ಅತಿವೃಷ್ಟಿ ಬರೆಯಲ್ಲಿ ಹಳ್ಳಿ ರಾಜಕೀಯ ಕಾವು

Team Udayavani, Dec 8, 2020, 4:37 PM IST

MYSURU-TDY-1

ಸಾಂದರ್ಭಿಕ ಚಿತ್ರ

ಯಾದಗಿರಿ: ಜಿಲ್ಲಾದ್ಯಂತ ಅತಿವೃಷ್ಟಿ- ಅನಾವೃಷ್ಟಿಯಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದನ್ನು ಮರೆಯು ವಷ್ಟರಲ್ಲೆ ಗ್ರಾಪಂ ಚುನಾವಣೆ ಎದುರಾಗಿದ್ದು,ಚುನಾವಣೆ ಘೋಷಣೆಯಾಗಿದ್ದರಿಂದ ಗ್ರಾಮೀಣ ಭಾಗದ ಜನರ ನೋವು ಮರೆತು ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದೆ.

ಜಿಲ್ಲೆಯಲ್ಲಿ ಭೀರಕ ಪ್ರವಾಹ ಮತ್ತು ಮಳೆಯಿಂದ 88 ಸಾವಿರ ರೈತರ ಸುಮಾರು77 ಸಾವಿರ ಹೆಕ್ಟೇರ್‌ನಷ್ಟು ಅಂದಾಜು 69ಕೋಟಿ ರೂ. ಬೆಳೆ ಹಾನಿಯಾಗಿದೆ. ಸರ್ಕಾರನವೆಂಬರ್‌ ತಿಂಗಳ 23ರ ವರೆಗೆ 5,300 ರೈತರಖಾತೆಗಳಿಗೆ ಕೇವಲ 3.52 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿರುವ ಕುರಿತು ಜಿಲ್ಲಾ ಉಸ್ತುವಾರಿಸಚಿವರ ಸಭೆಗೆ ಜಿಲ್ಲಾಡಳಿತ ಮಾಹಿತಿ ನೀಡಿತ್ತು. ಜಿಲ್ಲೆಯ ರೈತರಿಗೆ ಹಾನಿಯ ಪರಿಹಾರವೇ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ ಎನ್ನುವುದು ರೈತರ ಗೋಳು. ಇದರ ಮಧ್ಯೆಯೇ ಅಲ್ಪಸ್ವಲ್ಪ ಉಳಿದ ಹತ್ತಿ ಬೆಳೆಯನ್ನು ಮಾರಾಟ ಮಾಡಿರುವ ರೈತರ ಕೈಗೆ ಹಣ ಬಂದು ಸೇರುವಷ್ಟರಲ್ಲಿಯೇ ಗ್ರಾಪಂ ಚುನಾವಣೆ ಅಖಾಡ ಸಿದ್ಧಗೊಂಡಿದೆ. ಗ್ರಾಮೀಣ ಕಟ್ಟೆಗಳಲ್ಲೆಲ್ಲಾ ರಾಜಕೀಯದ್ದೇ ಮಾತು ಆರಂಭವಾಗಿದೆ.

ಗ್ರಾಪಂ ಚುನಾವಣೆಯಲ್ಲಿಯೂ ಜಾತಿ ಲೆಕ್ಕಾಚಾರವೇ ಮೋಡಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ಯಾರನ್ನುಆರಿಸಬೇಕು, ಯಾರು ನಮ್ಮ ಕಷ್ಟಗಳನ್ನು ಕೇಳುತ್ತಾರೆ? ಎನ್ನುವ ಮಾತುಗಳು ಕೆಲವಡೆ ಚರ್ಚೆಯಾಗುತ್ತಿದ್ದರೆ, ಇನ್ನು ಕೆಲವು ಕಡೆ ನಮ್ಮನ್ನು ಯಾರು ಕೇಳುವರು ಇಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಅಯ್ಯ.. ಅಪ್ಪ…ಎನ್ನುವ ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ನಮ್ಮನ್ನು ಪರಿಣಿಸಲ್ಲ ಎಂಬುವುದು ಪ್ರಜ್ಞಾವಂತ ಮತದಾರರ ಪ್ರಶ್ನೆ.

