ಮಂಸೋರೆ ನಿರ್ದೇಶನದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಘರ್ಜಿಸಲಿದ್ದಾಳೆ ‘ಅಬ್ಬಕ್ಕ’

Team Udayavani, Dec 4, 2020, 6:42 PM IST

abbakka

ಬೆಂಗಳೂರು: ಕನ್ನಡದ ವೀರ ವನಿತೆ ರಾಣಿ ಅಬ್ಬಕ್ಕ ದೇವಿಯ ಜೀವನಾಧಾರಿತ ಸಿನಿಮಾ ಒಂದು ಬಹುಕೋಟಿ ವೆಚ್ಚದಲ್ಲಿ ತೆರೆ ಮೇಲೆ ಬರಲು ತಯಾರಿ ನಡೆಸುತ್ತಿದೆ. ಆ್ಯಕ್ಟ್ 1978 ಚಿತ್ರದ ಬಿಡುಗಡೆಯ ನಂತರ ನಿರ್ದೇಶಕ ಮಂಸೋರೆ ಸ್ಯಾಂಡಲ್ ವುಡ್ ನಲ್ಲಿ ಈ ಹೊಸ ಪ್ರಯತ್ನ ವೊಂದಕ್ಕೆ ಕೈ ಹಾಕಿದ್ದಾರೆ.

ಯಾರವಳು ರಾಣಿ ಅಬ್ಬಕ್ಕ

ಅಬ್ಬಕ್ಕ ರಾಣಿ   ಅಲಿಯಾಸ್ ಉಳ್ಳಾಲದ ರಾಣಿ ಎಂದೇ ಹೆಸರು ವಾಸಿಯಾಗಿರುವ ವೀರ ವನಿತೆ ಈಕೆ. 16ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಜೀವಿಸಿದ್ದ  ವೀರ ಸೇನಾನಿ. ಸಮುದ್ರ ಯುದ್ಧನೀತಿಯಲ್ಲಿ ನೈಪುಣ್ಯತೆಯನ್ನು ಹೊಂದಿದ ಏಕೈಕ ರಾಣಿ ಎಂಬ ಕೀರ್ತಿಗೆ ಪಾತ್ರಳಾಗಿರುವ ಈಕೆ ಸತತ 25 ವರ್ಷಗಳ ಕಾಲ ಯುದ್ದಗಳನ್ನು ಮಾಡುತ್ತಲೇ ತನ್ನ ಸಾಮ್ರಾಜ್ಯ ಕಟ್ಟಿದವಳು.

ಈಕೆಯ ಕುರಿತಾಗಿ ಮಾಡಲಾಗುತ್ತಿರುವ ಚಿತ್ರಕ್ಕೆ ಅಬ್ಬಕ್ಕ ಎಂಬ ಹೆಸರಿಡಲಾಗಿದ್ದು,   ‘ಅರಬ್ಬಿ ಸಮುದ್ರದ   ಅಭಯದ ರಾಣಿ’ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಬಾಲಿವುಡ್ ನಲ್ಲಿ ಮಣಿಕರ್ಣಿಕಾ ತೆಲುಗಿನಲ್ಲಿ ರುದ್ರಮ್ಮದೇವಿ ಸೇರಿದಂತೆ ಹಲವಾರು ವೀರ ಸೇನಾನಿಗಳ ಕಥೆ ಈಗಾಗಲೆ ತೆರೆ ಮೇಲೆ ಬಂದಿದ್ದು ಸ್ಯಾಂಡಲ್ ವುಡ್ ನಲ್ಲಿ ಇದೊಂದು ಹೊಸ ಪ್ರಯತ್ನವಾಗಿದೆ.

ಇದನ್ನೂ ಓದಿ:ಲಸಿಕೆ ನೀಡಲು ಆರೋಗ್ಯ ಇಲಾಖೆ ಸಜ್ಜು

ಅಬ್ಬಕ್ಕನ ಕುರಿತಾಗಿ ಸಿನಿಮಾ ಮಾಡಲು ನನಗೆ ಪ್ರೇರಣೆಯಾಗಿರುವುದೆ ಆಕೆಯ ಜಲಮಾರ್ಗದ ಯುದ್ಧ ಪರಿಣಿತಿ. ಕಳೆದ ಮೂರು ವರ್ಷಗಳಿಂದ  ನಾನು ಈ ಕುರಿತು ಅಧ್ಯಯನ ಮಾಡುತ್ತಿದ್ದೆ . ಈಗ ಈಕೆಯ ಕುರಿತು ಸಿನಿಮಾ ಮಾಡಲು ಕಾಲ ಕೂಡಿ ಬಂದಿದೆ ಎಂದು ನಿರ್ದೇಶಕ ಮಂಸೋರೆ ಹೇಳಿದ್ದಾರೆ.

ಚಿತ್ರ ಕನ್ನಡ, ತುಳು , ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ  ಮೂಡಿಬರಲಿದೆ. ಹೀಗಾಗಿ ಎಲ್ಲಾ ಭಾಷೆಯ ಜನರಿಗೂ ಪರಿಚಿತವಾಗಿರುವ ನಟಿಯನ್ನೆ ಅಬ್ಬಕ್ಕನ ಪಾತ್ರಕ್ಕೆ  ಆಯ್ಕೆ ಮಾಡಲಾಗುವುದು ಎಂದು ನಿರ್ದೇಶಕ ಮಂಸೋರೆ ತಿಳಿಸಿದ್ದಾರೆ.

ಈ ಮಂಸೋರೆ ಜೊತೆಗೆ ಕೆಲಸ ಮಾಡಿರುವ ಆ್ಯಕ್ಟ್ 1978 ತಾಂತ್ರಿಕ ತಂಡ  ಅಬ್ಬಕ್ಕ ಚಿತ್ರದಲ್ಲೂ ಮುಂದುವರೆಯಲಿದ್ದು, ಛಾಯಾಗ್ರಹಣದಲ್ಲಿ ಸತ್ಯ ಹೆಗಡೆ ಕಾರ್ಯನಿರ್ವಹಿಸಲಿದ್ದಾರೆ.  ಸಂಗೀತ ನಿರ್ದೇಶನದಲ್ಲಿ  ಅಜನೀಶ್ ಲೋಕ್ ನಾಥ್ ಹೊಸದಾಗಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.