ಬೆನ್ನ ಮೇಲಿರುವ ಸುಖದ ಮೂಟೆ ಇಳಿಸಿ ಬದುಕನ್ನು ಸವಿಯೋಣ


Team Udayavani, Dec 4, 2020, 5:45 AM IST

ಬೆನ್ನ ಮೇಲಿರುವ ಸುಖದ ಮೂಟೆ ಇಳಿಸಿ ಬದುಕನ್ನು ಸವಿಯೋಣ

ನಾವೀಗ ಹೊರಟಿರುವುದು ಸುಖದ ಮೂಟೆಯನ್ನು ಬೆನ್ನ ಮೇಲೆ ಹೇರಿಕೊಂಡು ಸುಖವನ್ನು ಹುಡುಕುತ್ತಾ ಎಂದು ಹೇಳಿದ ಯೋಗಿಯೊಬ್ಬ ತನ್ನ ಎದುರಿಗಿದ್ದವನಿಗೆ.

ಇದನ್ನು ಕೇಳಿದ ಎದುರಿನವ ವಿಚಿತ್ರ ವೆಂಬಂತೆ ಯೋಗಿಯತ್ತ ನೋಡಿದ. ದುಃಖದ ಮೂಟೆಯನ್ನು ಹೊತ್ತು ಸುಖವನ್ನು ಹುಡುಕಿಕೊಂಡು ಅಲ್ಲವೇ? ಎಂಬುದು ಅವನ ಆಲೋಚನೆಯಾಗಿತ್ತು.

ಯೋಗಿಗಳು ಶಾಂತವಾಗಿ, ಒಬ್ಬ ವ್ಯಕ್ತಿ ಬಂದಿದ್ದ. ಯಾವುದೋ ದೂರದ ಪೇಟೆ ಯವನು. ನನ್ನನ್ನು ಕಂಡವನೇ ಕಾಲಿಗೆ ಎರಗಿದ. ನಾನು ಕುಶಲ ಸಮಾಚಾರವನ್ನು ಕೇಳಿದೆ. ಅವನ ಮುಖ ಬಾಡಿತ್ತು. ಏನಯ್ನಾ ಸಮಸ್ಯೆ? ಎಂದು ಕೇಳಿದೆ.

ಅದಕ್ಕೆ ಆತ, ಸುಖವೆಂಬುದನ್ನು ನನ್ನ ಬದುಕಿನಲ್ಲಿ ಕಂಡೇ ಇಲ್ಲ. ನನ್ನ ಹಣೆಯಲ್ಲಿ ಬರೆದಿರುವುದು ಇಷ್ಟೇ ಎಂದು ನಿಟ್ಟುಸಿರು ಗೆರೆದ. ಯಾಕೋ ಬೇಸರ ವೆನಿಸಿತು. ಇನ್ನಷ್ಟು ವಿವರ ಕೇಳಿದೆ.

ಅವನು ಸದಾ ಮನೆಯಲ್ಲಿ ಎಲ್ಲರ ಮೇಲೂ ಸಿಡುಕುತ್ತಿದ್ದ. ಅರೆ ಕ್ಷಣವೂ ನೆಮ್ಮದಿಯಿಂದ ಯಾರೊಂದಿಗೂ ಮಾತನಾಡಿದವನಲ್ಲ. ಮನೆಯಲ್ಲಿದ್ದವರಿಗೂ ಒಮ್ಮೊಮ್ಮೆ ಎಲ್ಲಾ ದರೂ ಈತ ದೂರ ಹೋಗಿದ್ದರೆ ಒಳ್ಳೆಯದಿತ್ತು ಎನ್ನಿಸುವ ಹಾಗಿತ್ತು ಪರಿಸ್ಥಿತಿ.

ಒಮ್ಮೆ ಅವನ ಗೆಳೆಯ ಸಿಕ್ಕವನೇ, ಒಂದು ಕೆಲಸ ಮಾಡು, ಹಿಮಾಲಯಕ್ಕೆ ಹೋಗು ನೆಮ್ಮದಿ ಸಿಗುತ್ತದೆ ಎಂದ. ಇದು ಸರಿ ಎನಿ ಸಿತು. ಹಾಗೆಯೇ ಹೇಳದೇ ಕೇಳದೇ ಹೊರಟ ವನು ಮುಟ್ಟಿದ್ದು ಹಿಮಾಲಯಕ್ಕೆ. ಇಲ್ಲಿ ಎಲ್ಲೆಲ್ಲೋ ಸುತ್ತಿ ನನ್ನ ಬಳಿ ಬಂದಿದ್ದ. ಎಲ್ಲವನ್ನೂ ವಿವರಿಸಿದ.

