ಭಜನಾ ಪದಗಳ ಮೋಡಿಗಾರ್ತಿ ಹಳ್ಳೂರಿನ ರುಕ್ಮಿಣಿ
Team Udayavani, Dec 1, 2020, 3:35 PM IST
ಮೂಡಲಗಿ : ಹಳ್ಳೂರ ಗ್ರಾಮದ ಬಾಲಕಿ ರುಕ್ಮಿಣಿಗೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಶಾರದೆ ಒಲಿತಿದ್ದು, ಒಂದಲ್ಲ, ಎರಡಲ್ಲ ಸಾವಿರಾರು ಭಜನಾಪದಗಳ ಭಂಡಾರವೇ ಇದೆ ಎಂದರೂ ತಪ್ಪಾಗದು. ಇಪ್ಪತಾಲ್ಕು ಗಂಟೆಗಳ ಕಾಲವೂ ಹಾಡುವಷ್ಟು
ಹಾಡುಗಳು ಆಕೆಯ ಕಂಠಸಿರಿಯಲ್ಲಿ ಅಡಗಿವೆ.
ಹಳ್ಳೂರ ಗ್ರಾಮದ ಶಂಕರ ಅಟಮಟ್ಟಿ , ಲಕ್ಕವ್ವಾ ಬಡ ದಂಪತಿಯ ಪುತ್ರಿ ರುಕ್ಮಿಣಿ ನಾಲ್ಕನೇ ತರಗತಿಯಿಂದಲೇ ಭಜನಾಪದ
ಹಾಡುಗಳ ಮೂಲಕವೇ ಸಮಾಜದಲ್ಲಿರುವ ಮೌಡ್ಯಗಳನ್ನು ಅಳಿಸುವ ಕಾಯಕ ಮಾಡುತ್ತಿದ್ದಾಳೆ.
ಗ್ರಾಮದವರೇ ಆದ ರಾಜ್ಯ ಪ್ರಶಸ್ತಿ ಪುರಸ್ಕೃತ ಪರಯ್ಯ ಮಠಮತಿ ರುಕ್ಮಿಣಿಗೆ ಸಂಗೀತ ಕಲಿಸುತ್ತಿದ್ದು, ರುಕ್ಮಿಣಿ ಸಾವಿರಾರು ಭಜನಾಪದ ಹಾಡುವ ಮೂಲಕ ಭಜನಾಪದ ಹಾಡುಗಳ ಮೋಡಿಗಾರ್ತಿಯಾಗಿದ್ದಾಳೆ. ರುಕ್ಮಿಣಿಯು ಜಾತ್ರೆ, ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲಿ, ಶ್ರಾವಣ ಮಾಸದಲ್ಲಿ ಮತ್ತು ಗ್ರಾಮದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೇ ಧಾರವಾಡ, ಬಾಗಲಕೋಟ, ವಿಜಯಪುರ, ಹಾವೇರಿ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ರಾಜ್ಯ ಸೇರಿದಂತೆ ಸುಮಾರು ನಾಲ್ಕುನೂರು ಪ್ರದರ್ಶನ ನೀಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವಳಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.
ಇದನ್ನೂ ಓದಿ:ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್ ಬೆಳವಣಿಗೆಗೆ ಕಾರಣವೇನು…
ಭಜನಾಪದಗಳಲ್ಲದೇ ಅನಿಷ್ಠ, ಮೂಢನನಂಬಿಕೆಗಳ ಕುರಿತು ಜಾಗೃತಿ ಮೂಡಿಸುವ ಸಾಕಷ್ಟು ಹಾಡುಗಳನ್ನು ರುಕ್ಮಿಣಿ
ಹಾಡಿದ್ದಾಳೆ. ತನ್ನದು ಅನಕ್ಷರಸ್ಥ ಕುಟುಂಬ ಆಗಿದ್ದರೂ ಈಗಿನ ಮಕ್ಕಳು ಸಾಕ್ಷರರಾಗಬೇಕು ಎನ್ನುವ ಮನೋಭಾವದಿಂದ ಸಾಕ್ಷರತೆ ಕುರಿತು ಅರಿವು ಮೂಡಿಸುವ ಹಾಡುಗಳನ್ನೂ ಹಾಡುತ್ತಿರುವುದು ಅವಳ ಸಾಮಾಜಿಕ ಕಳಕಳಿ ತೋರಿಸುತ್ತದೆ.
ಕಾರ್ಯಕ್ರಮಗಳಿಂದ ಬರುವ ಅಲ್ಪಸ್ವಲ್ಪ ಸಹಾಯಧನದಿಂದ ಕುಟುಂಬದ ಜವಾಬ್ದಾರಿಗೂ ಕೈ ಜೋಡಿಸಿದ್ದಾಳೆ. ಪತ್ರಾಸ್ ಶೆಡ್ಡಿನಲ್ಲಿ ವಾಸ ಮಾಡುತ್ತಿರುವ ರುಕ್ಮಿಣಿಯ ತಂದೆ-ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವುದರ ಜೊತೆಗೆ ಮಗಳು ತಮ್ಮಂತೆ ಅನಕ್ಷರಸ್ಥೆ ಆಗಬಾರದು ಎಂಬ ಕಾಳಜಿಯಿಂದ ಶಾಲೆ ಕಲಿಸುತ್ತಿದ್ದಾರೆ. ರುಕ್ಮಿಣಿ ಈ ವರ್ಷ ಹತ್ತನೇ ತರಗತಿ ಕಲಿಯುತ್ತಿದ್ದಾಳೆ.
– ಕೆ.ಬಿ.ಗಿರೆಣ್ಣವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.