ಯಾವ ವಾರ್ಡ್‌ನಿಂದ ಸ್ಪರ್ಧಿಸಬೇಕು, ಎಲ್ಲಿ ತಮ್ಮ ಬೆಂಬಲಿಗರು ಹೆಚ್ಚಿದ್ದಾರೆ, ಇಲ್ಲಿ ಗೆಲುವು ಸರಳವಾಗಬಹುದಾ? ಎನ್ನುವ ಲೆಕ್ಕಾಚಾರಲ್ಲಿ ಅಭ್ಯರ್ಥಿಗಳು ತೊಡಗಿದ್ದು ಗೆಲುವಿನ ತಾಳೆ ಹಾಕುತ್ತಿದ್ದಾರೆ. ಜಿಲ್ಲೆಯ 119 ಗ್ರಾಪಂಗಳಲ್ಲಿ ಎರಡು ಹಂತದಲ್ಲಿ ಚುನಾವಣೆ ಘೋಷಣೆಯಾಗಿದ್ದು, 2,291 ಸ್ಥಾನಗಳಿಗೆ ಸದಸ್ಯರು ಆಯ್ಕೆಯಾಗಲಿದ್ದಾರೆ. ಮೊದಲ ಹಂತದ ಚುನಾವಣೆ ಡಿ.22ಕ್ಕೆ ನಿಗದಿಯಾಗಿದ್ದು,ಹುಣಸಗಿಯ 18, ಸುರಪುರ 21 ಹಾಗೂ ಶಹಾಪುರ ತಾಲೂಕಿನ 24 ಗ್ರಾಪಂಗಳಲ್ಲಿ ಚುನಾವಣೆ ನಡೆಯಲಿದೆ.

ಗ್ರಾಮೀಣ ಭಾಗದ ಜನರು ಕೆಲವು ಕಡೆ ಚುನಾವಣೆ ಅಖಾಡಕ್ಕೆ ಇಳಿಯುವ ಮುನ್ನವೇ ಗ್ರಾಮಗಳ ಹಂತದಲ್ಲಿಯೇ ಮುಖಂಡರ ಸಮ್ಮುಖದಲ್ಲಿ ಒಪ್ಪಿಕೊಂಡು ಗುಡಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಇಂತಿಷ್ಟು ದೇಣಿಗೆ ನೀಡಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವ ತಂತ್ರಕ್ಕೂ ಮೊರೆ ಹೋಗಿರುವುದು ಕಂಡು ಬರುತ್ತಿದೆ. ಇನ್ನು ಕೆಲವು ಕಡೆ ಕಳೆದ ಬಾರಿ ಚುನಾವಣೆಯಲ್ಲಿ ಸ್ವಲ್ಪ ಮತಗಳ ಅಂತರದಲ್ಲಿಯೇ ಸೋಲು ಅನುಭವಿಸಿರುವ ಅಭ್ಯರ್ಥಿಗಳು ಈ ಬಾರಿಹೇಗಾದರೂ ಮಾಡಿ ಗ್ರಾಪಂ ಸದಸ್ಯನಾಗಬೇಕು ಎನ್ನುವ ಛಲದೊಂದಿಗೆ ಗ್ರಾಮೀಣ ಜನರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ.

ಮೂರು ಗ್ರಾಪಂಗಿಲ್ಲ ಚುನಾವಣೆ :

