ಚರಂಡಿಯಲ್ಲಿ ನಿಂತ ಕೊಳಚೆ ನೀರು, ರೋಗ ಭೀತಿ
Team Udayavani, Dec 4, 2020, 8:57 AM IST
ಮಲ್ಪೆ, ಡಿ. 3: ಇಲ್ಲಿನ ಕೊಳ ರಸ್ತೆ ಹನುಮಾನ್ ನಗರದ ಸಮೀಪ ತೋಡಿನಲ್ಲಿ ಕೊಳಚೆ ನೀರು ಹಲವು ಸಮಯದಿಂದ ನಿಂತೇ ಇದ್ದು ಪರಿಸರದಲ್ಲಿ ಅಸಹನೀಯ ವಾತಾವರಣ ಸೃಷ್ಟಿಯಾಗಿದೆ.
ಕೊಳಚೆ ನೀರು ನಿಂತಿರುವುದರಿಂದ ಸೊಳ್ಳೆ ಕಾಟ ಮಿತಿ ಮೀರಿದ್ದು ಸಾಂಕ್ರಾಮಿಕ ರೋಗದ ಭಯ ಕಾಡಿದೆ. ಈ ಭಾಗದಲ್ಲಿ 100ಕ್ಕೂ ಅಧಿಕ ಮನೆಗಳಿದ್ದು ನಿವಾಸಿಗಳು ನರಕಯಾತನೆ ಅನುಭವಿಸುತ್ತಿ ದ್ದಾರೆ. ಮಾರ್ಗದಲ್ಲಿ ಸಂಚರಿಸುವ, ಬೀಚ್‌ಗೆ ಬರುವ ಪ್ರವಾಸಿಗರಿಗೂ ದುರ್ವಾಸನೆ ಮೂಗಿಗೆ ಬಡಿಯುತ್ತಿದೆ.
ತೋಡಿನಲ್ಲಿ ತ್ಯಾಜ್ಯರಾಶಿ :
ಕೊಳ ಹನುಮಾನ್‌ನಗರ ಭಾಗದಲ್ಲಿ ತೋಡಿನಲ್ಲಿ ಹರಿದು ಬರುವ ನೀರು ಮಲ್ಪೆ ಬಂದರು ಪಕ್ಕದ ತೋಡಿನ ಮೂಲಕ ಹೊಳೆಯನ್ನು ಸೇರುತ್ತವೆ. ಆದರೆ ತೋಡಿ
ನಲ್ಲಿ ತ್ಯಾಜ್ಯ ರಾಶಿಗಳು ಮತ್ತು ಹೂಳು ತುಂಬಿಕೊಂಡಿರುವುದರಿಂದ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ತ್ಯಾಜ್ಯ ತೆರವುಗೊಳಿಸುವ ಕಾರ್ಯವೂ ನಡೆದಿಲ್ಲ. ಈ ಹಿಂದೆ ನಗರಸಭೆ ಪ್ರತಿವರ್ಷ ಮಳೆಗಾಲಕ್ಕೆ ಮುನ್ನ ಇಲ್ಲಿನ ತೋಡಿನ ಹೂಳು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿತ್ತು. ಕಳೆದ ಎರಡು ವರ್ಷದಿಂದ ಈ ಕೆಲಸ ನಡೆದಿಲ್ಲ.
ಗಂಭೀರವಾಗಿ ಪರಿಗಣಿಸಿ :
ಆಡಳಿತ ಇಲ್ಲಿನ ಸಮಸ್ಯೆಯನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ತೋಡು ಸ್ವತ್ಛಗೊಳಿಸುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಸೂಕ್ತ ಕ್ರಮ :
ರಸ್ತೆ ಬದಿಯಲ್ಲಿ ವೀಡ್ ಕಟ್ಟಿಂಗ್ ಕೆಲಸ ನಡೆಯುತ್ತಿದೆ. ಆದ್ಯತೆ ಮೇರೆಗೆ ಚರಂಡಿಗಳ ಸ್ವತ್ಛತೆ ಕೆಲಸ ಕೈಗೊಳ್ಳಲಾಗುತ್ತದೆ. ಮಲ್ಪೆ ಹನುಮಾನ್‌ನಗರ ಬಳಿ ಚರಂಡಿಯಲ್ಲಿ ಕೊಳಚೆ ನೀರು ನಿಂತಿರುವ ಸಮಸ್ಯೆ ಇರುವುದರಿಂದ ಶುಕ್ರವಾರವೇ ಸ್ಥಳ ಪರಿಶೀಲನೆ ಮಾಡಿ ಶೀಘ್ರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ನಗರಸಭೆಯ ಆರೋಗ್ಯ ನಿರೀಕ್ಷಕ ಶಶಿರೇಖಾ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.