶಗಳ ಕುರಿತು ತನಿಖೆಯಾಗಲಿ.

ಪ್ರಕರಣ ಮುಗಿದು 20 ದಿನಗಳ ನಂತರ ಈಗ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ತನಿಖೆಗೆ ನಾನು ಸಿದ್ಧನಿಸಿದ್ದೇನೆ ಎಂದು ಶಾಸಕ ಸವದಿ ಹೇಳಿದ್ದಾರೆ.

ಪತ್ನಿಯ ಗರ್ಭಪಾತದಿಂದ ತೀವ್ರ ನೋವುಂಟಾಗಿದೆ: ನಾಗೇಶ ನಾಯಕ
ಮಹಾಲಿಂಗಪುರ: ನ. 9ರಂದು ನಡೆದ ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನಾಲ್ಕನೇಯ ವಾರ್ಡ್‌ನ
ಚುನಾಯಿತ ಸದಸ್ಯೆ ನನ್ನ ಪತ್ನಿ ಚಾಂದನಿ ನಾಯಕ ಮತದಾನಕ್ಕಾಗಿ ಪುರಸಭೆಗೆ ಪ್ರವೇಶಿಸುವ ಸಂದರ್ಭದಲ್ಲಿ ಶಾಸಕ ಸಿದ್ದು
ಸವದಿ, ಬೆಂಬಲಿಗರು, ಪುರಸಭೆ ಸದಸ್ಯರು ಎಳೆದಾಡಿ, ತಳ್ಳಾಡುವ ಮೂಲಕ ದೌರ್ಜನ್ಯ ಮೆರೆದಿದ್ದಾರೆ. ಅವರೆಲ್ಲರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಪುರಸಭೆ ಸದಸ್ಯೆ ಚಾಂದಿನಿ ನಾಯಕ ಪತಿ ನಾಗೇಶ ನಾಯಕ ಹೇಳಿದರು.

ಸೋಮವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದಾಗಿ ನನ್ನ ಪತ್ನಿ ಮಾನಸಿಕ
ಮತ್ತು ದೈಹಿಕವಾಗಿ ತೀವ್ರ ನೋವು ಅನುಭವಿಸಿದ್ದಾಳೆ. ಸುಮಾರು 7 ವರ್ಷಗಳ ನಂತರ ಗರ್ಭಿಣಿಯಾಗಿದ್ದ ಪತ್ನಿಗೆ ಶನಿವಾರ
ಗರ್ಭಪಾತವಾಗಿದೆ. ಇದರಿಂದಾಗಿ ತೀವ್ರ ಮಾನಸಿಕ ತೊಳಲಾಟದಲ್ಲಿರುವ ಪತ್ನಿಯ ಆರೋಗ್ಯ ದೃಷ್ಟಿಯಿಂದ ಸಂಬಂಧಿಕರ ಊರಿಗೆ ಕಳುಹಿಸಿದ್ದೇನೆ. ಈ ಘಟನೆಯು ಕೇವಲ ನನ್ನ ಪತ್ನಿಗೆ ಮಾಡಿದ ಅವಮಾನವಲ್ಲ, ಇದು ರಾಜ್ಯದ ಸಮಸ್ತ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಕಾನೂನು ಹೋರಾಟ: ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಅಲ್ಲದೇ ಏಳು ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ತನ್ನ ಪತ್ನಿಗೆ ಗರ್ಭಪಾತವಾಗಿದ್ದರಿಂದ ತೀವ್ರ ನೋವಿನಲ್ಲಿರುವ ದಂಪತಿಗೆ ಸಾಂತ್ವನ ಹೇಳುವ ಕಾರ್ಯ ಜಿಲ್ಲೆಯ ಮಹಿಳಾ ಸಂಘಟನೆಗಳು, ಮಹಿಳಾ ರಾಜಕಾರಣಿಗಳು ಮಾಡುತ್ತಿದ್ದಾರೆ. ಪತ್ನಿಗೆ ಗರ್ಭಪಾತವಾಗಿದ್ದು, ಇದಕ್ಕೆ ನ. 9ರಂದು ನಡೆದ ಚುನಾವಣೆಯಲ್ಲಿ ಮತದಾನ ಮಾಡದಂತೆ ತಡೆಯಲು ತಳ್ಳಿ-ನೂಕಿದ್ದೆ ಕಾರಣ. ಈ ಕುರಿತು ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಚಾಂದಿನಿ ಅವರ ಪತಿ ನಾಗೇಶ ತಿಳಿಸಿದ್ದಾರೆ.

ಟಾಪ್ ನ್ಯೂಸ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.