ಖಾಸಗಿ ಶಾಲೆ 32 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯತ್ತ
ಪಾಲಕರ ಮನ ಮೆಚ್ಚಿಸಿದ ಮನಗುಂಡಿ ಶಾಲೆ ,ಶಿಕ್ಷಕರು-ಎಸ್‌ಡಿಎಂಸಿ ಪರಿಶ್ರಮಕ್ಕೆ ಸಂದ ಫಲ
Team Udayavani, Dec 3, 2020, 1:51 PM IST
ಧಾರವಾಡ: ಶಹರದ ಖಾಸಗಿ ಶಾಲೆಗಳಿಗೆ ತೆರಳುತ್ತಿದ್ದ ಗ್ರಾಮದ ಮಕ್ಕಳನ್ನು ತನ್ನತ್ತ ಸೆಳೆಯುವಲ್ಲಿ ತಾಲೂಕಿನ ಮನಗುಂಡಿಯ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಶಸ್ವಿಯಾಗಿದೆ.
ಕೆಸರುಗದ್ದೆಯಂತಾದ ಆವರಣ, ಶಿಥಿಲಾವಸ್ಥೆಯಲ್ಲಿದ್ದ ನಲಿ-ಕಲಿ ಕೊಠಡಿಗಳು ಹೊಸ ರೂಪ ಪಡೆದುಕೊಂಡಿದ್ದು, ಧಾರವಾಡದತ್ತ ಆಂಗ್ಲ ಮಾಧ್ಯಮಕ್ಕೆ ಮುಖ ಮಾಡಿದ್ದ ಮಕ್ಕಳು ಮರಳಿ ಗ್ರಾಮದ ಶಾಲೆಯ ಕನ್ನಡ ಮಾಧ್ಯಮಕ್ಕೆ ಮರಳಿದ್ದಾರೆ.
ಮಕ್ಕಳನ್ನು ಆಕರ್ಷಿಸಲು ವಿಶಿಷ್ಟ ಹೆಜ್ಜೆ ಇಟ್ಟಿರುವ ಶಾಲೆ ಆಡಳಿತ ಮಂಡಳಿ, ರೈಲು ಬೋಗಿಯಂತೆ ಕಾಣುವ ವಿನ್ಯಾಸವನ್ನು ಕೊಠಡಿಗಳ ಹೊರಾಂಗಣಕ್ಕೆ ರೂಪಿಸಿ ಗಮನ ಸೆಳೆದಿದೆ. ಗೋಡೆಗಳಿಗೆ ರೈಲು ಬೋಗಿಗಳಂತೆ ನೀಲಿ ಬಣ್ಣ ಬಳಿಯಲಾಗಿದೆ. ಕೊಠಡಿಯ ಬಾಗಿಲಲ್ಲಿ ನಿಂತು ಇಣುಕಿದರೆ ರೈಲು ಬೋಗಿಯಿಂದ ಇಣುಕಿದಂತೆಯೇ ಕಾಣುತ್ತದೆ. ನಲಿ-ಕಲಿ ವಿಭಾಗದ ಐದು ಕೊಠಡಿಗಳಿಗೆ ರೈಲಿನಂತೆ ವಿನ್ಯಾಸ ಮಾಡಲಾಗಿದೆ.
ಹಳೇ ವಿದ್ಯಾರ್ಥಿಗಳ ಸಹಕಾರ: ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ 15 ಸಾವಿರ ವೆಚ್ಚದಲ್ಲಿ ಕೊಠಡಿಗಳಿಗೆರೈಲಿನ ರೂಪ ನೀಡಲಾಗಿದೆ. ಶಾಲೆ ದುರಸ್ತಿ ಕಾರ್ಯದೊಂದಿಗೆ ಈ ಕಾರ್ಯವನ್ನೂ ಮಾಡಲಾಗಿದೆ.ಕೆಸರಿನ ಗದ್ದೆಯಾಗಿದ್ದ ಶಾಲೆ ಆವರಣವನ್ನು ಸುಸಜ್ಜಿತ ಮಾಡಲಾಗಿದೆ. ಶಾಲೆಯ ಪೂರಕ ಚಟುವಟಿಕೆಗೆಬೇಕಾದ ವಸ್ತುಗಳನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳ ಮೂಲಕ ಪಡೆದಿದ್ದಾರೆ. ಶಾಲೆಯಲ್ಲಿ ಒಟ್ಟು 402 ವಿದ್ಯಾರ್ಥಿಗಳಿದ್ದು, ನಲಿ-ಕಲಿ ವಿಭಾಗದಲ್ಲಿ 186 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಶಿಕ್ಷಕರು, ಎಸ್‌ಡಿಎಂಸಿ, ಪಾಲಕರು, ಸ್ಥಳೀಯ ಶಿಕ್ಷಣ ಪ್ರೇಮಿಗಳು ಕೈಜೋಡಿಸಿದ್ದಾರೆ.
ಇದನ್ನೂ ಓದಿ : ಸಚಿವರಾಗುವ ಆಸೆ ಆಕಾಂಕ್ಷೆ ಎಲ್ಲರಿಗೂ ಇರುತ್ತೆ, ಆದರೆ.. ವಿಶ್ವನಾಥ್ ಗೆ ಸವದಿ ಕಿವಿಮಾತು
ಮಕ್ಕಳಿಗೆ ಬೇಕಾದ ಸೌಲಭ್ಯ ಕಲ್ಪಿಸಿ ಅವರನ್ನು ಕಲಿಕೆಯಲ್ಲಿ ತೊಡಗಿಸಬೇಕೆಂಬಉದ್ದೇಶದಿಂದ ಈ ವಿನೂತನ ಪ್ರಯೋಗ ಮಾಡಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ. ಇದರಿಂದ ಶಾಲೆಯ ಸಮಗ್ರ ಪಗತಿಯೊಂದಿಗೆ ಮಕ್ಕಳದಾಖಲಾತಿಯೂ ಹೆಚ್ಚಾಗಿದೆ. – ಶಾರದಾ ಜಯರಾಮನವರ, ಮುಖ್ಯ ಶಿಕ್ಷಕಿ, ಮನಗುಂಡಿ
ಮಕ್ಕಳನ್ನು ಆಕರ್ಷಿಸಲು ರೈಲು ಎಂಜಿನ್ ಮತ್ತು ಡಬ್ಬಿಗಳ ತರಹ ಚಿತ್ರ ಬಿಡಿಸಿದ್ದೇವೆ. ಧಾರವಾಡದ ಖಾಸಗಿ ಶಾಲೆಗೆ ಹೋಗುತ್ತಿದ್ದ 32 ಮಕ್ಕಳು ಶಾಲೆಯ ವಿವಿಧ ತರಗತಿಯಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶ ಪಡೆದಿದ್ದು, ನಮ್ಮ ಪ್ರಯತ್ನಕ್ಕೆ ಸ್ಪಂದನೆ ಲಭಿಸಿದೆ. ಶಾಲೆ ವಂಚಿತ ಮಕ್ಕಳನ್ನೂ ಶಾಲೆಯತ್ತ ಸೆಳೆಯಲೂ ಪ್ರಯತ್ನಿಸಿದ್ದೇವೆ. – ನಿಂಗಪ್ಪ ಹಡಪದ, ಅಧ್ಯಕ್ಷ, ಎಸ್‌ಡಿಎಂಸಿ, ಮನಗುಂಡಿ
–ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.