ಕಿತ್ತಳೆ ಹಣ್ಣು : ಸ್ವಲ್ಪ ಹುಳಿಯಾದರೂ ಇದರಲ್ಲಿವೆ ಅನೇಕ ಔಷಧಿಯ ಗುಣಗಳು
Team Udayavani, Dec 9, 2020, 9:02 PM IST
ಕೆಲಸದ ಒತ್ತಡ, ಸಂಸಾರದ ಜವಾಬ್ದಾರಿಗಳು ಹೆಚ್ಚಾಗುತ್ತಾ ಹೋದಂತೆ ಅದನ್ನು ನಿಭಾಯಿಸಲು ಮನಸ್ಸು ನೆಮ್ಮದಿಯನ್ನು ಮರೆತು,ದೇಹ ವಿಶ್ರಾಂತಿಯನ್ನು ಮರೆತು ಯಂತ್ರದಂತೆ ನಮ್ಮ ದಿನಚರಿಯನ್ನು ದೂಡುತ್ತೇವೆ. ಮನುಷ್ಯ ದುಡ್ಡು, ಕನಸು, ಆಸೆ,ಆಕಾಂಕ್ಷೆಗಳಿಗೆ ನೀಡುವ ಮಹತ್ವದ ಒಂದೆರೆಡು ಪಾಲನ್ನಾದರೂ ತನ್ನ ಆರೋಗ್ಯಕ್ಕೆ ಕೊಟ್ಟಿದ್ದರೆ ಇಂದು ನೆಮ್ಮದಿಗಾಗಿ ಏಕಾಂಗಿತನವನ್ನು ಹುಡುಕುವ ಗೋಜಿಗೆ ಹೋಗಬೇಕಾಗುತ್ತಿಲಿಲ್ಲ.
ಸರಿಯಾದ ರೀತಿಯಲ್ಲಿ ಆರೋಗ್ಯವನ್ನು ನೋಡಿಕೊಂಡರೆ,ಯಾವ ರೋಗವು ಮೈಗೆ ಹತ್ತಿ ನಮ್ಮನ್ನು ಹಿಪ್ಪೆ ಮಾಡುತ್ತಿರಲಿಲ್ಲ. ಹಣ್ಣು,ತರಕಾರಿಗಳ ಸೇವನೆಯನ್ನು ವಾರದ ದಿನಗಳಲ್ಲಿ ರೂಢಿಯಾಗಿ ಆಯ್ದಕೊಂಡು ಪಾಲಿಸಿದರೆ ಆರೋಗ್ಯಕ್ಕೆ ಒಳಿತು. ವಿಟಮಿನ್ ಅಂಶಗಳು ದೇಹದೊಳಗಿನ ಶಕ್ತಿಯನ್ನು ವೃದ್ಧಿಸುತ್ತದೆ.
ಮನೆಯಲ್ಲಿ ಯಾರಿಗಾದರೂ ಹುಷಾರ್ ಇಲ್ಲದಾಗ, ಮನೆಗೆ ಬಂದು ಆರೋಗ್ಯ ವಿಚಾರಿಸಲು ಅಪರೂಪಕ್ಕೂದರೂ ಅತಿಥಿಗಳು ಬರುತ್ತಾರೆ. ಅವರು ಬಂದಾಗ ಕೈಯಲ್ಲೊಂದು ಕವರ್ ತಂದು ಇರುತ್ತಾರೆ. ಕುತೂಹಲದಿಂದ ಆ ಕವರ್ ಒಳಗೆ ಏನಿದೆ ಎಂದು ಇಣುಕಿದಾಗ, ಮೂಸಂಬಿ ಅಥವಾ ಕಿತ್ತಳೆ,ಆ್ಯಪಲ್ ನಂಥ ಹಣ್ಣುಗಳಿರುತ್ತವೆ. ದೇಹಕ್ಕೆ ಅಗತ್ಯ ವಿಟಮಿನ್ ತುಂಬುವ ಹಣ್ಣುಗಳನ್ನು ನಾವು ಹುಳಿಯ ನೆಪದಿಂದಲೂ ಅಥವಾ ರುಚಿ ಇಷ್ಟವಾಗದ ಕಾರಣದಿಂದಲು ಅರ್ಧ ತಿಂದು ಹಾಗೆ ಫ್ರೀಜರ್ ಯೊಳಗೆ ಇಡುತ್ತೇವೆ. ದೇಹಕ್ಕೆ ವಿಟಮಿನ್ ಅಂಶ ನೀಡುವುದರಲ್ಲಿ ಕಿತ್ತಳೆ ಹಣ್ಣು ಮುಂದು. ಕಿತ್ತಳೆ ಹಣ್ಣಿನ ಔಷಧಿಯ ಗುಣಗಳನ್ನು ನೀವು ಕೇಳಿದರೆ, ಹುಳಿಯಿದ್ದರೂ ಕಿತ್ತಳೆಯನ್ನು ತಿನ್ನಲು ಹಿಂಜರಿಯುವುದಿಲ್ಲ. ಹಾಗಾದರೆ ಬನ್ನಿ ಕಿತ್ತಳೆ ಹಣ್ಣಿನ ಉಪಯೋಗ ಹಾಗೂ ಮಹತ್ವವನ್ನು ತಿಳಿದುಕೊಳ್ಳೋಣ..