ನನಗೆ ನಗು ಬಂದಿತು. ಅಲ್ಲಯ್ನಾ, ಇಲ್ಲಿ ನೆಮ್ಮದಿ ಸಿಗುತ್ತದೆಂದು ಯಾರು ಹೇಳಿದರು ಎಂದು ಕೇಳಿದೆ. ಅದಕ್ಕೆ ತನ್ನ ಗೆಳೆಯ ಎಂದು ಉತ್ತರಿಸಿದ. ಆಗ ನನ್ನ ನಗು ಹೆಚ್ಚಾಯಿತು. ಸರಿ, ಸ್ವಂತ ಅನುಭವದಿಂದ ನಿನ್ನ ಗೆಳೆಯ ಹೇಳಿದ್ದಾನೆಯೇ ಎಂದು ಪರಿಶೀಲಿಸಿ ದ್ದೀಯಾ ಎಂದು ಕೇಳಿದೆ. ಇಲ್ಲ, ಅವನ ಮಾತು ನಿಜವೆನಿಸಿತು ಬಂದು ಬಿಟ್ಟೆ. ಈಗ ಲಂತೂ ನನಗೆ ನಗು ತಡೆಯಲಾಗಲಿಲ್ಲ ಎಂದು ಹೇಳಿದರು ಯೋಗಿಗಳು.

ಯಾಕೆಂದರೆ ನಾವು ಎಷ್ಟೋ ಬಾರಿ ಬೇರೆಯವರ ಸಲಹೆಗಳನ್ನೇ ತೀರ್ಮಾನ ಗಳನ್ನಾಗಿಸಿ . ಕೊಳ್ಳುತ್ತೇವೆ. ನಮ್ಮ ಸಂದರ್ಭ ಹಾಗೂ ಸಮಸ್ಯೆಗೆ ಅದು ಹೇಗೆ ಪರಿಹಾರ ಮತ್ತು ಅದುವೇ ಪರಿಹಾ ರವೇ ಎಂದು ಯೋಚಿಸುವುದಿಲ್ಲ . ಎಂದರು.

ಕೊನೆಗೆ ಅವನಿಗೆ ಏನು ಹೇಳಿ ಕಳುಹಿಸಿದಿರಿ? ಎಂದು ಕೇಳಿದ ಎದುರಿಗೆ ಕುಳಿತವ. ಆಗ ಯೋಗಿಗಳು, “ನೋಡು, ನೆಮ್ಮದಿ, ಸುಖ ಎನ್ನುವುದು ಎಲ್ಲೋ ಸಿಗು ವಂಥದ್ದಲ್ಲ, ಕೊಳ್ಳುವಂಥ ದ್ದಲ್ಲ. ಅದು ನಮ್ಮೊಳಗೆ ಇರುವಂಥದ್ದು, ಹುಡುಕಿಕೊಂಡು ಅನುಭವಿಸಬೇಕಷ್ಟೇ. ವಾಪಸು ಹೋಗಿ ಮನೆಯವರನ್ನು ನಗು ನಗುತ್ತಾ ಮಾತನಾಡಿಸು. ಆಗ ಸುಖದ ಅರ್ಥ ತಿಳಿಯುತ್ತದೆ’ ಎಂದು ಹೇಳಿ ಕಳುಹಿಸಿದೆ ಎಂದರು.

ನಾವು ನಿತ್ಯವೂ ನಮ್ಮಲ್ಲಿರುವ ಸುಖದ ಸಾಧನವಾದ ನಗುವನ್ನೇ ಕಳೆದುಕೊಂಡು ಬದುಕುತ್ತಿರುತ್ತೇವೆ. ಇದು ಸಹಜವಾಗಿ ನಮ್ಮನ್ನು ದುಃಖೀಗಳನ್ನಾಗಿಸುತ್ತದೆ. ಅದಕ್ಕೇ ನಮಗೆ ಇಡೀ ಜಗತ್ತು ದುಃಖದ ಮೂಟೆ ಹೊತ್ತಂತೆ ತೋರುತ್ತಿರುತ್ತದೆ. ಅದರ ಬದಲು ನಮ್ಮ ಬೆನ್ನಿನ ಮೇಲಿನ ಮೂಟೆಯನ್ನು ಕೆಳಗಿಳಿಸಿ, ಅದರೊಳಗೆ ಇರುವುದನ್ನು ಅರಿತು ಅನುಭವಿಸುವುದನ್ನು ಕಲಿಯಬೇಕು. ಹಾಗಾದಾಗ ನಮ್ಮ ಮುಖದಲ್ಲಿ ನಗು ಮೂಡಲಾರಂಭಿಸುತ್ತದೆ. ಇದು ಪರರ ಮುಖದಲ್ಲೂ ಪ್ರತಿಫ‌ಲಿಸಲಾರಂಭಿಸುತ್ತದೆ. ಅದೇ ನೈಜ ಸುಖ ಮತ್ತು ಬದುಕು.

(ಸಾರ ಸಂಗ್ರಹ)

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.