ಮಾಹಿತಿ ನೀಡದೇ ಕಸ್ತೂರಿ ರಂಗನ್‌ ವರದಿ ಜಾರಿ

ಮಲೆನಾಡಿನಲ್ಲಿ ಭುಗಿಲೆದ್ದ ಆಕ್ರೋಶ , ಮಾಹಿತಿ ನೀಡುವವರೆಗೂ ವರದಿ ಜಾರಿಗೆ ಬಿಡಲ್ಲ

Team Udayavani, Dec 7, 2020, 8:24 PM IST

ಮಾಹಿತಿ ನೀಡದೇ ಕಸ್ತೂರಿ ರಂಗನ್‌ ವರದಿ ಜಾರಿ

ಸಕಲೇಶಪುರ: ಪಶ್ಚಿಮಘಟ್ಟ ಪ್ರದೇಶ ಸಂರಕ್ಷಿಸುವ ಕಸ್ತೂರಿ ರಂಗನ್‌ ವರದಿಯಲ್ಲಿ ತಾಲೂಕಿನ 34 ಗ್ರಾಮ ಸೇರಿಸಲಾಗಿದ್ದು, ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಈ ವರದಿ ಜಾರಿಗೆ ವಿರೋಧಿಸಿ ಗ್ರಾಪಂ ಚುನಾವಣೆ ಬಹಿಷ್ಕರಿಸುವ ಮಾತುಗಳು ಗ್ರಾಮಸ್ಥರಿಂದಕೇಳಿ ಬರುತ್ತಿದೆ.ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್‌ ವರದಿಯನ್ನು ತಯಾರಿ ಮಾಡಿದ್ದು, ಇದರಅನುಷ್ಠಾನಕ್ಕೆ ಕೇಂದ್ರ ಪರಿಸರ ಸಚಿವಾಲಯ ಮುಂದಾಗಿದೆ.

ಹೊಸ ಅಭಿವೃದ್ಧಿ ಕಾರ್ಯಗಳನ್ನು ಪಶ್ಚಿಮ ಘಟ್ಟದಲ್ಲಿ ಮಾಡಬಾರದು ಎಂದು ಈ ವರದಿ ಪ್ರಮುಖವಾಗಿ ಹೇಳಿದೆ. ಯೋಜನೆಗೆ ಒಳಪಡುವ ರಾಜ್ಯ, ವ್ಯಾಪ್ತಿ: ಪರಿಸರ ಸೂಕ್ಷ್ಮ ವ್ಯಾಪ್ತಿಯಲ್ಲಿಗುಜರಾತ್‌ನಲ್ಲಿ448 ಚದರಕಿ.ಮೀ., ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಯಲ್ಲಿ 17,340 ಚದರ ಕಿ.ಮೀ., ಗೋವಾವ್ಯಾಪ್ತಿಯಲ್ಲಿ1,461 ಚದರ ಕಿ.ಮೀ., ಕೇರಳ ರಾಜ್ಯ ವ್ಯಾಪ್ತಿಯಲ್ಲಿ 9993 ಚದರ ಕಿ.ಮೀ., ತಮಿಳುನಾಡು ರಾಜ್ಯ ವ್ಯಾಪ್ತಿಯಲ್ಲಿ 6914 ಚದರ ಕಿ.ಮೀ. ಬಂದರೆ, ಕರ್ನಾಟಕ ರಾಜ್ಯವ್ಯಾಪ್ತಿಯಲ್ಲಿ ಅತ್ಯಧಿಕ ಅಂದರೆ 20,668 ಚದರ ಕಿ.ಮೀ. ಬರುತ್ತಿದೆ. ಅದರಲ್ಲಿ ತಾಲೂಕಿನಲ್ಲಿ ಒಟ್ಟು34 ಗ್ರಾಮಗಳನ್ನು ಈ ವರದಿ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ.

ಗ್ರಾಮಸ್ಥರಲ್ಲಿ ಆತಂಕ: ಯೋಜನೆ ವ್ಯಾಪ್ತಿಯಲ್ಲಿ ಈ ಗ್ರಾಮಗಳು ಸೇರಿಕೊಂಡರೆ ಗಣಿಗಾರಿಕೆ, ಮರಳು ಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್‌ಯೋಜನೆಗಳಿಗೆ ನಿಷೇಧ ಇರುತ್ತದೆ. ಜೊತೆಗೆರಸಾಯನಿಕ ಗೊಬ್ಬರ, ಕೀಟನಾಶಗಳು ಬಳಸ ಬಾರದು, ಟಿಂಬರ್‌ಗಾಗಿ ಮರ ಕಡಿಯುವುದನ್ನುನಿಷೇಧಿಸಲಾಗಿದೆ. ಇನ್ನು ಹಲವಾರು ಅಂಶಗಳು ಈ ವರದಿಯಲ್ಲಿದ್ದು, ಬೆಳೆಗಾರರು ಹಾಗೂ ಗ್ರಾಮಸ್ಥರ ಆತಂಕಕ್ಕೆಕಾರಣವಾಗಿದೆ.

ಉಪಗ್ರಹ ಸರ್ವೆ ಬೇಡ: ವರದಿಯಲ್ಲಿ ಕೇವಲ ತಾಲೂಕಿನ 34 ಗ್ರಾಮಗಳು ಸೇರ್ಪಡೆಯಾಗುತ್ತ ದೆಂದು ಹೇಳಲಾಗುತ್ತಿದೆ. ಆದರೆ, ಇದರವಿಸ್ತೀರ್ಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಉಪಗ್ರಹದ ಮೂಲಕ ಸರ್ವೆ ಮಾಡಲಾಗಿರು ವುದರಿಂದ ವಾಸಸ್ಥಳಗಳೂ ಹಸಿರು ವಲಯದಲ್ಲೇಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಉಪಗ್ರಹ ಸರ್ವೆ ಬದಲು, ಸಾಮಾನ್ಯ ಸರ್ವೆ ಮಾಡಬೇಕೆಂಬ ಒತ್ತಾಯಕೇಳಿ ಬರುತ್ತಿದೆ.

