ಭೂಸ್ವಾಧೀನ ಪ್ರಕ್ರಿಯೆಗೆ ವೇಗದ ಸ್ಪರ್ಶ

|ಮುನಿರಾಬಾದ್‌-ಮೆಹಬೂಬನಗರ ರೈಲ್ವೆ ಯೋಜನೆ |ರೈಲು ಮುಖವನ್ನೇ ನೋಡದ ಜನರಲ್ಲಿ ಮಂದಹಾಸ

Team Udayavani, Dec 3, 2020, 3:22 PM IST

ಭೂಸ್ವಾಧೀನ ಪ್ರಕ್ರಿಯೆಗೆ ವೇಗದ ಸ್ಪರ್ಶ

ಸಿಂಧನೂರು: ಸ್ವಾತಂತ್ರ್ಯ ಪೂರ್ವದಿಂದ ಈವರೆಗೂ ರೈಲು ಮುಖವನ್ನೇ ನೋಡದ ತಾಲೂಕುಗಳಲ್ಲಿ ಚುಕುಬುಕು ಸದ್ದು ಕೇಳುವ ಕಾಲ ಸನ್ನಿಹಿತವಾಗಿದೆ. ಇನ್ನೆರಡು ಕಡೆಗಳಲ್ಲಿ ಭೂ ಸ್ವಾಧೀನ ಪೂರ್ಣಗೊಂಡರೆ, ಬಹುದಿನಗಳ ಕನಸು ನನಸಾಗಲಿದೆ.

ಬಹುನಿರೀಕ್ಷೆಯ ಮುನಿರಾಬಾದ್‌ -ಮಹೆಬೂಬನಗರ ರೈಲ್ವೆ ಮಾರ್ಗ ಯೋಜನೆ ಕೊನೆಗಳಿಗೆಯಲ್ಲಿ ವೇಗ ಪಡೆದುಕೊಂಡಿದೆ. 2001ರಿಂದಲೇ ಆರಂಭಗೊಂಡ ಯೋಜನೆಅನುಷ್ಠಾನ ಪ್ರಕ್ರಿಯೆ ವಿವಿಧ ತೊಡಕುಗಳಬಳಿಕ (19 ವರ್ಷಗಳ ನಂತರ) ವೇಗ ಪಡೆದಿದೆ. ಒಂದೆಡೆ ರೈಲ್ವೆ ಹಳಿ ನಿರ್ಮಾಣ,ಮತ್ತೂಂದೆಡೆ ಭೂಸ್ವಾಧೀನ ಕೆಲಸವನ್ನುಚುರುಕುಗೊಳಿಸಿರುವುದರಿಂದ ರೈಲು ಓಡಿಸುವ ಯೋಜನೆ ಅಂತಿಮ ಸ್ವರೂಪ ಪಡೆದಿದೆ.

ಏನಿದು ಯೋಜನೆ?: ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಿಂದ ಆರಂಭವಾಗುವ 165 ಕಿ.ಮೀ. ಉದ್ದದ ರೈಲ್ವೆ ಮಾರ್ಗ ಆಂಧ್ರಪ್ರದೇಶದ ಮಹೆಬೂಬ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕಾಗಿ 2,112.19 ಎಕರೆ ಜಮೀನು ಭೂಸ್ವಾಧೀನವಾಗಬೇಕಿತ್ತು. 1007.28 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು ಪರಿಹಾರ ವಿತರಿಸಲಾಗಿದೆ. ಬಾಕಿ 1,004.28 ಎಕರೆಗೆ ಸಂಬಂಧಿಸಿ ವಿವಿಧ ಹಂತದ ಅಧಿಸೂಚನೆಗಳು ಪ್ರಕಟವಾಗಿ ರೈತರಿಗೆ ಪರಿಹಾರ ನೀಡಲಾಗುತ್ತಿದೆ. ಆರಂಭದ ಪಾಯಿಂಟ್‌ನಿಂದ ಕಾರಟಗಿವರೆಗೆ ಹಳಿ ನಿರ್ಮಿಸಿ ಹುಬ್ಬಳ್ಳಿ-ಗಂಗಾವತಿವರೆಗೆ ಈಗಾಗಲೇ ರೈಲು ಓಡಿಸಲಾಗಿದೆ. ಕಾರಟಗಿ  ಭಾಗದಲ್ಲಿ ಮಾರ್ಗ ನಿರ್ಮಾಣ ಕಾಮಗಾರಿ 8 ಕಿ.ಮೀ.ನಷ್ಟು ಚಾಲ್ತಿಯಲ್ಲಿದೆ. ಸಿಂಧನೂರು ತಾಲೂಕಲ್ಲಿ ಸರ್ವೇ ಕಾರ್ಯ ಸಾಗಿದೆ.

