ಸಂತ್ರಸ್ತರಿಗೆ ಸಿಗುತ್ತಿಲ್ಲ ಪರಿಹಾರ: ಶಾಸಕ ಅಜಯ್ ಸಿಂಗ್
Team Udayavani, Dec 8, 2020, 4:07 PM IST
ಕಲಬುರಗಿ: ಭೀಕರ ಮಳೆಯಿಂದ ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ಜನರು ಸಂಕಷ್ಟಕ್ಕೆ ಒಳಗಾಗಿದ್ದರೂ ಜತೆಗೆ ರೈತರ ಬೆಳೆ ಎಲ್ಲ ನಾಶವಾಗಿದ್ದರೂ ಪರಿಹಾರ ಸಿಗದಿರುವುದಕ್ಕೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ| ಅಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಆರಂಭವಾಗಿರುವ ವಿಧಾನಸಭೆ ಚಳಿಗಾಲದ ಅ ಧಿವೇಶನದಲ್ಲಿ ರಾಜ್ಯ ಸರಕಾರದ ವಿರುದ್ಧ ಮಾತನಾಡಿದ ಅವರು, ಈ ವರ್ಷಭೀಕರ ನೆರೆ, ಮಳೆ ರೈತರು, ಜನರನ್ನು ಕಾಡಿತ್ತು. ಒಟ್ಟಾರೆ 24,491 ಕೋಟಿ ರೂ. ಹಾನಿ ಎಂಬುದಾಗಿ ಲೆಕ್ಕ ಹಾಕಿ ಕೇಂದ್ರಕ್ಕೆಪರಿಹಾರ ಕೇಳಿತ್ತು. ಕೇಂದ್ರ, ರಾಜ್ಯ ಎರಡೂ ಕಡೆ ಬಿಜೆಪಿಸರಕಾರ, ಪರಿಹಾರ ಹೆಚ್ಚಿಗೆ, ಬೇಗ ಬರಬಹುದು ಎಂಬುದು ಲೆಕ್ಕವಾಗಿತ್ತು. ಆದರೆ ಎರಡು ತಿಂಗಳು ಗತಿಸಿದರೂ ಇನ್ನೂಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ ಎಂದು ಅಂಕಿ-ಅಂಶ ಸಮೇತ ಸರಕಾರದ ಗಮನ ಸೆಳೆದಿದ್ದಾರೆ. 27,700 ಕುಟುಂಬಗಳಿಗೆ ತಲಾ 10 ಸಾ.ರೂ.ನಂತೆ 27 ಕೋಟಿ ರೂ. ಪರಿಹಾರ ನೀಡಲಾಗಿದೆ. ಆದರೆ 48, 424 ಕುಟುಂಬಗಳ ಮನೆಗಳು ಬಿದ್ದು, ಹೋಗಿವೆ. ಇಂದಿಗೂ ನಯಾಪೈಸೆ ಪರಿಹಾರ ನೀಡಲಾಗಿಲ್ಲ, ತುರ್ತು ಪರಿಹಾರ ವೆಂದು 120 ಕೋಟಿ ರೂ. ಬಿಡುಗಡೆ ಮಾಡಿದ್ದಾಗಿ ಹೇಳುತ್ತೀರಿ, ರೈತರ ಬೆಳೆ ಹಾನಿಗೆ ಪರಿಹಾರ ಇನ್ನೂ ಬಂದಿಲ್ಲ ಯಾಕೆ?. ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ದರೂ ಸಮರ್ಪಕ ಪರಿಹಾರ ಬಿಡುಗಡೆಯಾಗದಿರುವುದು ನಿಜಕ್ಕೂ ಅನ್ಯಾಯವನ್ನೇ ಮಾಡಿದಂತಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಅಫಜಲಪುರ, ಜೇವರ್ಗಿಯಲ್ಲಂತೂ 90 ಹಳ್ಳಿಗಳಿಗೆ ಪ್ರವಾಹ ಕಾಡಿದೆ. 1112 ಕುಟುಂಬ ನೊಂದಿವೆ. ಇವರಿಗೆ ಇಂದಿಗೂ ಹಣ ಬಂದಿಲ್ಲ. ಸಾವಿರಾರು ಮನೆಗಳುನೆಲಕ್ಕೆ ಉರುಳಿವೆ. ಅವರಿಗೆಲ್ಲರಿಗೂ ಯಾರೂ ದಿಕ್ಕಿಲ್ಲದಂತಾಗಿದೆಎಂದು ನೊಂದವರ ಗೋಳು ವಿವರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಲಬುರಗಿ ಕಡೆ ಕಾಲಿಡುತ್ತಿಲ್ಲ ಎಂದು ಸದನಕ್ಕೆ ವಿವರಣೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.