ಜಿಎಸ್‌ಬಿ ಪಾರ್ಕ್ ಅಭಿವೃದ್ಧಿಗೆ ಚಾಲನೆ
Team Udayavani, Dec 7, 2020, 8:32 PM IST
ತುಮಕೂರು: ಸ್ಮಾರ್ಟ್‌ಸಿಟಿ ವತಿಯಿಂದ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ.11ರ ಕಲ್ಪತರು ಬಡಾವಣೆ ಜಿ.ಎಸ್.ಬಿ ಉದ್ಯಾನವನದಅಭಿವೃದ್ಧಿಕಾಮಗಾರಿಗೆ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ್ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾರ್ಡ್11ರಮೆಳೇಕೋಟೆ ಗಂಗಸಂದ್ರದಭಾಗದಲ್ಲಿಉತ್ತಮವಾದಂತಹ ವಾತಾವರಣ ನಿರ್ಮಾಣಮಾಡಲು ಮತ್ತು ಸದರಿ ಪಾರ್ಕ್ 2 ಎಕರೆ ವಿಸ್ತೀರ್ಣದಲ್ಲಿದ್ದು, ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಈಭಾಗದಲ್ಲಿ ಅತ್ಯುತ್ತಮವಾದಂತಹ ವಾತಾವರಣವನ್ನುಸೃಷ್ಟಿಸಲು ಶ್ರಮಿಸಲಿ ಎಂದರು.
90 ಲಕ್ಷ ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನಗರದ ಈ ಭಾಗದಲ್ಲಿರುವ ಪಾರ್ಕ್ 2 ಎಕರೆ ವಿಸ್ತೀರ್ಣದಲ್ಲಿದ್ದು, ನಗರದಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿರುವಪಾರ್ಕ್‌ಗಳು ಕೆಲವು ಮಾತ್ರ ಅದರಲ್ಲಿ ಇದು ಸಹ ಒಂದಾಗಿದೆ. ಈ ಪಾರ್ಕ್‌ನ್ನು ಸುಮಾರು 90 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಭಾಗದ ನಾಗರಿಕರಿಗೆ ಅನುಕೂಲವಾಗುವಂತೆ, ದಿನನಿತ್ಯವಾಕಿಂಗ್ ಪಾಥ್, ಜಿಮ್, ಮಕ್ಕಳ ಆಟದ ಏರಿಯಾ, ಖುರ್ಚಿಗಳು ಹಾಗೂ ಇಲ್ಲಿನ ನಾಗರಿಕರ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗುತ್ತದೆ ಹಾಗೂ ಈ ಭಾಗದ ನಾಗರಿಕರಿಗೆ ಉತ್ತಮವಾದಂತಹ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಗಂಗಸಂದ್ರ ಕೆರೆ ಶೀಘ್ರ ಪ್ರವಾಸಿ ತಾಣ: ಗಂಗಸಂದ್ರ ಕೆರೆಯಲ್ಲಿ ಇನ್ನು ಒಂದು ವರ್ಷದಲ್ಲಿ ಸುಮಾರು 20ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.ಅಲ್ಪಸಂಖ್ಯಾತರ ಇಲಾಖೆಯಿಂದ ಸುಮಾರು 13 ಕೋಟಿ ರೂ. ಮೊತ್ತವನ್ನು ನೀಡಿದ್ದು, ಪೂರ್ಣವಾಗಿಬಟಾನಿಕಲ್ ಗಾರ್ಡನ್, ಪಾಥ್ ವೇ ಹಾಗೂಮುಂತಾದ ಉತ್ತಮ ಯೋಜನೆಗಳನ್ನೊಳಗೊಂಡಂತೆ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಗಂಗಸಂದ್ರ ಹಾಗೂ ಮೆಳೇಕೋಟೆ ಭಾಗದ ಜನರಿಗೆ ಇದೊಂದು ಪ್ರವಾಸಿ ತಾಣವಾಗಲಿದೆ ಎಂದು ಶಾಸಕರು ತಿಳಿಸಿದರು.
ಪಾರ್ಕ್ ಸದುಪಯೋಗಿಸಿಕೊಳ್ಳಿ: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣ ಮಾತನಾಡಿ, ತುಮಕೂರು ನಗರದಲ್ಲಿ ಇಷ್ಟು ದೊಡ್ಡ ವಿಸ್ತೀರ್ಣದಲ್ಲಿ ಪಾರ್ಕ್ ಸಿಗುವುದು ಕಡಿಮೆ, ಈ ಭಾಗದಲ್ಲಿ ಸದರಿ ಪಾರ್ಕ್ ಅಭಿವೃದ್ಧಿ ಪಡಿಸುತ್ತಿರುವುದು ಉತ್ತಮವಾದುದು ಹಾಗೂಗಂಗಸಂದ್ರ ಕೆರೆಯ ಅಭಿವೃದ್ಧಿಯಿಂದ ಈ ಭಾಗದಲ್ಲಿ ಉತ್ತಮವಾದ ತಾಣವಾಗಲಿದೆ ಜನ ಇದರಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸ್ಮಾರ್ಟ್‌ಸಿಟಿ ವತಿಯಿಂದ ಪಾರ್ಕ್ ಅಭಿವೃದ್ಧಿ: ಪಾಲಿಕೆ ಮಹಾಪೌರ ಫರೀದಾ ಬೇಗಂ ಮಾತನಾಡಿ, ತುಮಕೂರು ನಗರದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿಶ್ರಮಿಸುತ್ತಿದ್ದು, ಈ ಭಾಗದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಪಾರ್ಕ್ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸ್ಮಾರ್ಟ್‌ಸಿಟಿ ರವರು ಆದಷ್ಟು ಬೇಗ ಅಭಿವೃದ್ಧಿಪಡಿಸಿ ಈ ಭಾಗದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತುಮಕೂರು ಮಹಾನಗರಪಾಲಿಕೆ ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಆಯುಕ್ತರಾದ ರೇಣುಕಾ, ನಗರಾಭಿವೃದ್ಧಿ ಆಯುಕ್ತ ರಾದ ಯೋಗಾನಂದ್, ಪಾಲಿಕೆ ಸದಸ್ಯರಾದ ಮನು, ನಾಮಿನಿ ಸದಸ್ಯರಾದ ತ್ಯಾಗರಾಜು, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಪಿ.ರಮೇಶ್, ಹನುಮಂತರಾಯಪ್ಪ, ಮುಖಂಡರಾದ ಶರತ್, ಶಾಂತಣ್ಣ, ವಿಜಯ್, ಗಿರೀಶ್, ಪಟ್ಟಣ ಶೆಟ್ಟಿ, ಕಲ್ಪತರು ನಾಗರಿಕರ ಹಿತರಕ್ಷಣಾ ವೇದಿಕೆ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.