ಮಾನ್ವಿ ತಾಲೂಕಿಗೆ ಸಂಬಂಧಿಸಿ ಕಂದಾಯ, ರೈಲ್ವೆ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಜಂಟಿ ಮೋಜಣಿ ಮುಗಿದಿದೆ. ಸಿಂಧನೂರು ಮತ್ತು ಮಾನ್ವಿ ತಾಲೂಕುಗಳಲ್ಲಿ ನನೆಗುದಿಗೆ ಬಿದ್ದ ಕೆಲಸಗಳಿಗೆ ಈಗ ಮೋಕ್ಷ ಕಲ್ಪಿಸಲಾಗಿದೆ. ರಾಯಚೂರು ತಾಲೂಕಿನಲ್ಲಿ 13.06 ಎಕರೆ ಭೂಮಿಯಷ್ಟೇ ವಶಕ್ಕೆ ತೆಗೆದುಕೊಳ್ಳಲು ಪ್ರಸ್ತಾವನೆಯಲ್ಲಿನ ನೂನ್ಯತೆ ಸರಿಪಡಿಸುವ ಕೆಲಸವಾಗಬೇಕಿದೆ.

ವೇಗದ ಸ್ಪರ್ಶ: ಮುಖ್ಯವಾಗಿ ಸಿಂಧನೂರು ತಾಲೂಕಿನ 7 ಗ್ರಾಮ ವ್ಯಾಪ್ತಿಯ 196 ಎಕರೆ ಸ್ವಾಧೀನಕ್ಕೆ ಅಂತಿಮ ಐತೀಪುì ಪ್ರಕಟಿಸಲಾಗಿದ್ದು, ಭೂ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.  ಶಾಂತಿನಗರ-ಗೋರೆಬಾಳ ಭಾಗದಲ್ಲಿ 2.08 ಕೋಟಿ ರೂ., ರೌಡಕುಂದಾ ಭಾಗದಲ್ಲಿ 1.17ಕೋಟಿ ರೂ., ಸಾಸಲಮರಿ ಗ್ರಾಮದವರಿಗೆ 3.08 ಕೋಟಿ ರೂ., ಹೊಸಳ್ಳಿ ಭಾಗದ ರೈತರಿಗೆ 2.12 ಕೋಟಿ ರೂ.ಗಳನ್ನು ಪರಿಹಾರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ.

ಇದನ್ನೂ ಓದಿ : ನಟಿ ಭಾರತಿ ಸಿಂಗ್ ಬೇಲ್ ಗೆ ನೆರವು: ಇಬ್ಬರು ಎನ್ ಸಿಬಿ ಅಧಿಕಾರಿಗಳು ಅಮಾನತು!

