ವಾಟ್ಸಾಪ್ ಹೇಗೆ ಹ್ಯಾಕ್ ಆಗುತ್ತದೆ ಗೊತ್ತಾ? ಏನಿದು ನಿಗೂಢ OTP ಸ್ಕ್ಯಾಮ್…


Team Udayavani, Dec 1, 2020, 6:00 PM IST

whatsapp-OTP-scam

ಭಾರತ ಸೇರಿದಂತೆ ವಿಶ್ವದಾದ್ಯಂತ ಇಂದು ವಾಟ್ಸಾಪ್ ಎಂಬುದು ಬಹಳ ಜನಪ್ರಿಯ ಅಪ್ಲಿಕೇಶನ್. 2009 ರಲ್ಲಿ ಅಮೆರಿಕದ ಬ್ರಯಾನ್ ಆ್ಯಕ್ಟನ್ ಮತ್ತು ಜಾನ್ ಕೌಮ್ ಎಂಬಿಬ್ಬರು ಈ ಅದ್ಬುತ ಮೆಸೆಂಜಿಂಗ್ ಆ್ಯಪ್ ಅನ್ನು ಅನ್ವೇಶಿಸಿದರು. ನಂತರದ ವರ್ಷಗಳಲ್ಲಿ ಈ ಆ್ಯಪ್ ಕಂಡ ಅಭಿವೃದ್ಧಿ ಊಹೆಗೂ ನಿಲುಕದ್ದು.

ಈ ಅಭೂತಪೂರ್ವ ಬೆಳವಣಿಗೆಯನ್ನು ಕಂಡು ಫೇಸ್ ಬುಕ್ ಸಂಸ್ಥಾಪಕ  ಮಾರ್ಕ್ ಜುಕರ್ ಬರ್ಗ್ 2014ರಲ್ಲಿ 19.3 ಬಿಲಿಯನ್ ಅಮೆರಿಕ ಡಾಲರ್ ನೀಡಿ ವಾಟ್ಸಾಪ್ ಅನ್ನು ಕೊಂಡುಕೊಂಡರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೇ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಫೇಸ್ ಬುಕ್ ಇಂಕ್ ಒಡೆತನದ ವಾಟ್ಸಾಪ್ 2020ರಲ್ಲಿ  ಬಹಳ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ.

