ಐಫೋನ್-11 ಬಳಕೆದಾರರಿಗೆ ಬಿಗ್ ಆಫರ್ ನೀಡಿದ ಆ್ಯಪಲ್: ಏನದು ?
Apple announces free repair program for iPhone 11
Team Udayavani, Dec 6, 2020, 8:31 PM IST
ನವದೆಹಲಿ: ಜನಪ್ರಿಯ ಆ್ಯಪಲ್ ಸಂಸ್ಥೆ ತನ್ನ ಐಫೋನ್-11 ಬಳಕೆದಾರರಿಗೆ ಹೊಸ ಆಫರ್ ಒಂದನ್ನು ನೀಡಿದೆ.
ಐಫೋನ್11 ನಲ್ಲಿ ಡಿಸ್ ಪ್ಲೇ ಸಮಸ್ಯೆ ಎದುರಾದರೆ, ಕಂಪನಿಯೇ ಉಚಿತವಾಗಿ ಅದನ್ನು ಬದಲಾಯಿಸಿ ಕೊಡಲಿದೆ. ಹಲವು ಆ್ಯಪಲ್ ಫೋನ್ ಗಳಲ್ಲಿ ಈ ಸಮಸ್ಯೆ ಕಂಡುಬಂದಿದ್ದರಿಂದ ಸಂಸ್ಥೆಯು ಈ ನಿರ್ಧಾರವನ್ನು ಕೈಗೊಂಡಿದೆ.
ಕಳೆದ 2019 ನವೆಂಬರ್ ನಿಂದ ಮೇ 2020ರ ಅವಧಿಯಲ್ಲಿ ತಯಾರಿಸಲಾದ ಸೀಮಿತ ಸಂಖ್ಯೆಯ ಐಫೋನ್-11 ಆವೃತ್ತಿಯಲ್ಲಿ ‘ಡಿಸ್ ಪ್ಲೇ ಟಚ್’ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಕೆಲವು ಬಳಕೆದಾರರು ತೊಂದರೆಗೆ ಸಿಲುಕಿದ್ದರು. ಹೀಗಾಗಿ ಅಂತಹ ಬಳಕೆದಾರರಿಗೆ ಉಚಿತವಾಗಿ ಡಿಸ್ ಪ್ಲೇ ಬದಲಿಸಿಕೊಡಲಾಗುವುದು ಅಥವಾ ರಿಪೇರಿ ಮಾಡಿಕೊಡಲಾಗುವುದು ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ.
ಆಫರ್ ಪರಿಶೀಲಿಸುವುದು ಹೇಗೆ?
ಆ್ಯಪಲ್ ಐಫೋನ್-11ಬಳಕೆದಾರರು ತಮ್ಮ ಮೊಬೈಲ್ ಪೋನಿಗೆ ಈ ಸೌಲಭ್ಯ ದೊರೆಯುತ್ತದೆಯೇ ಎಂದು ಪರಿಶೀಲಿಸುದಕ್ಕಾಗಿ ಕಂಪನಿಯು ಪ್ರತ್ಯೇಕ ಸಪೋರ್ಟ್ ಪೇಜ್ ತೆರೆದಿದೆ. ಇಲ್ಲಿ ಬಳಕೆದಾರರು ತಮ್ಮ ಐಫೋನ್-11 ನ ಸೀರಿಯಲ್ ಸಂಖ್ಯೆಯನ್ನು ನಮೂದಿಸಬಹುದಾಗಿದೆ. ಈ ಮೂಲಕ ತಮ್ಮ ಮೊಬೈಲ್ ಪೋನಿಗೆ ಉಚಿತ ‘ಡಿಸ್ ಪ್ಲೇ ರೀ-ಪ್ಲೇಸ್ ಮೆಂಟ್’ ಸೌಲಭ್ಯ ಇದೆಯೇ ? ಇಲ್ಲವೇ ? ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಸಪೋರ್ಟ್ ಪೇಜ್ ನಲ್ಲಿ ಆ್ಯಪಲ್ ಐಫೋನ್-11 Display Replacement ಸೌಲಭ್ಯ ನಿಯಮಗಳನ್ನು ತಿಳಿಸಿದ್ದು, ಈ ನಿಯಮಗಳ ಅನ್ವಯ ಸಮಸ್ಯೆ ಇರುವವರು ತಮ್ಮ ಮೊಬೈಲ್ ಪೋನ್ ಅನ್ನು ಆ್ಯಪಲ್ ಸರ್ವಿಸ್ ಸೆಂಟರ್ ಗೆ ಕಳಿಹಿಸಿಕೊಡಬಹುದು.
ಇದನ್ನೂ ಓದಿ: ಊಟ ಕೊಡಿಸುವುದಾಗಿ ಕರೆದೊಯ್ದು ಆಸ್ಪತ್ರೆ ವಾರ್ಡ್ ಬಾಯ್ ಮತ್ತುಸ್ನೇಹಿತರಿಂದ ಬಾಲಕಿಯ ಅತ್ಯಾಚಾರ
ಬಳಕೆದಾರರು ಐಫೋನ್-11 ನಲ್ಲಿ Setting- General -About ನಲ್ಲಿ ನಿಮ್ಮ ಮೊಬೈಲ್ ನ ಸೀರಿಯಲ್ ಸಂಖ್ಯೆಯನ್ನು ತಿಳಿದುಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.