ಗ್ರಾಪಂ ಕದನ: ನಾಮಪತ್ರ ಸಲ್ಲಿಕೆ ಆರಂಭ
ಹೊಸಕೋಟೆ 26, ನೆಲಮಂಗಲ ತಾಲೂಕಿನ 21 ಗ್ರಾಪಂಗೆ ಅಧಿಸೂಚನೆ
Team Udayavani, Dec 8, 2020, 1:13 PM IST
ದೇವನಹಳ್ಳಿ: ರಾಜ್ಯ ಚುನಾವಣಾ ಆಯೋಗವು ಬೆಂ.ಗ್ರಾ ಜಿಲ್ಲೆಯ 92 ಗ್ರಾಪಂಗೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.ತಾಲೂಕಿನ ಜಿಲ್ಲಾ
ಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲ ಹಂತದ ಚುನಾವಣೆಯು ಹೊಸಕೋಟೆಯ 26, ನೆಲಮಂಗಲದ 21 ಗ್ರಾಪಂಗಳಲ್ಲಿ ನಡೆಯಲಿದೆ. ಡಿ.7ರಂದು ಚುನಾವಣಾ ಅಧಿಸೂಚನೆ ಹೊರಡಿಸುವ ದಿನವಾಗಿದ್ದು, ಡಿ.11ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 12 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು,14ರಂದುಉಮೇದುವಾರಿಕೆ ಹಿಂತೆಗೆದುಕೊಳ್ಳಲುಕೊನೆ ದಿನ ಎಂದರು.
ಮತದಾನ ಅವಶ್ಯವಿದ್ದರೆ, 22ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನಅಗತ್ಯ ಇದ್ದಲ್ಲಿ 24 ರಂದು ಮತದಾನ ನಡೆಯಲಿದೆ. 30 ರಂದು ಬೆಳಗ್ಗೆ 8ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, 31 ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದು ವಿವರಿಸಿದರು.
ಎರಡನೇ ಹಂತ: ಜಿಲ್ಲೆಯ ದೊಡ್ಡಬಳ್ಳಾಪುರದ 25 ಗ್ರಾಪಂ. ದೇವನಹಳ್ಳಿಯ 20 ಗ್ರಾಪಂಗೆ 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿ.11ರಂದು ಚುನಾವಣಾ ಅಧಿಸೂಚನೆ ಹೊರಡಿಸುವ ದಿನವಾಗಿದ್ದು, 16ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ. 17ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು,19 ರಂದು ಉಮೇ ದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ. ಮತದಾನ ಅವಶ್ಯವಿದ್ದರೆ, 27 ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯವರೆಗೆಮತದಾನ ನಡೆಯಲಿದೆ. ಮರು ಮತದಾನ ಅಗತ್ಯ ಇದ್ದಲ್ಲಿ 29ರಂದು ಮತದಾನ ನಡೆಯಲಿದೆ.30ರ ಬೆಳಗ್ಗೆ8ರಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, 31ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದರು.
