ಹಳ್ಳಿ ರಾಜಕೀಯಕ್ಕೆ ಸಜ್ಜಾದ ದೊಡ್ಡಬಳ್ಳಾಪುರ ರಣಾಂಗಣ
26 ಗ್ರಾಪಂಗಳಿಗೆ ಮಾತ್ರ ಚುನಾವಣೆ , ಡಿ.27ರಂದು ಮತದಾನ, 30ರಂದು ಫಲಿತಾಂಶ , 490 ಸ್ಥಾನಗಳಿಗೆ ಚುನಾವಣೆ
Team Udayavani, Dec 3, 2020, 6:20 PM IST
ದೊಡ್ಡಬಳ್ಳಾಪುರ: ಡಿ.27ರಂದು ಎರಡನೇ ಹಂತದಲ್ಲಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 29 ಗ್ರಾಮ ಪಂಚಾಯಿತಿಗಳಿದ್ದು, ಈ ಪೈಕಿ ತಾಲೂಕಿನ ಮಜರಾಹೊಸಹಳ್ಳಿ (ಮೇ-2021ಕ್ಕೆ ಕೊನೆ), ಅರಳುಮಲ್ಲಿಗೆ (ಜೂನ್2021ಕ್ಕೆ ಕೊನೆ), ದರ್ಗಾಜೋಗಿಹಳ್ಳಿ (ಮಾರ್ಚ್-2022ಕ್ಕೆ ಕೊನೆ) ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ 26 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.
ಡಿ.27ಕ್ಕೆ ಚುನಾವಣೆ: ಡಿ.11 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಡಿ. 16ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.ಡಿ.17 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು,ಡಿ.19 ರಂದು ಉಮೇದು ವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ಡಿ.27 ರಂದು ಬೆಳಗ್ಗೆ7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನನಡೆಯಲಿದೆ. ಡಿ.30 ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ಮತಎಣಿಕೆ ಕಾರ್ಯ ನಡೆಯಲಿದೆ ಎಂದು ತಹಶೀಲ್ದಾರ್‌ಹಾಗೂ ತಾಲೂಕು ಚುನಾವಣಾ ಅಧಿಕಾರಿ ಟಿ.ಎಸ್. ಶಿವರಾಜ್ ತಿಳಿಸಿದ್ದಾರೆ.
ಹೊಸ ಗ್ರಾಪಂ ಇಲ್ಲ: ಜನ ಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಹೊಸ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ ಪುರಸಭೆ,ನಗರಸಭೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ತಾಲೂಕಿನಲ್ಲಿ ಮಾತ್ರಜನ ಸಂಖ್ಯೆಗೆಅನುಗುಣವಾಗಿಸ್ಥಾನಗಳನ್ನು ಮಾತ್ರ ಹೆಚ್ಚು ಮಾಡಲಾಗಿದೆ. ಹೀಗಾಗಿ ನಗರದಸುತ್ತಲು ಇರುವ ಕೈಗಾರಿಕಾಪ್ರದೇಶದಲ್ಲಿನ ಬಾಶೆಟ್ಟಿಹಳ್ಳಿ,ಕೊಡಿಗೇಹಳ್ಳಿ, ಕಂಟನಕುಂಟೆ, ಅರಳುಮಲ್ಲಿಗೆ ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗುವಅರ್ಹತೆಗಳಿದ್ದರು ಸಹ ಗ್ರಾಮ ಪಂಚಾಯಿತಿಗಳನ್ನಾಗಿಯೇ ಉಳಿಸಲಾಗಿದೆ.
