ಹೂವಿನ ಹಾಸಿಗೆಯಲ್ಲ : ಉದ್ಯೋಗಸ್ಥ ಮಹಿಳೆಯರ ಬದುಕು…


Team Udayavani, Dec 9, 2020, 7:13 PM IST

Avalu-tdy-1

ಆಕೆ ಹೇಳುತ್ತಿದ್ದಳು: ನನಗೆ ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಆಗುವುದರಿಂದ, ಗಂಡ, ಮಕ್ಕಳು ಬೆಂಗಳೂರಿನ ಸ್ವಂತ ಮನೆಯಲ್ಲಿ ಇರುತ್ತಾರೆ. ನಾನು ಶುಕ್ರವಾರ ರಾತ್ರಿ ಬೆಂಗಳೂರು ತಲುಪಿ, ಮತ್ತೆಸೋಮವಾರ ಬೆಳಗ್ಗೆ ಬೇಗನೆಕಾರು ತೆಗೆದುಕೊಂಡು ಹೊರಟುಬಿಡುತ್ತೇನೆ. ಬೆಂಗಳೂರಿಂದ ಹತ್ತಿರ ಇರುವ ಸ್ಥಳಗಳಿಗೇ ಟ್ರಾನ್ಸ್ ಫರ್‌ಕೇಳಿಕೊಂಡು ಮ್ಯಾನೇಜ್‌ ಮಾಡ್ತಾ ಇದ್ದೇನೆ. ಹಾಗಾಗಿ ಈವರೆಗೂ ಯಾವುದೇ ಸಮಸ್ಯೆ ಆಗಿಲ್ಲ. ಆಫೀಸ್‌ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಇರುತ್ತೇನೆ. ಶನಿವಾರ, ಭಾನುವಾರವಂತೂ ಪುರುಸೊತ್ತೇ ಇರುವುದಿಲ್ಲ. ಭಾನುವಾರ ಐದು ತರಹದ ಸಾರು ಮಾಡಿಟ್ಟು ಟಪ್ಪರ್‌ ವೇರ್‌ ಡಬ್ಬಿಗಳಲ್ಲಿ ತುಂಬಿ ಫ್ರಿಜ್ಜಿನಲ್ಲಿ ಇಟ್ಟುಬಿಡುತ್ತೇನೆ. ವಾರ ಪೂರ್ತಿ ಅದಕ್ಕೆ ಅನ್ನ, ಚಪಾತಿ, ಪಲ್ಯಗಳನ್ನು ಹೇಗೋ ಮಾಡಿಕೊಳ್ಳುತ್ತಾರೆ. ಆದರೆ ಈ ಸಲ ದೂರದ ಊರಿಗೆ ಟ್ರಾನ್ಸ್‌ಫರ್‌ ಆಗಿದೆ. ಸ್ವಲ್ಪಕಷ್ಟ, ಬಟ್‌ ಐ ವಿಲ್‌ ಮ್ಯಾನೇಜ್‌. ಐ ಲವ್‌ ಮೈ ಜಾಬ್‌ ಎನ್ನುವಾಗಆಕೆಯ ದೃಢ ಮಾತುಗಳು, ಆತ್ಮವಿಶ್ವಾಸ ಸೂಸುವಕಣ್ಣುಗಳು, ಎಂಥ ಸವಾಲುಗಳನ್ನೂ ನಿಭಾಯಿಸಬಲ್ಲೆ ಎನ್ನುವ ನಡೆ ಒಬ್ಬ ಉದ್ಯೋಗಸ್ಥ ಮಹಿಳೆಗೆ ಮಾತ್ರ ಸಾಧ್ಯ ಎನಿಸಿದ್ದು ನಿಜ.

