ಸಮಾನತೆಗೆ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್ ವಿಶ್ವಜ್ಞಾನಿ
Team Udayavani, Dec 7, 2020, 8:00 PM IST
ಕೆ.ಆರ್.ನಗರ: ಸಮಾಜದಲ್ಲಿ ಸರ್ವ ಜನಾಂಗದವರು ಸಮಾನತೆಯ ಬದುಕು ಸಾಗಿಸಿ ರಾಜಕೀಯ ಅಧಿಕಾರ ಪಡೆಯಲು ಕಾರಣರಾದ ಅಂಬೇಡ್ಕರ್ ವಿಶ್ವಜ್ಞಾನಿ ಎಂದು ಶಾಸಕ ಸಾ.ರಾ.ಮಹೇಶ್ ಬಣ್ಣಿಸಿದರು.
ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಪಟ್ಟಣದಲ್ಲಿ ನಡೆದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಗತ್ತಿಗೆ ಮಾದರಿಯಾಗಿರುವ ಶ್ರೇಷ್ಠ ಸಂವಿಧಾನ ರಚಿಸಿ, ಭವ್ಯ ಭಾರತದ ಏಳಿಗೆಗೆ ಕಾರಣರಾಗಿರುವ ಅಂಬೇಡ್ಕರ್ ಅವರನ್ನು ಸರ್ವರೂ ಗೌರವಿಸಬೇಕು ಎಂದರು.
ನಾವೆಲ್ಲಾ ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗಿದರೆ ಉತ್ತಮವಾದ ಬದುಕು ಸಾಗಿಸಬಹುದು. ತಾಲೂಕಿನಲ್ಲಿದಲಿತರಿಗೆ ಸಂಬಂಧಿಸಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮತ್ತು ಇತರ ಅನುಕೂಲಕರವಾದ ಕೆಲಸಗಳನ್ನು ಮಾಡಿದ್ದು, ಯಾವುದೇ ರೀತಿಯ ಸಮಸ್ಯೆಗಳು ಸುಲಲಿತವಾಗಿ ಬಗೆಹರಿ ಯಬೇಕಾದರೆ ಪ್ರತಿಯೊಬ್ಬರೂ ಸಂಘಟಿತಾಗಿ ಸಮಾಜದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾಪಂಚಾಯ್ತಿಅಚ್ಯುತಾನಂದಮಾತನಾಡಿ,ಸಮಾಜದಬೆಳೆವಣಿಗೆಯ ವೇಗ ಕಡಿಮೆಯಾಗಲು ನಮ್ಮಲ್ಲಿರುವಒಗ್ಗಟ್ಟಿನ ಕೊರತೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿಸಮಾಜದ ಅಭಿವೃದ್ಧಿಯ ವಿಚಾರ ಬಂದಾಗ ನಾವೆಲ್ಲಾ ರಾಜಕೀಯ ಮಾಡದೆ ಒಟ್ಟಾಗಿ ಕೆಲಸ ಮಾಡೋಣ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಮಾಜಿ ಸದಸ್ಯ ಎಂ.ತಮ್ಮಣ್ಣ, ಪುರಸಭೆ ಸದಸ್ಯ ಶಂಕರ್, ಮಾಜಿ ಅಧ್ಯಕ್ಷ ಡಿ.ಕಾಂತರಾಜು, ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ದಲಿತ ಮುಖಂಡರಾದ ಮಹೇಶ್, ವಜ್ರೆಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.