ಜಿಲ್ಲೆಯ ಸುರಪುರ ತಾಲೂಕಿನ ಎರಡು ಗ್ರಾಪಂ ಮತ್ತು ಗುರುಮಠಕಲ್‌ ತಾಲೂಕಿನ ಅನಪುರ ಗ್ರಾಪಂಗೆ ಈ ವರ್ಷ ಚುನಾವಣೆ ನಡೆಯುತ್ತಿಲ್ಲ. ಅನಪೂರ ಗಾಪಂಗೆ ಮೂರು ಗ್ರಾಮಗಳು ಒಳಪಟ್ಟು 14 ಸದಸ್ಯ ಸ್ಥಾನಗಳಿವೆ. 2018ರಲ್ಲಿ ಇಲ್ಲಿ ಚುನಾವಣೆ ನಡೆದಿದೆ. ಇನ್ನು ಅಧಿಕಾರ ಅವಧಿ ಮೂರು ವರ್ಷ ಬಾಕಿಯಿದೆ. ನಸಲವಾಯಿ ಗ್ರಾಮಕ್ಕೆ ಈ ಹಿಂದೆ 8 ಸದಸ್ಯರಿದ್ದರು, ಆದರೆ, ಚುನಾವಣೆ ವೇಳ ಸ್ಥಾನಗಳನ್ನು 6ಕ್ಕೆ ನಿಗದಿ ಮಾಡಿದ್ದರಿಂದ ಆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿಎರಡು ವರ್ಷ ಗ್ರಾಪಂ ಚುನಾವಣೆ ನಡೆದಿರಲಿಲ್ಲ. ಈ ಪಂಚಾಯಿತಿಯ ಅವ ಧಿ 2023ಕ್ಕೆ ಪೂರ್ಣಗೊಳ್ಳಲಿದೆ. ಇನ್ನು ಸುರಪುರ ತಾಲೂಕಿನ ಕರಡಕಲ್‌ ಗ್ರಾಪಂ ವ್ಯಾಪ್ತಿಗೆ ಎರಡು ಗ್ರಾಮ ಒಳಪಟ್ಟಿವೆ. ಈ ಗ್ರಾಪಂಗೆ ಇನ್ನು ಮೂರು ವರ್ಷ ಅಧಿಕಾರ ಅವಧಿ ಇದೆ.

ಯಕ್ಷಿಂತಿ, ಹಯ್ನಾಳ ಸೇರಿದಂತೆ ಇತರೆ ಪ್ರವಾಹದಿಂದ ರೈತರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಸರ್ಕಾರ ಸರಿಯಾಗಿ ಪರಿಹಾರ ಒದಗಿಸಿಲ್ಲ. ಸಂಕಷ್ಟದ ಮಧ್ಯೆಯೇ ಕೋವಿಡ್ ಆತಂಕವೂ ಮನೆ ಮಾಡಿದೆ. ಇದರ ನಡುವೆ ಚುನಾವಣೆ ಬಂದಿದ್ದು, ರಾಜಕಾರಣಿಗಳು ಗ್ರಾಮಗಳಲ್ಲಿ ಸಭೆ ನಡೆಸುತ್ತಿದ್ದಾರೆ. ಇಷ್ಟೇ ಕಾಳಜಿ ರೈತರ, ಗ್ರಾಮೀಣ ಜನರಕಷ್ಟವನ್ನು ಕೇಳುವುದಕ್ಕೆ ವಹಿಸಬೇಕು.  -ಮಲ್ಲಿಕಾರ್ಜುನ ಬಿ., ಹಯ್ನಾಳ ಗ್ರಾಪಂ ಮಾಜಿ ಅಧ್ಯಕ್ಷ

-ಅನೀಲ ಬಸೂದೆ

ಟಾಪ್ ನ್ಯೂಸ್

The audio rights of 45 movie were sold for a whopping sum

Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್‌ ಹಿಟ್‌ ʼಮಿರ್ಜಾಪುರ್‌ʼ ಸರಣಿ

Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್‌ ಹಿಟ್‌ ʼಮಿರ್ಜಾಪುರ್‌ʼ ಸರಣಿ

PCB: ನಾಲ್ಕೇ ತಿಂಗಳಿಗೆ ಪಾಕ್‌ ಕೋಚ್‌ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್;‌ ಕಾರಣ ಇಲ್ಲಿದೆ

PCB: ನಾಲ್ಕೇ ತಿಂಗಳಿಗೆ ಪಾಕ್‌ ಕೋಚ್‌ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್;‌ ಕಾರಣ ಇಲ್ಲಿದೆ

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

Bellary: ಕನ್ನಡಿಗರಿಗೆ, ಯಶ್‌ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ

Bellary: ಕನ್ನಡಿಗರಿಗೆ, ಯಶ್‌ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharanagowda-Kandakura

JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ

8-hunasagi

Hunasagi: ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಸಿಡಿಲು ಬಡಿದು ರೈತ ಸಾವು

Yadagiri: ಸಿಡಿಲು ಬಡಿದು ರೈತ ಸಾವು

MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ

MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Potholes: ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು

Potholes: ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು

7

Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್‌ ಬಂಧನ

The audio rights of 45 movie were sold for a whopping sum

Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.