ಮುಂಜಾನೆ ಗೃಹ ಕೃತ್ಯದಕೆ ಲಸಗಳನ್ನೆಲ್ಲಾ ಮುಗಿಸಿ, ಗಂಡ ಮಕ್ಕಳಿಗೆ ಡಬ್ಬಿಕಟ್ಟಿ, ತಾವೂಕಟ್ಟಿಕೊಂಡು, ಗಡಿಬಿಡಿಯಲ್ಲಿ ಶಾಸ್ತ್ರಕ್ಕೆ ತಿಂದು, ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಮಧ್ಯಾಹ್ನದ ಅಡುಗೆಗೂ ಅಣಿ ಮಾಡಿಕೊಟ್ಟು, ಉದ್ಯೋಗಕ್ಕಾಗಿ ಪ್ರತಿದಿನ ಊರಿಂದಊರಿಗೆ ಅಡ್ಡಾಡುವರಿದ್ದಾರೆ. ಬಸ್ಸುಗಳನ್ನು ಬದಲಾಯಿಸಿ, ಟಂ ಟಂ ಗಾಡಿಗಳಲ್ಲಿಕುರಿಗಳ ಹಾಗೆತೂರಿಕೊಂಡು ಹಳ್ಳಿಗಳಿಗೆ ಹೋಗಿ ಕೆಲಸ ಮಾಡುವ ಶಿಕ್ಷಕಿಯರಿದ್ದಾರೆ. ಹೆಚ್ಚಿನ ಮನೆಗಳಲ್ಲಿ ಈ ಉದ್ಯೋಗಸ್ಥ ಮಹಿಳೆಯರಿಗೆ ಸಿಗುವ ಬೆಂಬಲ ಅಷ್ಟಕ್ಕಷ್ಟೇ. ದೊಡ್ಡ ಹುದ್ದೆಗಳನ್ನು ನಿಭಾಯಿಸುವ ಹೆಣ್ಣುಮಕ್ಕಳಿಗೂ ಸಹಕೆಲವು ಕಡೆಯಲ್ಲಿ ಮನೆಯವರ ಸಹಕಾರ ಸಿಗುವುದಿಲ್ಲ. ಸಂಜೆಕೆಲಸದಿಂದ ಬಂದ ಮೇಲಾದರೂ ಸ್ವಲ್ಪ ಹೊತ್ತು ಉಸ್ಸಪ್ಪಾ ಅಂತಾಕೂರುವಷ್ಟುಪುರುಸೊತ್ತಿರುವುದಿಲ್ಲ. ಅಕಸ್ಮಾತ್‌ ಲೇಟಾಗಿ ಬಂದರೆ ಮನೆಯವರ ಕೆಂಗಣ್ಣನ್ನು ಎದುರಿಸಿ, ಗಂಡನ ಗಂಟಿಕ್ಕಿದ ಮುಖದಲ್ಲೇಕಾಣುವ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮಕ್ಕಳ ಬೇಡಿಕೆಗಳಿಗೆ ಸ್ಪಂದಿಸುತ್ತಾ, ರಾತ್ರಿಯ ಅಡುಗೆ ತಯಾರಿಸಬೇಕು. ಎಲ್ಲರೂ ಊಟ ಮುಗಿಸುವ ಹೊತ್ತಿಗೆ, ನಾಳೆಯ ಅಡುಗೆಗೂ ಒಂದು ವ್ಯವಸ್ಥೆ ಮಾಡಿ, ಸುಸ್ತಾಗಿರುವುದನ್ನು ತೋರಿಸಿಕೊಳ್ಳದೆ ಹಾಸಿಗೆಯಲ್ಲಿ ಮೈ ಚೆಲ್ಲುವ ಮುನ್ನ ಗಂಡನ ಬಯಕೆಗಳ ಸ್ಪಂದನೆಗೆ ನಿರಾಕರಿಸುವಂತಿಲ್ಲ. ಇದರ ನಡುವೆ ಮಾಸಿಕ ಋತುಸ್ರಾವದ ದಿನಗಳ ಕಿರಿಕಿರಿ, ಅದರ ಹಿಂದುಮುಂದಿನ ದಿನಗಳ ಮಾನಸಿಕ, ದೈಹಿಕ ಏರುಪೇರುಗಳನ್ನು ಮೌನವಾಗಿಯೇ ಸಹಿಸಿಕೊಳ್ಳಬೇಕು. ಪ್ರಯಾಣಿಸುವಾಗ,ಕೆಲಸದ ಸ್ಥಳದಲ್ಲಿಕಾಮುಕರ ಹಸಿದಕಂಗಳ ನೋಟ, ಅಸಹ್ಯಕರ ಸ್ಪರ್ಷಗಳ ಬಗ್ಗೆ ಮನೆಯಲ್ಲಿ ಚಕಾರ ಎತ್ತುವಂತಿಲ್ಲ.