ಸ್ವಲ್ಪ ಹುಳಿಯಾದರೂ ; ಕಿತ್ತಳೆಯ ಪ್ರಯೋಜನ ಮೂರಾರು :
- ಕಿತ್ತಳೆ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ,ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೃದಯ ಸಂಬಂಧಿ ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ.
- ಕಿತ್ತಳೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಿದ್ದು,ಇದು ಮಲಬದ್ದತೆಯ ಸಮಸ್ಯೆಯನ್ನು ತಡೆಯುತ್ತದೆ.
- ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ, ದೇಹದಲ್ಲಿ ಅಲ್ಸರ್ ಸಮಸ್ಯೆಯಿದ್ದರೆ ಅದನ್ನು ತಡೆಯುತ್ತದೆ. ಚರ್ಮ ಮತ್ತು ಕೂದಲನ್ನು ಉತ್ತಮವಾಗಿ ಸಂರಕ್ಷಣೆ ಮಾಡುವುದು ಕೂಡ ಕಿತ್ತಳೆ ಹಣ್ಣಿನ ಚಮತ್ಕಾರ.!
- ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಎ ಹಾಗೂ ಪೊಟ್ಯಾಶಿಯಂನಂತಹ ಅಂಶಗಳು ಇರುವುದರಿಂದ, ಕಿತ್ತಳೆ ಹಣ್ಣು ಕಣ್ಣಿನ ಆರೋಗವನ್ನು ವೃದ್ಧಿಸುತ್ತದೆ.ದೃಷ್ಟಿಯ ಚುರುಕುತನಕ್ಕೆ ಕಿತ್ತಳೆ ಹಣ್ಣು ಸೇವನೆ ಉತ್ತಮ.
- ಕಿತ್ತಳೆ ಹಣ್ಣನ್ನು ಗರ್ಭಿಣಿಯರು ಆರು ತಿಂಗಳ ಬಳಿಕ ನಿತ್ಯ ಸೇವೆನೆ ಮಾಡಿದರೆ,ಹೆರಿಕೆ ಸಮಯದಲ್ಲಿ, ಹೆಚ್ಚು ಅನುಕೂಲವಾಗುವುದರ ಜತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ.
- ಕಿತ್ತಳೆ ಹಣ್ಣಿನಲ್ಲಿ ಫೋಲಿಕ್ ಹಾಗೂ ಫೋಲೇಟ್ ಆಮ್ಲದ ಅಂಶ ಇರುವುದರಿಂದ ಇವು ಮೆದುಳಿನ ಬೆಳವಣಿಗೆಗೆ ಸಹಕಾರಿ ಆಗುತ್ತದೆ.
- ಕಿತ್ತಳೆ ಹಣ್ಣು ಲಿಮೋನೆನ್ ಅಂಶವನ್ನು ಒಳಗೊಂಡಿದ್ದು, ಇದರ ಸೇವನೆಯಿಂದ ಅತಿಯಾದ ದೇಹದ ಕೊಬ್ಬು ನಿಯಂತ್ರಣವಾಗುತ್ತದೆ.
- ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಉರಿಯೂತದಂಥ ಸಮಸ್ಯೆಗಳು ಕಡಿಮೆ ಆಗುತ್ತದೆ.
- ಕಿತ್ತಳೆ ಹಣ್ಣಿನಲ್ಲಿ ಡಿ-ಲಿಮೋನೆನ್ ಪೋಷಕಾಂಶ ಇರುವುದರಿಂದ ಇದು, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ನಂಥ ಭಯಾನಕ ರೋಗವನ್ನು ತಡೆಯುತ್ತದೆ ಎನ್ನುವುದು ಸಂಶೋಧನೆಗಳಿಂದ ಹೊರ ಬಂದ ಸತ್ಯ.
ಕಿತ್ತಳೆ ಹಣ್ಣು ಮಾತ್ರವಲ್ಲ. ದೇಹಕ್ಕೆ ಅಗತ್ಯ ವಿಟಮಿನ್, ಪೋಷಕಾಂಶಗಳನ್ನು ನೀಡುವ ತರಕಾರಿ,ಹಣ್ಣು ಹಂಪಲುಗಳ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನೆನಪಿರಲಿ, ನಮ್ಮ ಆರೋಗ್ಯ ನಮ್ಮ ಆರೈಕೆ.
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.