490 ಸ್ಥಾನಗಳಿಗೆ ಚುನಾವಣೆ: ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 47 ಸ್ಥಾನಗಳಿದ್ದು, ತಾಲೂಕಿನಲ್ಲೇ ಅತ್ಯಂತ ಹೆಚ್ಚು ಸ್ಥಾನಗಳನ್ನು ಹೊಂದಿದ್ದು, ಕಾಡನೂರು ಗ್ರಾಮ ಪಂಚಾಯಿತಿಯಲ್ಲಿ ಕೇವಲ8 ಸ್ಥಾನಗಳಿದ್ದು ತಾಲೂಕಿನಲ್ಲೇ ಅತಿ ಕಡಿಮೆ ಸ್ಥಾನಗಳನ್ನು ಹೊಂದಿದೆ. ತಾಲೂಕಿನ 26 ಗ್ರಾಮಪಂಚಾಯಿತಿಗಳನ್ನು 243 ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಸಾಮಾನ್ಯ 241, ಮಹಿಳಾಮೀಸಲು 249 ಸೇರಿ ಒಟ್ಟು 490 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕ್ಷೇತ್ರವಾರು ಸ್ಥಾನಗಳು : ಆರೂಢಿ (9ಕ್ಷೇತ್ರ-18 ಸ್ಥಾನ),ಕಂಟನಕುಂಟೆ (8ಕ್ಷೇತ್ರ-19 ಸ್ಥಾನ), ಕನಸವಾಡಿ (10 ಕ್ಷೇತ್ರ-19 ಸ್ಥಾನ),ಕೆಸ್ತೂರು (8ಕ್ಷೇತ್ರ-17ಸ್ಥಾನ),ಕಾಡನೂರು (5ಕ್ಷೇತ್ರ-8ಸ್ಥಾನ),ಕೊಡಿಗೇಹಳ್ಳಿ (13ಕ್ಷೇತ್ರ-34 ಸ್ಥಾನ), ಚೆನ್ನಾದೇವಿ ಅಗ್ರಹಾರ(7 ಕ್ಷೇತ್ರ-12 ಸ್ಥಾನ), ತಿಪ್ಪೂರು (10ಕ್ಷೇತ್ರ-18 ಸ್ಥಾನ), ತೂಬಗೆರೆ (12ಕ್ಷೇತ್ರ-22 ಸ್ಥಾನ), ದೊಡ್ಡತುಮಕೂರು (6ಕ್ಷೇತ್ರ-12 ಸಾ §ನ), ದೊಡ್ಡಬೆಳವಂಗಲ (7ಕ್ಷೇತ್ರ-18 ಸ್ಥಾನ), ಬಾಶೆಟ್ಟಿಹಳ್ಳಿ (19ಕ್ಷೇತ್ರ-47 ಸ್ಥಾನ), ಭಕ್ತರಹಳ್ಳಿ (9ಕ್ಷೇತ್ರ-15 ಸ್ಥಾನ), ಮೇಲಿನಜೂಗಾನಹಳ್ಳಿ (11ಕ್ಷೇತ್ರ-19 ಸ್ಥಾನ), ಮೇಳೆಕೋಟೆ (11ಕ್ಷೇತ್ರ-20ಸ್ಥಾನ), ರಾಜಘಟ್ಟ (6ಕ್ಷೇತ್ರ-17 ಸ್ಥಾನ),ಸಕ್ಕರೆಗೊಲ್ಲಹಳ್ಳಿ (11ಕ್ಷೇತ್ರ-18 ಸ್ಥಾನ), ಸಾಸಲು (9ಕ್ಷೇತ್ರ-16 ಸ್ಥಾನ), ಹೆಗ್ಗಡಿಹಳ್ಳಿ (9 ಕ್ಷೇತ್ರ-14 ಸ್ಥಾನ), ಹಣಬೆ (11ಕ್ಷೇತ್ರ-20 ಸ್ಥಾನ), ಹಾಡೋನಹಳ್ಳಿ (7ಕ್ಷೇತ್ರ-15 ಸಾ §ನ), ಹಾದ್ರಿಪುರ (6ಕ್ಷೇತ್ರ-14 ಸ್ಥಾನ), ಹುಲಿಕುಂಟೆ (8ಕ್ಷೇತ್ರ-15 ಸ್ಥಾನ), ಹೊನ್ನಾವರ (11 ಕ್ಷೇತ್ರ-17 ಸ್ಥಾನ), ಹೊಸಹಳ್ಳಿ (12ಕ್ಷೇತ್ರ-24 ಸ್ಥಾನ),ಕೊನಘಟ r (8ಕ್ಷೇತ್ರ-22 ಸ್ಥಾನ).
ಗ್ರಾಮ ಪಂಚಾಯ್ತಿಗಳ ಮೀಸಲು ವಿವರ : ಪರಿಶಿಷ್ಟ ಜಾತಿ -54, ಪರಿಶಿಷ್ಟ ಜಾತಿ ಮಹಿಳೆ-69, ಪರಿಶಿಷ್ಟ ಪಂಗಡ -9, ಪರಿಶಿಷ್ಟ ಪಂಗಡ ಮಹಿಳೆ-28, ಹಿಂದುಳಿದ ವರ್ಗ “ಎ’ -23, ಹಿಂದುಳಿದ ವರ್ಗ “ಎ’ ಮಹಿಳೆ-40, ಹಿಂದುಳಿದ ವರ್ಗ “ಬಿ’- 13, ಹಿಂದುಳಿದ ವರ್ಗ “ಬಿ’ಮಹಿಳೆ-4, ಸಾಮಾನ್ಯ-142, ಸಾಮಾನ್ಯ ಮಹಿಳೆ -108.
ಪ್ರಸ್ತುತ ಪರಿಷ್ಕರಣೆಯಾಗಿರುವ ಮತಪಟ್ಟಿಯನ್ವಯ 76,437ಪುರುಷರು, 75,232 ಮಹಿಳೆಯರು ಸೇರಿ 1,51,669 ಮತದಾರರು ಮತ ಚಲಾಯಿಸಲಿದ್ದಾರೆ.ಕಳೆದ ಚುನಾವಣೆಯಲ್ಲಿ 1,46,332 ಮತದಾರರಿದ್ದು, ಈ ಬಾರಿ 5337 ಮತದಾರರು ಹೆಚ್ಚಾಗಿದ್ದಾರೆ.ಚುನಾವಣೆಗಾಗಿ 258 ಮತಗಟ್ಟೆಗಳನ್ನುಸ್ಥಾಪಿಸಲಾಗಿದೆ. – ಕೆ.ಕಿರಣ್‌ಕುಮಾರ್, ಚುನಾವಣಾ ಶಿರಸ್ತೇದಾರ್
– ಡಿ.ಶ್ರೀಕಾಂತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.