ಅಕಸ್ಮಾತ್‌ ಹೇಳಿಕೊಂಡರೆ, ಅದಕ್ಕೇ ನೋಡುಕೆಲಸಕ್ಕೆ ಹೋಗಬೇಡ ಎಂದಿದ್ದು, ನೀನು ದುಡಿದು ಯಾರನ್ನು ಸಾಕಬೇಕಾಗಿದೆ? ಬೇಕಾದರೆ ರಾಜಿನಾಮೆಕೊಟ್ಟುಬಿಡು ಎಂದು ಹೇಳುವವರೂ ಇದ್ದಾರೆ. ಮಕ್ಕಳಿಗೆ ಹುಷಾರಿಲ್ಲದಾಗ, ಶಾಲೆಯ ಪೇರೆಂಟ್ಸ್ ಮೀಟಿಂಗ್‌, ಮದುವೆ, ಮುಂಜಿ, ಮನೆಗೆ ನೆಂಟರ ಆಗಮನ,ಎಲ್ಲವನ್ನೂ ನಿಭಾಯಿಸುವ ಹೊಣೆ ಅವಳದ್ದೇ. ಅದೆಷ್ಟೇಕೆಲಸದ ಒತ್ತಡವಿದ್ದರೂ ರಜೆ ಹಾಕಲೇಬೇಕು. ಸಬೂಬು ಹೇಳುವಂತಿಲ್ಲ.

ಸಂಸಾರದಲ್ಲಿ ಏನೇ ಜಗಳಗಳು ಸಂಭವಿಸಿ ದರೂ, ಗುರಿಯಾಗುವುದು ಇವಳ ಉದ್ಯೋಗವೇ.ಕೆಲವು ಗಂಡಸರು ಹೆಂಡತಿ ಮನೆಗೆ ಬರುತ್ತಿದ್ದಂತೆ ಮೊದಲು ಆಕೆಯ ಮೊಬೈಲ್‌ ಚೆಕ್‌ ಮಾಡಲುಮುಂದಾಗುವುದುಂಟು.ಕಾಲ್‌ಗ‌ಳು, ಮೇಲ್‌ಗ‌ಳು,ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಎಲ್ಲವನ್ನೂಕೆಲವರುಕೆಟ್ಟ ಕುತೂಹಲದಿಂದ ಪ್ರಶ್ನಿಸುತ್ತಾರೆ. ಪ್ರತಿಯೊಂದಕ್ಕೂ ಆಕೆ ವಿವರಣೆಕೊಡುತ್ತಲೇ ಇರಬೇಕು. ಮನೆಯಲ್ಲಿದ್ದಾಗ

