ಹಳ್ಳಿ ಫೈಟ್; ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ
Team Udayavani, Dec 6, 2020, 4:37 PM IST
ಬಾಗಲಕೋಟೆ: ಜಿಲ್ಲೆಯಲ್ಲಿ ಡಿ.22 ಮತ್ತು 27ರಂದು ಎರಡು ಹಂತಗಳಲ್ಲಿ 193 ಗ್ರಾಪಂಗೆ ಚುನಾವಣೆ ನಡೆಯಲಿದ್ದು, ಮೊದ ಹಂತದ ಚುನಾವಣೆಗೆ ಡಿ.7 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ತಿಳಿಸಿದ್ದಾರೆ.
22ರಂದು ಮೊದಲ ಹಂತದಲ್ಲಿ ಜಮಖಂಡಿ, ಮುಧೋಳ, ಬೀಳಗಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ 89 ಗ್ರಾಮ ಪಂಚಾಯತಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಡಿ.11 ಆಗಿದೆ. ನಾಮಪತ್ರ ಪರಿಶೀಲನೆ ಡಿ.12 ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಡಿ.14 ಕೊನೆಯ ದಿನವಾಗಿದೆ.
ಮತದಾನ ಡಿ.22 ರಂದು ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. 27ರಂದು ಎರಡನೇ ಹಂತದಲ್ಲಿ ಬಾಗಲಕೋಟೆ, ಹುನಗುಂದ, ಬಾದಾಮಿ, ಇಲಕಲ್ಲ ಹಾಗೂ ಗುಳೇದಗುಡ್ಡ ಸೇರಿ ಒಟ್ಟು 104 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಡಿ. 16ಆಗಿದ್ದು, ನಾಮಪತ್ರ ಪರಿಶೀಲನೆ ಡಿ. 17ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು 19 ಕೊನೆಯ ದಿನವಾಗಿದೆ. ಮತದಾನ 27 ರಂದು ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ನಡೆಯಲಿದೆ. ಎರಡು ಹಂತಗಳ ಮತದಾನ ಎಣಿಕೆ ಪ್ರಕ್ರಿಯೆ ಡಿ.30ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತ-480161 ಮತದಾರರು: ಮೊದಲನೆ ಹಂತದ ಚುನಾವಣೆಗೆ 265 ಮತಗಟ್ಟೆಗಳಿದ್ದು, ಒಟ್ಟು 480161 ಜನ ಮತದಾರರಿದ್ದಾರೆ. ಅದರಲ್ಲಿ 46388 ಪುರುಷ, 24082 ಮಹಿಳಾ ಹಾಗೂ 18 ಜನ ಇತರೆ ಮತದಾರರಿದ್ದಾರೆ. ಎರಡನೇ ಹಂತದ ಚುನಾವಣೆಗೆ 712 ಮತಗಟ್ಟೆಗಳಿದ್ದು, ಒಟ್ಟು 487008 ಜನ ಮತದಾರರ ಪೈಕಿ 244808 ಪುರುಷ, 242175 ಮಹಿಳಾ ಮತ್ತು 25 ಇತರೆ ಮತದಾರರಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರೀಲೀಲಾ ದುಬಾರಿ ಹೀರೋಯಿನ್
ರಾಜ್ಯ ಚುನಾವಣಾ ಆಯೋಗಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ಘೋಷಿಸಿದ್ದು, ಸದಾಚಾರ ನೀತಿ ಸಂಹಿತೆ ನವೆಂಬರ್ 30ರಿಂದ ಡಿ.31ರ ಸಂಜೆ 5ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಸಾಮಾನ್ಯ ಸಭೆ ನಡೆಸಲು ಅಡ್ಡಿಯಿರುವದಿಲ್ಲ. ಆದರೆ ಹೊಸ ಯೋಜನೆ ಅನುಷ್ಠಾನಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳತಕ್ಕದ್ದಲ್ಲ. ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಅಥವಾ ಈ ಯೋಜನೆಯಡಿ ಇತರ ಕಾಮಗಾರಿಗಳನ್ನು ತೆಗೆದು ಕೊಂಡು ಅನುಷ್ಠಾನ ಗೊಳಿಸಬಹುದು. ಯೋಜನೆ ಅನುಷ್ಠಾನದಲ್ಲಿ ಸಾರ್ವಜನಿಕ ಸಮಾರಂಭ, ರಾಜಕೀಯ ನಾಯಕರುಗಳ ಉಪಸ್ಥಿತಿಯಲ್ಲಿ ನಡೆಸುವಂತಿಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.