ಹುಷಾರ್, ನಕಲಿ ಲಸಿಕೆ ಬರುತ್ತೆ! “ಇಂಟರ್‌ಪೋಲ್’ ಎಚ್ಚರಿಕೆ ರವಾನೆ
Team Udayavani, Dec 4, 2020, 7:15 AM IST
ಹೊಸದಿಲ್ಲಿ: ಕೊರೊನಾ ಲಸಿಕೆ ಆಗಮನದ ಖುಷಿಯಲ್ಲಿರುವ ಜಗತ್ತಿಗೆ ನಕಲಿ ಲಸಿಕೆ ಮಾರಾಟದ ಮುನ್ಸೂಚನೆ ಭೀತಿ ಹುಟ್ಟಿಸಿದೆ.
ಅಂತಾರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ “ಇಂಟರ್‌ಪೋಲ್’ ಈ ಕುರಿತಾಗಿ 194 ಸದಸ್ಯ ರಾಷ್ಟ್ರಗಳಿಗೆ “ಆರೆಂಜ್ ನೊಟೀಸ್’ ನೀಡಿ, ಎಚ್ಚರಿಸಿದೆ. “ಅಧಿಕೃತ ಲಸಿಕೆಗಳು ಮಾರು ಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ನಕಲಿ ಲಸಿಕೆ, ಕಳ್ಳತನ, ಅಕ್ರಮ ಜಾಹೀರಾತುಗಳ ಹಾವಳಿ ಯೂ ಹೆಚ್ಚಾಗಲಿದೆ’ ಎಂದು ಎಚ್ಚರಿಕೆ ನೀಡಿದೆ.
“ನಕಲಿ ಲಸಿಕೆ ವ್ಯವಹಾರ ನಡೆಸು ವುದಕ್ಕಾಗಿಯೇ ಸಂಘಟಿತ ಕ್ರಿಮಿನಲ್ ನೆಟ್‌ವರ್ಕ್‌ಗಳು ವ್ಯವಸ್ಥಿತ ಸಂಚು ರೂಪಿಸಿವೆ. ಭೌತಿಕವಾಗಿ ಅಥವಾ ಆನ್‌ಲೈನ್ ಮೂಲಕ ಇವು ಜನರನ್ನು ಹಾದಿತಪ್ಪಿಸಬಹುದು’ ಎಂದು ತಿಳಿಸಿದೆ.
“ನಕಲಿ ಉತ್ಪನ್ನಗಳನ್ನು ಮಾರುವಂಥ ವೆಬ್‌ಸೈಟ್‌ಗಳ ಮೇಲೆ ಕಣ್ಣಿಡುವುದು ಅವಶ್ಯ. ಈ ಕ್ರಿಮಿನಲ್ ಜಾಲಗಳು ಲಸಿಕೆ ಸಂಸ್ಥೆಗಳ ವೆಬ್‌ಜಾಲಗಳನ್ನೂ ದುರುಪಯೋಗಪಡಿಸಬಹುದು. ಇದರಿಂದ ಹಲವರ ಆರೋಗ್ಯ, ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ’ ಎಂದೂ ಎಚ್ಚರಿಸಿದೆ.
ಭಾರತಕ್ಕೂ ವಾರ್ನಿಂಗ್: ಇಂಟರ್‌ಪೋಲ್ ಜತೆಗೂಡಿ ಕಾರ್ಯನಿರ್ವಹಿಸುವ ಭಾರತದ ಸಿಬಿಐಗೂ ಇಂಥ ಜಾಲದ ಮೇಲೆ ಕಣ್ಣಿಡಲು ಸೂಚನೆ ರವಾನೆಯಾಗಿದೆ. ಇಂಗ್ಲೆಂಡ್ “ಫೈಜರ್’ ಲಸಿಕೆಗೆ ಅನುಮತಿಸಿದ ಬೆನ್ನಲ್ಲೇ ಇಂಟರ್‌ಪೋಲ್ ಈ ಎಚ್ಚರಿಕೆ ನೀಡಿರು ವುದು ಗಮನಾರ್ಹ.
3,000 ವೆಬ್‌ಸೈಟ್ ಸಕ್ರಿಯ!
ಆನ್‌ಲೈನ್ ಲಸಿಕೆ ಮಾರಾಟ ಸಂಸ್ಥೆಗಳ ಜತೆ ಕೈಜೋಡಿಸಿ, ಜಾಗತಿಕವಾಗಿ ನಕಲಿ ಲಸಿಕೆ ಮಾರುತ್ತಿರುವ 3 ಸಾವಿರ ವೆಬ್‌ಸೈಟ್‌ಗಳ ಬಗ್ಗೆಯೂ “ಇಂಟರ್‌ಪೋಲ್’ ಎಚ್ಚರಿಸಿದೆ. ನಕಲಿ ಲಸಿಕೆ, ಕಳಪೆ ಮೆಡಿಕಲ್ ಡಿವೈಸ್ ಮಾರುವ ಈ ವೆಬ್‌ಸೈಟ್‌ಗಳಿಂದ ಗ್ರಾಹಕರಿಗೆ ಎದುರಾದ 1,700ಕ್ಕೂ ಅಧಿಕ ಸೈಬರ್ ಬೆದರಿಕೆ ಗಳನ್ನೂ ಸಂಸ್ಥೆ ಗಮನಿಸಿದೆ.
ಫಿಶಿಂಗ್ ಕರಿನೆರಳು
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆ ಪೂರೈಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೈಗೊಂಡಿರುವ ಯೋಜನೆಗಳ ಮೇಲೆ ಸೈಬರ್ ಕಳ್ಳರು “ಫಿಶಿಂಗ್ ಪಿತೂರಿ’ ರೂಪಿಸಿದ್ದಾರೆ ಎಂದು ಐಬಿಎಂ ಜಾಗತಿಕ ಗುಪ್ತಚರ ದಳ ಎಚ್ಚರಿಸಿದೆ. “ಸೆಪ್ಟಂಬರ್‌ನಿಂದಲೇ ಈ ದುಷ್ಕೃತ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಐಬಿಎಂನ ಬ್ಲಾಗ್‌ಪೋಸ್ಟ್ ತಿಳಿಸಿದೆ. ಜರ್ಮನಿ, ಇಟಲಿ, ದ. ಕೊರಿಯಾ, ತೈವಾನ್‌ನಂಥ ರಾಷ್ಟ್ರಗಳನ್ನು ಸೈಬರ್ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ. “ಲಸಿಕೆ ಸರಬರಾಜಿನ ಮುಖ್ಯ ಹೊಣೆ ನಿರ್ವಹಿಸುತ್ತಿರುವ ಚೀನದ ಹಯರ್ ಬಯೋಮೆಡಿಕಲ್ ಸಂಸ್ಥೆಯ ಎಕ್ಸಿಕ್ಯೂಟಿವ್ ಒಬ್ಬರ ಹೆಸರಿನಲ್ಲಿ ಕಳುಹಿಸಲಾದ ದುರುದ್ದೇಶಪೂರಿತ ಇಮೇಲ್ ಒಂದು ಕೊವ್ಯಾಕ್ಸ್‌ನ ಗಾವಿ ವ್ಯಾಕ್ಸಿನ್ ಅಲೈಯನ್ಸ್, ಡಬ್ಲ್ಯುಎಚ್‌ಒ, ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ತಲುಪಿದೆ’ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.