ಯಾವುದೋಕೆಲಸದ ವಿಷಯಕ್ಕೆ ಸಹೋದ್ಯೋಗಿಗಳ ಕರೆ ಬಂದರೆ, ಮನೆಯವರೆಲ್ಲರ ಮೊನಚಾದ ಚೂಪುನೋಟಗಳು ಇರಿಯುತ್ತಿರುತ್ತವೆ.ಆಫೀಸಿನಕೆಲಸವನ್ನು ಮನೆಗೆ ತರಬೇಡಎನ್ನುವ ಚುಚ್ಚುಮಾತುಗಳುಕಾದಿರುತ್ತವೆ.ಆಫೀಸಿನಲ್ಲಿ ಇರುವಾಗಲೂ ಅಷ್ಟೇ. ಸಹೋದ್ಯೋಗಿಗಳು ಹುಟ್ಟುಹಬ್ಬದ ನೆಪಕ್ಕೋ, ಪ್ರೊಮೋಷನ್‌ ಸಿಕ್ಕಿತೆಂಬ ಕಾರಣಕ್ಕೋಕಚೇರಿಯಲ್ಲೇ ಪಾರ್ಟಿ ಕೊಡಿಸಿಬಿಟ್ಟರೆ ಆಕೆಗೆ ನಿರಾತಂಕ, ಅದೇ ಕೆಲಸದ ವೇಳೆ ಮುಗಿದ ನಂತರ ಇಟ್ಟು ಕೊಂಡಲ್ಲಿ, ಮನೆಗೆ ಹೋದ ಮೇಲೆ ಮ್ಯಾನೇಜ್‌ ಮಾಡುವುದು ಹೇಗಪ್ಪಾ ಎಂದು ಯೋಚಿಸುವುದರಲ್ಲಿಯೇ ಬಸವಳಿದುಬಿಡುತ್ತಾಳೆ. ಅವುಗಳನ್ನು ಸಂಭ್ರಮಿಸುವ ಅವಕಾಶಗಳುಕಡಿಮೆ. ಕೆಲವೊಮ್ಮೆ, ನಂಬಿಕೆಗಾಗಿ ತಾನು ಹೋಗಿರುವ ಸ್ಥಳದ ಲೋಕೇಶನ್ನು ಕಳಿಸಬೇಕಾದ ಪ್ರಮೇಯವೂ ಬಂದಿರುತ್ತದೆ. ಇದರ ಜೊತೆಗೆ,ಕೆಲಸದ ಸ್ಥಳದಲ್ಲಿ ಸಹ ಎಲ್ಲಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೂ ಶಹಬ್ಟಾಶ್‌ಗಿರಿ ಸಿಗುವುದುಕಡಿಮೆ ಬಿಡಿ, ಆದರೆ ಸ್ವಲ್ಪ ಎಡವಟ್ಟಾದರೂ- “ಈ ಹೆಂಗಸರಿಗೆ ಜವಾಬ್ದಾರಿ ವಹಿಸಿದರೆ ಹೀಗೈ ಆಗುವುದು’ ಎನ್ನುವ ವ್ಯಂಗ್ಯಬಾಣಗಳು ಪುರುಷ ಸಹೋದ್ಯೋಗಿಗಳಿಂದ, ಮೇಲಧಿಕಾರಿಗಳಿಂದ ಸಹಜವಾಗಿ ತೂರಿ ಬರುತ್ತವೆ. ಗಂಡ- ಹೆಂಡತಿ ಒಂದೇ ಆಫೀಸಿನಲ್ಲಿಕೆಲಸ ಮಾಡುತ್ತಿದ್ದರಂತೂ ಆಗಿನಕಷ್ಟವನ್ನು ಹೇಳುವುದೇ ಬೇಡ. ನಗುನಗುತ್ತಾ ಯಾರನ್ನು ಮಾತನಾಡಿಸಿದರೂ ಕಷ್ಟ, ಗಂಡನಕಣ್ಣು ಸದಾ ಅವಳ ಚಟುವಟಿಕೆಗಳ ಮೇಲೆ ನಿಗಾವಹಿಸಿರುತ್ತದೆ.

ಇನ್ನು, ಹೆಂಡತಿ ಸ್ವಲ್ಪಹೆಚ್ಚು ಓದಿ ದೊಡ್ಡ ನೌಕರಿಯಲ್ಲಿದ್ದು, ಗಂಡ ಸಣ್ಣನೌಕರಿಯಲ್ಲಿದ್ದರೆ ಪ್ರತಿದಿನ ಅವಮಾನ, ಅವಹೇಳನ ತಪ್ಪದು ಆಕೆಗೆ.ಅದೆಷ್ಟು ಸವಾಲುಗಳು!!!…ಹೂವಿನಹಾಸಿಗೆಯಲ್ಲ ಈ ಉದ್ಯೋಗಸ್ಥ ಮಹಿಳೆಯರ ಜೀವನ. ಬಹುತೇಕ ಹೆಣ್ಣುಮಕ್ಕಳಿಗೆ ಇದುಕತ್ತಿಅಲುಗಿನ ಮೇಲಿನ ನಡಿಗೆ ಇದ್ದಂತೆ. ಸಮನಾಂತರಹೆಜ್ಜೆಗಳನ್ನಿಡುತ್ತಾ, ಸಮತೋಲನ ಸಾಧಿಸುತ್ತಾ ಸಾಗುತ್ತಲೇ ಇರಬೇಕು. ನಿಂತರೂ ಕಷ್ಟ, ಜೋರಾಗಿನಡೆಯುವ ಹಾಗೂ ಇಲ್ಲ. ಮನೆ ಹಾಗೂ ಉದ್ಯೋಗ ಕ್ಷೇತ್ರ ಎರಡೂ ಕಡೆ ನಿರಂತರ ಸಮತೋಲನಸಾಧಿಸುವ ಈ ಮಹಿಳೆಯರಿಗೆ ಒಂದು ಗೌರವಪೂರ್ಣ ಸಲ್ಯೂಟ್‌ ಸಲ್ಲಲೇಬೇಕು.

 

-ನಳಿನಿ. ಟಿ. ಭೀಮಪ್ಪ, ಧಾರವಾಡ

ಟಾಪ್ ನ್ಯೂಸ್

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.