ಶಿಡ್ಲಘಟ್ಟ ತಾಲೂಕಿಗೆ ಹರಿದ ಎಚ್‌ಎನ್ ವ್ಯಾಲಿ ನೀರು
30 ವರ್ಷಗಳ ಹೋರಾಟದಕನಸು ನನಸು , ಗಂಗಾ ಪೂಜೆ, ನಾಗರಿಕರ ಸಂತಸ
Team Udayavani, Dec 2, 2020, 1:16 PM IST
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕು ಸಹಿತ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳು ಸಹಿತ ಎಲ್ಲಾ ಜಾತಿ ಧರ್ಮಗಳ ಜನರು ಸುಮಾರು 30 ವರ್ಷಗಳಿಂದ ನಡೆಸಿದ ಹೋರಾಟದ ಫಲದಿಂದಾಗಿ ಕೊನೆಗೂ ಬೆಂಗಳೂರಿನ ಹೆಬ್ಟಾಳ ಮತ್ತು ನಾಗವಾರ ಕೆರೆಗಳ ಶುದ್ಧೀಕರಿಸಿದ ಎಚ್.ಎನ್.ವ್ಯಾಲಿ ನೀರು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿಗೆ ಹರಿದಿದೆ.
ನೀರಾವರಿ ತಜ್ಞ ದಿ.ಡಾ.ಜಿ.ಎಸ್.ಪರಮಶಿವಯ್ಯ ವರದಿ ಆಧರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಾಗಿ ಅನೇಕ ಹೋರಾಟಗಾರರು ವಿಭಿನ್ನ ರೀತಿಯಲ್ಲಿ ಹೋರಾಟನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದಿದ್ದರು.
ಅಬ್ಲೂಡುಕೆರೆಗೆಕೊನೆಗೂ ನೀರು: ಜಿಲ್ಲಾಕೇಂದ್ರದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಯೊಂದು ತಾಲೂಕುಗಳಿಂದ ಬೈಕ್ ರ್ಯಾಲಿ-ಸಹಸ್ರಾರು ಜನ ಕಾಲ್ನಡಿಗೆ ಜಾಥಾ ನಡೆಸಿ ಹೋರಾಟ ಚುರುಕುಗೊಳಿಸಿದ್ದರು. ಆದರೆ30 ವರ್ಷಗಳ ಹೋರಾಟ ಬಳಿಕ ಡಾ.ಜಿ.ಎಸ್.ಪರಮಶಿವಯ್ಯ ನೀಡಿರುವ ವರದಿ ಆಧರಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಂಡಿಲ್ಲ. ಆದರೆ ಎಚ್.ಎನ್. ವ್ಯಾಲಿ ಯೋಜನೆ ಮೂಲಕ ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ಕೆರೆಗೆ ಕೊನೆಗೂ ನೀರು ಹರಿದಿದೆ.
ಕೆರೆ ತುಂಬಿದ ಬಳಿಕ ಅಮಾನಿಕೆರೆಗೆ ನೀರು: ಜಿಲ್ಲೆಯ ಅಬ್ಲೂಡು ಕೆರೆಯು 84.53 ಎಕರೆ ಪ್ರದೇಶ ಹೊಂದಿದ್ದು, 34.22 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಈ ಕೆರೆಯಲ್ಲಿ 51.31 ಎಂಸಿಎಫ್‌ಟಿ ನೀರು ಶೇಖರಣೆ ಆಗುವ ಸಾಮರ್ಥ್ಯ ಹೊಂದಿದ್ದು, ಈ ಕೆರೆ ತುಂಬಿದ ಬಳಿಕ ಶಿಡ್ಲಘಟ್ಟದ ಅಮಾನಿಕೆರೆಗೆ ನೀರು ಹರಿಯಲಿದೆ ಎಂದು ತಿಳಿದು ಬಂದಿದೆ.
