ಅನಿವಾಸಿ ಭಾರತೀಯರಿಗೆ ವಿದ್ಯುನ್ಮಾನ ಮತ ಅವಕಾಶ
ಚುನಾವಣ ಆಯೋಗದಿಂದ ಕೇಂದ್ರಕ್ಕೆ ಪತ್ರ
Team Udayavani, Dec 2, 2020, 6:15 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮುಂದಿನ ಎಪ್ರಿಲ್- ಮೇನಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿರುವಂತೆಯೇ ಚುನಾವಣ ಆಯೋಗ ಅರ್ಹ ಅನಿವಾಸಿ ಭಾರತೀಯರಿಗೆ ವಿದ್ಯುನ್ಮಾನ ಅಂಚೆ ಮತ ವ್ಯವಸ್ಥೆ (ಇಟಿಪಿ ಬಿಎಸ್) ನೀಡುವ ಬಗ್ಗೆ ಪ್ರಸ್ತಾವ ಮಾಡಿದೆ.
ನ.27ರಂದು ಕೇಂದ್ರ ಸರಕಾರದ ಕಾನೂನು ಸಚಿವಾಲಯದ ಶಾಸಕಾಂಗ ವಿಭಾಗದ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಈ ಅಂಶವನ್ನು ಪ್ರಸ್ತಾವ ಮಾಡಲಾಗಿದೆ. ಆಡಳಿತಾ ತ್ಮಕವಾಗಿ ಮತ್ತು ತಾಂತ್ರಿಕವಾಗಿ ವಿದ್ಯುನ್ಮಾನ ಚಾಲಿತ ಅಂಚೆ ಮತ ವ್ಯವಸ್ಥೆ ನೀಡಲು ಆಯೋಗ ಸಿದ್ಧವಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಹಲ ವಾರು ಭಾರತೀಯರೂ ಈ ವ್ಯವಸ್ಥೆ ಜಾರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮತ ಚಲಾವಣೆಗಾಗಿಯೇ ದೇಶಕ್ಕೆ ಬರು ವುದು ದುಬಾರಿಯಾಗುವುದರಿಂದ ಅಂಚೆ ಮತ ವ್ಯವಸ್ಥೆ ಮೂಲಕ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿಕೆ ಸಲ್ಲಿಕೆಯಾಗಿದೆ. ಮಾಹಿತಿಗಳ ಪ್ರಕಾರ 10 ಸಾವಿರದಿಂದ 12 ಸಾವಿರ ಮಂದಿ ಹಿಂದಿನ ಚುನಾವಣೆಗಳ ಅವಧಿಯಲ್ಲಿ ಅಂಚೆ ಮತ ವ್ಯವಸ್ಥೆ ಬಳಕೆ ಮಾಡಿಕೊಂಡಿದ್ದಾರೆ.
ಇಟಿಬಿಎಸ್ ಎಂದರೇನು?
ವಿದೇಶಗಳಲ್ಲಿರುವ ಭಾರತ ಮೂಲದ ವ್ಯಕ್ತಿಗೆ ಅಂಚೆ ಮತಪತ್ರವನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಕಳುಹಿಸಲಾಗುತ್ತದೆ.
ಅದನ್ನು ಡೌನ್‌ಲೋಡ್ ಮಾಡಿ ಕೊಂಡು ಮತ ಚಲಾಯಿಸಿದ ಬಳಿಕ ವಿಶೇಷ ರೀತಿಯ ಲಕೋಟೆಯಲ್ಲಿ ಅದನ್ನು ಹಾಕಿ ಸಂಬಂಧಿಸಿದ ಮತ ಕ್ಷೇತ್ರದ ಚುನಾವಣಧಿಕಾರಿಗೆ ಎಣಿಕೆಯ ದಿನ ಬೆಳಗ್ಗೆ 8 ಗಂಟೆ ಮೊದಲು ಕಳುಹಿಸಿಕೊಡಬೇಕು.
2016ರ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಸುವ ನಿಯಮಗಳ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಅದನ್ನು ಜಾರಿಗೊಳಿಸಲಾಗಿತ್ತು.
ಇತರ ದೇಶಗಳಲ್ಲಿರುವ ಮತದಾರರು ನಿಗದಿತ ಮತಕ್ಷೇತ್ರದ ಅಧಿಕಾರಿಗೆ ಹಕ್ಕು ಚಲಾಯಿಸುವ ಬಗ್ಗೆ ಮೊದಲೇ ಕೋರಿಕೆ ಸಲ್ಲಿಸಬೇಕು. ಅವರು ಅದನ್ನು ಪರಿಶೀಲಿಸಿ ವಿದ್ಯುನ್ಮಾನ ಮಾಧ್ಯಮದ ಮೂಲಕ ಮತಪತ್ರ ಕಳುಹಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.