ಸಿಂಧನೂರು ಭಾಗದ ಬಾಕಿ 146.06 ಎಕರೆ ಭೂಸ್ವಾಧೀನಕ್ಕೆ ಅಂತಿಮ ತೀರ್ಪಿಗೆ ಸಿದ್ಧತೆ ನಡೆದಿದ್ದು, ಇಲ್ಲಿನ ರೈತರಿಗೆ 55.91 ಕೋಟಿ ರೂ. ಪರಿಹಾರ ನೀಡಲು ಗುರುತಿಸಲಾಗಿದೆ. ಮಾನ್ವಿ ತಾಲೂಕಿನಲ್ಲಿ ಈ ಕೆಲಸ ಪೂರ್ಣಗೊಂಡರೆ, ಭೂಸ್ವಾಧೀನ ಕೆಲಸವೇ ಕೊನೆಗೊಳ್ಳಲಿದೆ. ಈ ಎರಡು ತಾಲೂಕಿನಲ್ಲಿ 98 ಕಿ.ಮೀ.ನಷ್ಟು ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಮುಗಿದು ಬಿಟ್ಟರೆ, ರೈಲು ಓಡಿಸುವುದಕ್ಕೆ ಮುಹೂರ್ತ ನಿಗದಿಪಡಿಸುವುದಷ್ಟೇ ಬಾಕಿ ಉಳಿಯಲಿದೆ.

18 ಪ್ಲಸ್‌ 80 ಗುರಿ : ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ ರಾಯಚೂರಿಗೆ ರೈಲು ಓಡಾಟ ಆರಂಭಗೊಳ್ಳಲು ಕಾರಟಗಿ ಸಮೀಪ 18 ಕಿ.ಮೀ, ಸಿಂಧನೂರು-ಮಾನ್ವಿ ಒಳಗೊಂಡು 80 ಕಿ.ಮೀ. ಉದ್ದದಷ್ಟು ರೈಲ್ವೆ ನಿರ್ಮಾಣ ಕೆಲಸವಾಗಬೇಕಿದೆ. ಅಧಿಕಾರಿಗಳು ಈಗಾಗಲೇ ಸಿಂಧನೂರು ಗಡಿಭಾಗದವರೆಗೂ ಕಾಮಗಾರಿಯನ್ನು ಮುಂದುವರಿಸಿದ್ದು, ಇದೇ ವೇಗ ಕಾಯ್ದುಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ.

ಕಾರಟಗಿ-ಸಿಂಧನೂರುವರೆಗೆ 18 ಕಿ.ಮೀ. ವರೆಗೆ ಹಳಿ ನಿರ್ಮಾಣ ನಡೆದಿದೆ. ಸಿಂಧನೂರು-ರಾಯಚೂರುವರೆಗೆ 80 ಕಿ.ಮೀ. ಕಾಮಗಾರಿ ಮುಗಿದರೆ, ಯೋಜನೆಯ ಎಲ್ಲ ಕೆಲಸ ಪೂರ್ಣಗೊಂಡಂತಾಗಲಿದೆ. ಸದ್ಯ ಯಾವುದೇ ಬಿಲ್‌ ಬಾಕಿಯಿಲ್ಲ.  –ಉಮಾಮಹೇಶ್ವರ್‌,ಎಇಇ, ನೈರುತ್ಯ ರೈಲ್ವೆ ಇಲಾಖೆ

 

-ಯಮನಪ್ಪ ಪವಾರ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maski: ಮೂತ್ರ ವಿಸರ್ಜನೆಗೆ ಶಾಲಾ‌ ಹಳೇ ಕೊಠಡಿಯೇ ಗತಿ-ಕ್ಯಾರೆ ಎನ್ನದ ಅಧಿಕಾರಿಗಳು

Maski: ಮೂತ್ರ ವಿಸರ್ಜನೆಗೆ ಶಾಲಾ‌ ಹಳೇ ಕೊಠಡಿಯೇ ಗತಿ-ಕ್ಯಾರೆ ಎನ್ನದ ಅಧಿಕಾರಿಗಳು

3-raichur

Raichur: ಚಿತ್ರಾನ್ನ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

Mantralya-Shree

Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ

Manvi: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾ*ಚಾರ

Manvi: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾ*ಚಾರ

Yermarus: Private bus caused end of 150 sheeps

Yermarus: ಖಾಸಗಿ ಬಸ್ ಹರಿದು 150 ಕುರಿಗಳ ಮಾರಣಹೋಮ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.