ಬಹುತೇಕ ಗ್ರಾಮಗಳಲ್ಲಿ ಶಾಲೆಗಳು, ಆಸ್ಪತ್ರೆಗಳು, ಮನೆಗಳು ಸಹ ಸರ್ಕಾರಿ ಜಾಗದಲ್ಲಿದ್ದು, ಇದನ್ನು ಏನು ಮಾಡಲಾಗುತ್ತದೆಂಬ ಮಾಹಿತಿ ಸಹ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಕೇರಳ ಸರ್ಕಾರ ಮಾಹಿತಿ ನೀಡಿದ್ದರಿಂದ 2500 ಚದರ ಮೀಟರ್‌ಗೂ ಹೆಚ್ಚು ಪ್ರದೇಶವನ್ನು ವರದಿಯಿಂದ ಕೈ ಬಿಡಲಾಗಿದೆ.ಆದರೆ, ಕರ್ನಾಟಕದಲ್ಲಿ ಈ ರೀತಿಯ ಯಾವುದೇ ಪ್ರಯತ್ನ ನಡೆದಿಲ್ಲ.

ಪ್ರವಾಸೋದ್ಯಮಕ್ಕೆ ಪೆಟ್ಟು: ಯೋಜನೆ ವರದಿ ಸಹ ಇಂಗ್ಲಿಷ್‌ನಲ್ಲಿದ್ದು, ಇದನ್ನು ಕೂಡಲೇ ಕನ್ನಡಕ್ಕೆ ತರ್ಜುಮೆ ಮಾಡಿಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡುವ ಕೆಲಸ ಆರಂಭಿಸಬೇಕಾಗಿದೆ.ಕೆಂಪು, ಹಸಿರು, ಕೇಸರಿ ವಲಯಗಳೆಂದು ವಿಂಗಡಿಸಲಾಗುತ್ತಿದ್ದು, ಈ ಕುರಿತು ಚಿಂತನೆ ಮಾಡಬೇಕಾಗಿದೆ. ತಾಲೂಕಿನಪಶ್ಚಿಮಘಟ್ಟಗಳ ತಪ್ಪಲುಗಳಲ್ಲಿ ರೆಸಾರ್ಟ್‌ಹಾಗೂ ಹೋಂಸ್ಟೇಗಳ ಸಂಖ್ಯೆ ಹೆಚ್ಚಿದೆ. ಯೋಜನೆ ವರದಿ ಅನುಷ್ಠಾನಗೊಂಡರೆ ಪ್ರವಾಸೋದ್ಯಮಕ್ಕೂತೀವ್ರ ಪೆಟ್ಟು ಬೀಳುವ ಸಾಧ್ಯತೆಯಿದೆ.

ನಾಮಪತ್ರ ಸಲ್ಲಿಸದಂತೆ ಮನವಿ: ಪರಿಸರ ಸೂಕ್ಷ್ಮ ವಲಯ ಯೋಜನೆ ಕುರಿತು ಜನರಿಗೆ ಯಾವುದೇ ಮಾಹಿತಿ ನೀಡದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದಕ್ಕೆ ಕೇರಳದಲ್ಲಿ ಯೋಜನಾ ವ್ಯಾಪ್ತಿಯ ಜನರ ಆಕ್ರೋಶ ಭುಗಿಲೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಹಾನುಬಾಳ್‌ ಹೋಬಳಿ ಕಸ್ತೂರಿ ರಂಗನ್‌ ವರದಿ ವಿರೋಧಿ ಹೋರಾಟ ಸಮಿತಿಯುಭಾನುವಾರ ಹಾನುಬಾಳ್‌ನಲ್ಲಿ ಬೆಳೆಗಾರರ ಸಭೆಕರೆದಿತ್ತು. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಅಕಾಂಕ್ಷಿಗಳಿಗೆ ನಾಮಪತ್ರ ಸಲ್ಲಿಸಿದಂತೆ ಮನವೊಲಿಸಲು ಸಿದ್ಧತೆ ನಡೆಸಲಾಗಿದೆ.ಪ್ರಥಮ ಹಂತದಲ್ಲಿ ಹಾನುಬಾಳ್‌, ಹೆತ್ತೂರು,ಹೆಗ್ಗದ್ದೆ ಗ್ರಾಪಂ ಮುಂಭಾಗ ಸೋಮವಾರಪ್ರತಿಭಟನೆ ಮಾಡಲು ಯೋಜಿಸಲಾಗಿದೆ. ಒಟ್ಟಾರೆಯಾಗಿ ಅಧಿಕಾರಿಗಳು ಕಸ್ತೂರಿ ರಂಗನ್‌ ಯೋಜನೆಕುರಿತು ಸರಿಯಾದ ಮಾಹಿತಿ ನೀಡದ ಕಾರಣ, ಮಲೆನಾಡಿನ ಕೆಲವು ಭಾಗಗಳ ಜನತೆ ಬೀದಿ ಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಟಾಪ್ ನ್ಯೂಸ್

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

14-

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

14-

Snuff: ನಶ್ಯ ತಂದಿಟ್ಟ ಸಮಸ್ಯೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.