ಡಿ.10ಕ್ಕೆ ಹೊಸ ಸಂಸತ್ ಭವನಕ್ಕೆ ಮೋದಿ ಶಂಕು
ನೂತನ ಪಾರ್ಲಿಮೆಂಟ್ ಆತ್ಮನಿರ್ಭರ ಪ್ರತೀಕ
Team Udayavani, Dec 6, 2020, 5:58 AM IST
ನೂತನ ಸಂಸತ್ ಭವನದ ಪ್ರಸ್ತಾವಿತ ನೀಲನಕಾಶೆ
ಇದೇ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಭವನಕ್ಕಾಗಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 64,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡದಲ್ಲಿ 1224 ಸಂಸದರು ಒಟ್ಟಿಗೆ ಕುಳಿತುಕೊಳ್ಳಲು ಅವಕಾಶ ಸಿಗಲಿದೆ. 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಹೊಸ ಕಟ್ಟಡದಲ್ಲಿ ಅಧಿವೇಶನ ನಡೆಯಲಿದೆ ಎಂಬ ಆಶಾಭಾವ ಸರಕಾರದ್ದು.
971 ಕೋಟಿ ರೂ. ಹೊಸ ಕಟ್ಟಡಕ್ಕಾಗಿ ಕೇಂದ್ರ ಸರಕಾರ ಮಾಡಲಿರುವ ವೆಚ್ಚ.
1224 ಸಂಸದರು ಒಟ್ಟಿಗೆ ಕುಳಿತುಕೊಳ್ಳುವ ವ್ಯವಸ್ಥೆ .
ಶ್ರಮ ಶಕ್ತಿ ಭವನ ಇರುವ ಸ್ಥಳದಲ್ಲಿ ಹೊಸ ಕಚೇರಿ ನಿರ್ಮಾಣವಾಗಲಿದ್ದು, ಎಲ್ಲ ಸಂಸದರಿಗೂ ಇಲ್ಲೇ ಕಚೇರಿ ವ್ಯವಸ್ಥೆಯನ್ನೂ ಮಾಡಿಕೊಡಲಾಗುತ್ತದೆ.
ಟಾಟಾದಿಂದ ನಿರ್ಮಾಣ
ಕಳೆದ ಸೆಪ್ಟಂಬರ್‌ನಲ್ಲಿ ಈ ಕಟ್ಟಡ ನಿರ್ಮಾಣ ಕಾಮಗಾರಿ ಟೆಂಡರ್ ಅನ್ನು ಟಾಟಾ ಪ್ರೊಜೆಕ್ಟ್ ಗೆದ್ದಿತ್ತು. ಇದನ್ನು ಸೆಂಟ್ರಲ್ ವಿಸ್ತಾ ರೀಡೆವಲಪ್‌ಮೆಂಟ್ ಪ್ರೊಜೆಕ್ಟ್ನಡಿ ನಿರ್ಮಿಸಲಾಗುತ್ತಿದೆ.
888 ಸಂಸದರು
ಹೊಸ ಕಟ್ಟಡದಲ್ಲಿ 888 ಲೋಕಸಭೆ ಸದಸ್ಯರು, 384 ರಾಜ್ಯಸಭಾ ಸಂಸದರಿಗೆ ಸ್ಥಳಾವಕಾಶ. ಸದ್ಯ ಲೋಕಸಭೆಯಲ್ಲಿ 543, ರಾಜ್ಯಸಭೆಯಲ್ಲಿ 245 ಸದಸ್ಯರಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
2,000 ಮಂದಿ
ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ 2000 ಮಂದಿ ನೇರವಾಗಿ ಹಾಗೂ 9000 ಮಂದಿ ಪರೋಕ್ಷವಾಗಿ ಭಾಗಿಯಾಗಲಿದ್ದಾರೆ.
ಕಟ್ಟಡದ ವಿಶೇಷಗಳು
ಭಾರತದ ಪ್ರಜಾಪ್ರಭುತ್ವದ ಇತಿಹಾಸ ಹೇಳುವಂಥ ಸಂವಿಧಾನ ಹಾಲ್
ಸಂಸದರಿಗಾಗಿ ಲಾಂಜ್ ನಿರ್ಮಾಣ
ಗ್ರಂಥಾಲಯ, ಹಲವಾರು ಸಮಿತಿಗಳ ಕೊಠಡಿಗಳು
ಡೈನಿಂಗ್ ಕೊಠಡಿ, ಪಾರ್ಕಿಂಗ್ ಸ್ಥಳಗಳು
ಮೋದಿಗೆ ಆಹ್ವಾನ
ಇಡೀ ಕಟ್ಟಡದ ನಿರ್ಮಾಣ ಜವಾಬ್ದಾರಿ ಲೋಕಸಭೆ ಸ್ಪೀಕರ್ ಮೇಲಿರುತ್ತದೆ. ಹೀಗಾಗಿ, ಸ್ಪೀಕರ್ ಓಂ ಬಿರ್ಲಾ ಅವರು, ಶನಿವಾರ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದಾರೆ. ಈ ಹೊಸ ಕಟ್ಟಡ ಆತ್ಮನಿರ್ಭ ರದ ಪ್ರತೀಕ ಎಂದರು. ವಿಪಕ್ಷಗಳ ನಾಯಕರಿಗೂ ಆಹ್ವಾನ ಹೋಗಿದೆ. ಕೆಲವರು ನೇರವಾಗಿ, ಕೆಲವರು ವಚ್ಯುìವಲ್ ಮೂಲಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಸ್ಪೀಕರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.