ಗ್ರಾಪಂಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ. ದೊಡ್ಡಬಳ್ಳಾಪುರರ ಬಾಶೆಟ್ಟಿಹಳ್ಳಿ ಗ್ರಾಪಂವ್ಯಾಪ್ತಿಯಪ್ರದೇಶವನ್ನು ಪ.ಪಂ ಆಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಿ, ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಪ್ರಾಥಮಿಕ ಅಧಿಸೂಚನೆಯನ್ನುಹೊರಡಿಸಿರುವ ಹಿನ್ನೆಲೆಯಲ್ಲಿ, ರಾಜ್ಯಚುನಾವಣಾ ಆಯೋಗದ ಡಿ.4ರ ಆದೇಶದಂತೆ ಸದರಿ ಗ್ರಾಮ ಪಂಚಾಯ್ತಿಯನ್ನು ಪ್ರಸ್ತುತ ಚುನಾವಣಾ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯ್ತಿಗಳು : ಹೊಸಕೋಟೆ ತಾಲೂಕಿನ ಗ್ರಾಪಂಗಳಾದ ಇಟ್ಟಸಂದ್ರ, ನೆಲವಾಗಿಲು, ನಂದಗುಡಿ, ದೊಡ್ಡರಳಗೆರೆ, ಸೂಲಿಬೆಲೆ, ಗಿಡ್ಡಪ್ಪನಹಳ್ಳಿ, ಕಂಬಳೀಪುರ, ಶಿವನಾಪುರ, ಬೈಲನರಸಾಪುರ, ತಾವರೆಕೆರೆ, ಮುಗಬಾಳ, ದೊಡ್ಡಹುಲ್ಲೂರು ಲಕ್ಕೊಂಡಹಳ್ಳಿ,ಕುಂಬಳಹಳ್ಳಿ, ದೊಡ್ಡಗಟ್ಟಿಗನಬ್ಬೆ, ದೊಡ್ಡನಲ್ಲಾಳ, ಓರೋಹಳ್ಳಿ, ಜಡಿಗೇನಹಳ್ಳಿ, ವಾಗಟ, ಖಾಜಿಹೊಸಹಳ್ಳಿ, ದೇವನಗುಂದಿ, ಅನುಗೊಂಡನಹಳ್ಳಿ, ಗಣಗಲೂರು,ಕಲ್ಕುಂಟೆ, ಅಗ್ರಹಾರ, ಹೆತ್ತಕ್ಕಿ, ಚೊಕ್ಕಹಳ್ಳಿ ಸೇರಿದಂತೆ ಒಟ್ಟು26 ಗ್ರಾಪಂಗಳು ಹಾಗೂ ನೆಲಮಂಗಲ ತಾಲೂಕಿನ ಗ್ರಾಪಂಗಳಾದ ಸೋಲದೇವನಹಳ್ಳಿ, ಎಂಟಗಾನಹಳ್ಳಿ, ಶ್ರೀನಿವಾಸಪುರ, ಬೂದಿಹಾಳ್, ಟಿ.ಬೇಗೂರು, ಹಸಿರುವಳ್ಳಿ, ದೊಡ್ಡಬೆಲೆ,ಕೊಡಿಗೇಹಳ್ಳಿ, ತ್ಯಾಮಗೊಂಡ್ಲು,ಕಳಲುಘಟ್ಟ, ಮಣ್ಣೆ, ಮರಳಕುಂಟೆ, ನರಸೀಪುರ, ಅಗಳಕುಪ್ಪೆ, ಸೋಂಪುರ, ಹೊನ್ನೇನಹಳ್ಳಿ, ಶಿವಗಂಗೆ, ಅರೆಬೊಮ್ಮನಹಳ್ಳಿ,ಕುಲುವನಹಳ್ಳಿ, ಗೊಲ್ಲಹಳ್ಳಿ,ಕಣೇಗೌಡನಹಳ್ಳಿ ಸೇರಿದಂತೆ ಒಟ್ಟು21 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ.
2ನೇ ಹಂತದಲ್ಲಿ ಚುನಾವಣೆ ನಡೆಯುವ ಗ್ರಾಪಂಗಳು : ದೊಡ್ಡಬಳ್ಳಾಪುರ ತಾಲೂಕಿನ ಗ್ರಾಪಂಗಳಾದಕೊಡಿಗೇಹಳ್ಳಿ, ಕೆಸ್ತೂರು, ರಾಜಘಟ್ಟ, ಕೊನಘಟ್ಟ,ಕಂಟನಕುಂಟೆ, ತೂಬಗೆರೆ, ಹಾಡೋನಹಳ್ಳಿ, ಮೆಳೇಕೋಟೆ, ಹೆಗ್ಗಡಿಹಳ್ಳಿ, ಹಣಬೆ, ತಿಪ್ಪೂರು, ದೊಡ್ಡಬೆಳವಂಗಲ, ಹಾದ್ರಿಪುರ, ಸಕ್ಕರೆಗೊಲ್ಲಹಳ್ಳಿ, ಹುಲಿಕುಂಟೆ, ಸಾಸಲು, ಭಕ್ತರಹಳ್ಳಿ, ಆರೂಢಿ, ಹೊಸಹಳ್ಳಿ, ಚನ್ನಾದೇವಿ, ಅಗ್ರಹಾರ,ಕಾಡನೂರು,ಕನಸವಾಡಿ, ಹೊನ್ನಾವರ ದೊಡ್ಡತುಮಕೂರು, ಮೇಲಿನಜೂಗಾನಹಳ್ಳಿ ಸೇರಿದಂತೆ ಒಟ್ಟು 25 ಗ್ರಾಪಂಗಳು ಹಾಗೂ ದೇವನಹಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿಗಳಾದ ಕುಂದಾಣ, ಜಾಲಿಗೆ,ಕನ್ನಮಂಗಲ, ವಿಶ್ವನಾಥಪುರ,ಕೊಯಿರಾ,ಕಾರಹಳ್ಳಿ, ಬಿದಲೂರು, ವೆಂಕಟಗಿರಿಕೋಟೆ, ಬಿಜ್ಜವಾರ, ಗೊಡ್ಲು ಮುದ್ದೇನಹಳ್ಳಿ, ಆವತಿ, ಯಲಿಯೂರು, ಗಂಗವಾರಚೌಡಪ್ಪನಹಳ್ಳಿ, ಚನ್ನಹಳ್ಳಿ, ಬೆಟ್ಟಕೋಟೆ, ಬೂದಿಗೆರೆ, ಅಣ್ಣೇಶ್ವರ, ಆಲೂರುದುದ್ದನ ಹಳ್ಳಿ, ಮಂಡಿಬೆಲೆ, ಐಬಸಾಪುರ ಸೇರಿದಂತೆ ಒಟ್ಟು20 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.