ಹೌದು ! ಕಳೆದೊಂದು ತಿಂಗಳಿಂದ ‘ವಾಟ್ಸಾಪ್ ಓಟಿಪಿ ಸ್ಕ್ಯಾಮ್’ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಸುದ್ದಿಮಾಡುತ್ತಿದೆ. ಬಳಕೆದಾರರ ಡೇಟಾ ಸುರಕ್ಷತೆಗಾಗಿ  ಅತೀ ಹೆಚ್ಚು ಮಹತ್ವ ನೀಡಿದರೂ ಅದೇಗೆ ಹ್ಯಾಕರ್ ಗಳು ಸುಲಭವಾಗಿ ವಾಟ್ಸಾಪ್ ಪ್ರವೇಶಿಸುವಂತಾಯಿತು ? ಮೆಸೇಂಜಿಂಗ್ ಆ್ಯಪ್  ಮೇಲೆಯೇ ಅವರ ದೃಷ್ಟಿ ಬಿದ್ದಿದ್ದೇಕೆ ? ಇದರಿಂದ ವಾಟ್ಸಪ್ ಬಳಸುವವರು ಎದುರಿಸುವ ಸಮಸ್ಯೆಗಳಾವುವು ? ಹ್ಯಾಕ್ ನಿಂದ ಪಾರಾಗುವುದು ಹೇಗೆ ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಾಟ್ಸಾಪ್ ಪ್ರೈವಸಿ: ವಾಟ್ಸಾಪ್ ಸಂಸ್ಥೆ ಬಳಕೆದಾರರ ಪ್ರೈವೆಸಿ ಅಥವಾ ಖಾಸಗಿತನದ ಸುರಕ್ಷತೆಗೆ ಬಹಳ ಮಹತ್ವ ನೀಡಿದೆ. ಈ ಸಂಸ್ಥೆಯ ಧ್ಯೇಯವೇ ಸುಲಭವಾಗಿ ಮತ್ತು ಸುರಕ್ಷಿತವಾಗಿ ಜಗತ್ತನ್ನು ಬೆಸೆಯುವುದು.  ನೀವು ವಾಟ್ಸಾಪ್ ಮೂಲಕ ಸ್ನೇಹಿತರಿಗೆ, ಬಂಧುಗಳಿಗೆ, ವಾಣಿಜ್ಯ ಉದ್ದೇಶಗಳಿಗಾಗಿ ಕಳಿಸುವ ಸಂದೇಶ, ವಿಡಿಯೋ, ಚಿತ್ರ  ಸೇರಿದಂತೆ ಪ್ರತಿಯೊಂದು ಕೂಡ  ಬಹಳ ಭದ್ರತೆಗೆ ಒಳಪಟ್ಟಿರುತ್ತದೆ. ಸ್ವತಃ ವಾಟ್ಸಾಪ್ ಸಂಸ್ಥೆಗೂ ಕೂಡ ನೀವೇನು ಸಂದೇಶ ಕಳುಹಿಸಿದ್ದೀರಿ ಎಂಬುದನ್ನು ಗಮನಿಸಲು ಅನುಮತಿಯಿರುವುದಿಲ್ಲ. ಅಂದರೇ ವಾಟ್ಸಾಪ್ ಮೂಲಕ ಕಳುಹಿಸುವ ಎಲ್ಲಾ ವಿಚಾರಗಳು “ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್” ಗೆ ( End to End Encrypted – ಯಾವುದೇ ಕೋಡ್ ಗಳನ್ನು ಡಿಕೋಡ್ ಮಾಡಲಾಗುವುದಿಲ್ಲ)  ಒಳಪಟ್ಟಿರುತ್ತದೆ.  ಹೀಗಾಗಿ ನೀವು ಮಾಡುವ ಎಲ್ಲಾ ವಿಡಿಯೋ ಕರೆಗಳು, ಚಾಟ್ ಗಳು ನಿಮ್ಮಲ್ಲೆ ಇರುವುದು.

ಗಮನಿಸಬೇಕಾದ ಅಂಶವೆಂದರೇ ನಿಮ್ಮ ವಾಟ್ಸಾಪ್ ನಲ್ಲಿರುವ ಪ್ರತಿಯೊದು ಡೇಟಾಗಳು ಕೂಡ ನಿಮ್ಮ ಮೊಬೈಲ್ ಸ್ಟೋರೇಜ್ ನಲ್ಲಿಯೇ ಶೇಖರಣೆಯಾಗಿರುತ್ತದೆ. ಡೇಟಾ ಸುರಕ್ಷತೆಗಾಗಿಯೇ ವಾಟ್ಸಾಪ್ ನಲ್ಲಿ ಇದುವರೆಗೂ ಜಾಹೀರಾತು ಕಾಣಿಸಿಕೊಂಡಿಲ್ಲ. ಒಂದು ವೇಳೆ ವಾಟ್ಸಾಪ್ ನಲ್ಲಿ ಆ್ಯಡ್ ಗಳು ಇರುತ್ತಿದ್ದರೇ ನಿಮ್ಮ ಕೆಲವೊಂದು ಮಾಹಿತಿಗಳನ್ನು ಜಾಹೀರಾತು ಸಂಸ್ಥೆಗಳಿಗೆ ನೀಡುವ ಅನಿವಾರ್ಯತೆ ಗೆ ವಾಟ್ಸಾಪ್ ಸಂಸ್ಥೆ ಸಿಲುಕುತ್ತಿತ್ತು.