ಸಿಹಿ ಹಂಚಿ ಸಂಭ್ರಮ: ಅನೇಕ ಮಹನೀಯರು ಹೋರಾಟದಿಂದ ಎಚ್.ಎನ್. ವ್ಯಾಲಿ ನೀರು ಶಿಡ್ಲಘಟ್ಟ ತಾಲೂಕಿಗೆ ಹರಿದ ಹಿನ್ನೆಲೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ)ರಾಜ್ಯ ಪ್ರಧಾನ ಕಾರ್ಯದರ್ಶಿ ಹಳ್ಳಿ ಭೈರೇಗೌಡಅವರ ನೇತೃತ್ವದಲ್ಲಿ ನೂರಾರು ರೈತರು ನೀರು ಹರಿಯುತ್ತಿರುವ ಗಡಿ ಪ್ರದೇಶದಲ್ಲಿ ಗಂಗೆ ಪೂಜೆ ನೆರವೇ ರಿಸಿ ಸಿಹಿ ಹಂಚುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ (ಬಂಗಾರಪ್ಪ), ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮುನಿವೆಂಕಟಸ್ವಾಮಿ, ತೋಪಡ ರಾಮಚಂದ್ರ, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರಾಮಕೃಷ್ಣಪ್ಪ, ಗುಡಿಹಳ್ಳಿಕೆಂಪಣ್ಣ, ಮೂರ್ತಿ, ವೇಣುಗೋಪಾಲ್, ವೀರಾಪುರ ಮುನಿನಂಜಪ್ಪ ಹೋಟೆಲ್ ಚಂದ್ರ,ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ರಾಮಾಂಜಿನೇಯ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಯೋಗೇಶ್ವರ್ ನನ್ನು ಮಂತ್ರಿ ಮಾಡಲು ಸಿಎಂಗೆ ಆತುರ ಯಾಕೆ? ವಿಶ್ವನಾಥ್ ಪ್ರಶ್ನೆ
ಪಕ್ಷಾತೀತ ಹೋರಾಟಕ್ಕೆಸಂದ ಫಲ : ಜಿಲ್ಲೆಗೆ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ನೀಡಿರುವ ವರದಿ ಆಧರಿಸಿ ಶಾಶ್ವತ ನೀರಾವರಿ ಜಾರಿಗೊಳಿಸಲು ದಿ.ಜೆ.ವೆಂಕಟಪ್ಪ, ಮುಳಬಾಗಿಲು ವೆಂಕಟರಾಮಯ್ಯ, ಬಾಗೇಪಲ್ಲಿ ಮಾಜಿ ಶಾಸಕಜಿ.ವಿ.ಶ್ರೀರಾಮರೆಡ್ಡಿ, ದಿ.ಸಾದಲಿ ಜಯಪ್ರಕಾಶ್, ದಿ.ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಹಾಗೂ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಮಳ್ಳೂರು ಹರೀಶ್, ರೈತ ಸಂಘದ ಭಕ್ತರಹಳ್ಳಿ ಭೈರೇಗೌಡ, ಸಹಿತ ವಿವಿಧ ಸಂಘಟನೆಗಳು, ವಿವಿಧ ಪಕ್ಷಗಳ ಮುಖಂಡರು,ಕಾರ್ಯಕರ್ತರು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಹೋರಾಟ ನಡೆಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.
ಎತ್ತಿನಹೊಳೆ, ಕೃಷ್ಣ ನದಿ ನೀರು ಹರಿಸಲು ಒತ್ತಾಯ :
ರೈತ ಸಂಘದ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಮತ್ತು ಅನೇಕ ಹೋರಾಟಗಾರರ ವಿಭಿನ್ನ ಹೋರಾಟಗಳಿಂದ ಪ್ರಥಮ ಹಂತದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಮತ್ತು ಇದೀಗ ಶಿಡ್ಲಘಟ್ಟ ತಾಲೂಕಿನಕೆರೆಗಳಿಗೆ ಎಚ್.ಎನ್.ವ್ಯಾಲಿಯ ನೀರು ಹರಿದಿದ್ದು,ಅದಕ್ಕಾಗಿ ಸರ್ಕಾರಕ್ಕೆಕೃತಜ್ಞತೆ ಸಲ್ಲಿಸಿ ಜಿಲ್ಲೆಗೆ ಎತ್ತಿನಹೊಳೆ ಮತ್ತುಕೃಷ್ಣ ನದಿ ನೀರು ಹರಿಸುವ ಮೂಲಕ ರೈತರು ಮತ್ತು ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರ ಸಂತಸ : ಶಿಡ್ಲಘಟ್ಟ ತಾಲೂಕಿನಲ್ಲಿ ಹೆಚ್.ಎನ್.ವ್ಯಾಲಿ ಯೋಜನೆಯ ಮೂಲಕ ನೀರು ಹರಿದಿದ್ದರಿಂದ ಸಂತಸಗೊಂಡ ರೈತರು ಹಾಗೂ ಗ್ರಾಮಸ್ಥರಮನದಲ್ಲಿ ಸಂತಸ ಮನೆ ಮಾಡಿತ್ತು. ಯುವಕರು ಮತ್ತು ಬಾಲಕರುಕೆರೆಯ ನೀರಿನಲ್ಲಿಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಒಟ್ಟಾರೆ ನೀರು ಬಂದಿದ್ದರಿಂದ ಹಬ್ಬದ ವಾತಾವರಣ ಕಂಡುಬಂದಿತ್ತು.
– ತಮೀಮ್ ಪಾಷ, ಎಂ.ಎ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.