ಪ್ರೈವಸಿಗೆ ಆದ್ಯತೆ ನೀಡಿರುವ ವಾಟ್ಸಾಪ್ ಈಗಾಗಲೇ ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ಸ್, ಟು ಸ್ಟೆಪ್ ವೇರಿಫಿಕೇಶನ್, ಲಾಕ್ ಯುವರ್ ವಾಟ್ಸಾಪ್, ರೀಡ್ ರಿಸಿಪ್ಟ್ ( ಬ್ಲೂ-ಟಿಕ್), ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ ಪ್ರೈವೆಸಿ, ಸ್ಟೇಟಸ್ ಪ್ರೈವಸಿ ಮುಂತಾದವನ್ನು ಜಾರಿಗೆ ತಂದಿದೆ. ಇಷ್ಟೆಲ್ಲಾ ಭದ್ರತೆಗಳಿದ್ದರೂ ವಾಟ್ಸಾಪ್ ಓಟಿಪಿ ಸ್ಕ್ಯಾಮ್ ಎಂಬುದು ಹೇಗೆ ಆರಂಭವಾಯಿತು. ?

ಇಲ್ಲಿದೆ ಉತ್ತರ – ಈ ಸ್ಕ್ಯಾಮ್ ಅನ್ನು ತಂತ್ರಜ್ಞಾನ ತಿಳಿದಿರುವ ಪ್ರತಿಯೊಬ್ಬರು ಮಾಡಬಹುದು. ಪ್ರಮುಖವಾಗಿ  ಹ್ಯಾಕರ್ ಗಳು ಇತರರ ಅಕೌಂಟ್ ಗಳನ್ನು ಅನಧಿಕೃತವಾಗಿ ಪ್ರವೇಶಿಸಲು OTP (one time password) ಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಮೊದಲಿಗೆ ಅಪರಿಚಿತ ನಂಬರ್ ಅಥವಾ ಪರಿಚಿತ ನಂಬರ್ (ನಿಮ್ಮ ಸ್ನೇಹಿತರ ವಾಟ್ಸಾಪ್ ಅಕೌಂಟ್ ಅನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದೆ)  ಮೂಲಕವೇ ಸಂದೇಶ ಕಳುಹಿಸುವ ಹ್ಯಾಕರ್ ಗಳು,  ವೇರಿಫಿಕೇಶನ್ ಸಂದರ್ಭದಲ್ಲಿ ಅಚಾನಕ್ಕಾಗಿ ನಿಮ್ಮ ನಂಬರ್ ಟೈಪಿಸಿದ್ದರಿಂದ ಓಟಿಪಿ ಕೂಡ ನಿಮ್ಮ ನಂಬರ್ ಗೆ ಬಂದಿದೆ. ತುರ್ತಾಗಿ ಅದನ್ನು ಕಳುಹಿಸಿಕೊಡುವಂತೆ ಭಿನ್ನವಿಸಿಕೊಳ್ಳುತ್ತಾರೆ.

ಅರೆಕ್ಷಣವೂ ಅಲೋಚಿಸದೇ ನೀವೇನಾದರೂ ಓಟಿಪಿ ಕಳುಹಿಸಿದರೆ ನಿಮ್ಮ ವಾಟ್ಸಾಪ್ ಖಾತೆ ಅವರ ಸ್ವಾಧಿನಕ್ಕೆ ಹೋಗುತ್ತದೆ. ಮಾತ್ರವಲ್ಲದೆ ಅಕೌಂಟ್ ಲಾಕ್ ಆಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.   ಓಟಿಪಿಯು ಸಿಕ್ಕಿದ ಕೂಡಲೇ ಹ್ಯಾಕರ್ ಅದನ್ನು ದುರ್ಬಳಕೆ ಮಾಡಿಕೊಂಡು ನಿಮ್ಮೆಲ್ಲಾ ಖಾಸಗಿ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾನೆ. ಮಾತ್ರವಲ್ಲದೆ ಓಟಿಪಿ ಟ್ರಿಕ್ ಬಳಸಿಕೊಂಡು ನಿಮ್ಮ ನಂಬರ್ ನಿಂದ, ನಿಮ್ಮ ಸ್ನೇಹಿತರಿಗೂ ಮೆಸೇಜ್ ಕಳುಹಿಸಿ ಸ್ಕ್ಯಾಮ್ ಮಾಡಲು ಆರಂಭಿಸುತ್ತಾರೆ. ಹಣ ವರ್ಗಾವಣೆ ಮಾಡುವಂತೆ ಕೋರಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮಾತ್ರವಲ್ಲದೆ ಪೋಟೋಗಳು, ವಿಡಿಯೋಗಳು, ಕಾಂಟ್ಯಾಕ್ಟ್ ಗಳು , ಪಿನ್ ನಂಬರ್ ಗಳು ಎಲ್ಲವೂ ಸ್ಕ್ಯಾಮರ್ ಗಳ ಪಾಲಾಗುತ್ತದೆ.

ಎಚ್ಚರ ವಹಿಸಿ: ಪ್ರಸ್ತುತ ವಾಟ್ಸಾಪ್ ನಿಯಮದ ಪ್ರಕಾರ ಒಂದು ವಾಟ್ಸಾಪ್ ನಂಬರ್ ನಿಂದ, ಒಂದೇ ಡಿವೈಸ್ ನಲ್ಲಿ ಮಾತ್ರ ಲಾಗಿನ್ ಆಗಬಹುದು. (ವೆಬ್ ಹೊರತುಪಡಿಸಿ) ಹೀಗಾಗಿ ಸ್ಕ್ಯಾಮರ್ ಗಳಿಗೆ ಓಟಿಪಿ ಕಳುಹಿಸಿದ ತಕ್ಷಣ ನಿಮ್ಮ ಡಿವೈಸ್ ಮೊದಲು ಲಾಕ್ ಆಗುತ್ತದೆ.

ಇದರಿಂದ ಪಾರಾಗುವ ಬಗೆ ಹೇಗೆ: ಪ್ರಮುಖವಾಗಿ ನೀವೇ ಸ್ವತಃ ವೇರಿಫಿಕೇಶನ್ ಮಾಡದ ಹೊರತು, ವಾಟ್ಸಾಪ್ ನಿಮಗೆ ಓಟಿಪಿ ಕಳುಹಿಸುವುದಿಲ್ಲ ಎಂಬ ಅಂಶವನ್ನು ನೆನಪಿನಲ್ಲಿಡಬೇಕು. ಒಂದು ವೇಳೆ ಹ್ಯಾಕರ್ ಗಳು ಅಥವಾ ನಿಮ್ಮ ಸ್ನೇಹಿತರೇ ಓಟಿಪಿ ಸಂಖ್ಯೆಯನ್ನು ಕೇಳಿದರೂ, ಅದನ್ನು ನಿರ್ಲಕ್ಷಿಸಿ, ಅದಕ್ಕೆ ಪ್ರತಿಕ್ರಿಯೆ ನೀಡದಿರುವುದು ಸೂಕ್ತ. ಒಟಿಪಿ ಎನ್ನುವಂಥದ್ದು ಅತ್ಯಂತ ಗೌಪ್ಯವಾದ ಮಾಹಿತಿ. ಇನ್ನೊಬ್ಬರಿಗೆ ಅದನ್ನು ಹಂಚದಿರುವುದೇ, ಅತ್ಯಮೂಲ್ಯ ಮಾಹಿತಿಯ ಸೋರಿಕೆಯಾಗದಂತೆ ನಾವು ಮಾಡಬಹುದಾದ ಪ್ರಮುಖ ಕಾರ್ಯ.

ಇದರ ಹೊರತಾಗಿ ವಾಟ್ಸಾಪ್ ನಲ್ಲಿ  ‘To step verification’  ಎಂಬ ಫೀಚರ್ ಅನ್ನು ಕಾಣಬಹುದು. ಅಕೌಂಟ್  ಸೆಟ್ಟಿಂಗ್ಸ್ ನಲ್ಲಿ ಈ ಆಯ್ಕೆಯಿದ್ದು  ಪಿನ್ ನಂಬರ್ ಹಾಗೂ ಇಮೇಲ್ ವಿಳಾಸವನ್ನು ನಮೂದಿಸಿ, ಆ ಮೂಲಕ  ಹ್ಯಾಕರ್ ಗಳು  OTP ಪಡೆದರೂ  ಲಾಗಿನ್ ಆಗಲು ಅವಕಾಶವಿರದಂತೆ ಮಾಡಬಹುದು.

 

-ಮಿಥುನ್ ಮೊಗೇರ

ಟಾಪ್ ನ್ಯೂಸ್

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.