2ನೇ ಅಲೆ ಕಾಲಿಡದ 2 ದೇಶಗಳಲ್ಲಿ ಭಾರತವೂ ಒಂದು!
ಅರ್ಜೆಂಟಿನಾದಲ್ಲಿ ಆರಂಭವಾಗಿಲ್ಲ 2ನೇ ಹಂತದ ವ್ಯಾಪಿಸುವಿಕೆ
Team Udayavani, Dec 10, 2020, 6:37 AM IST
ಹೈದರಾಬಾದ್‌ನ ಭಾರತ್ ಬಯೋಟೆಕ್ ಮತ್ತು ಬಯಲಾಜಿಕಲ್ ಇ ಸಂಸ್ಥೆಗಳಿಗೆ 60 ರಾಷ್ಟ್ರಗಳ ರಾಯಭಾರಿಗಳು ಭೇಟಿ ನೀಡಿ ಲಸಿಕೆ ಅಭಿವೃದ್ಧಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸದಿಲ್ಲಿ: ದೇಶದಲ್ಲಿ 3 ತಿಂಗಳ ಹಿಂದೆ ಉತ್ತುಂಗ ಕ್ಕೇರಿದ್ದ ಕೊರೊನಾ ಸೋಂಕು ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಾ ಸಾಗಿದೆ. ವಿಶೇಷವೆಂದರೆ ಅತಿ ಹೆಚ್ಚು ಸೋಂಕಿತರನ್ನು ಕಂಡ ಪ್ರಮುಖ 10 ರಾಷ್ಟ್ರಗಳ ಪೈಕಿ ಇನ್ನೂ 2ನೇ ಅಲೆ ಕಾಣಿಸದ ಎರಡೇ ಎರಡು ದೇಶಗಳಲ್ಲಿ ಭಾರತವೂ ಒಂದು.
10ರ ಪೈಕಿ 8 ದೇಶಗಳಲ್ಲಿ ಈಗಾಗಲೇ ಕೊರೊನಾ 2 ಹಾಗೂ 3ನೇ ಹಂತದ ವ್ಯಾಪಿಸುವಿಕೆ ಆರಂಭವಾಗಿದೆ. ಆದರೆ ಭಾರತ ಮತ್ತು ಅರ್ಜೆಂಟೀನಾದಲ್ಲಿ ಇನ್ನೂ ಸೋಂಕು 2ನೇ ಅಲೆಗೆ ಕಾಲಿಟ್ಟಿಲ್ಲ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರನ್ನು ಕಂಡ 15 ದೇಶಗಳನ್ನು ಪರಿಗಣಿಸಿದರೆ, ಪೋಲೆಂಡ್‌ನಲ್ಲಿ ಇನ್ನೂ 2ನೇ ಅಲೆ ಕಾಣಿಸಿಕೊಂಡಿಲ್ಲ.
ಭಾರತ, ಅರ್ಜೆಂಟೀನಾ ಮತ್ತು ಪೋಲೆಂಡ್‌ನಲ್ಲಿ ಸೋಂಕು ಉತ್ತುಂಗಕ್ಕೇರಿದ್ದೇ ವಿಳಂಬವಾಗಿ. ಭಾರತ ದಲ್ಲಿ ಸೋಂಕು ಸೆಪ್ಟೆಂಬರ್ ಮಧ್ಯಭಾಗದಲ್ಲಿ ಉತ್ತುಂಗಕ್ಕೇರಿದರೆ, ಅರ್ಜೆಂಟೀನಾದಲ್ಲಿ ಅಕ್ಟೋಬರ್ ಮೂರನೇ ವಾರ ಮತ್ತು ಪೋಲೆಂಡ್‌ನಲ್ಲಿ ನವೆಂಬರ್ ಮೊದಲ ವಾರದಲ್ಲಿ ಸೋಂಕು ಗರಿಷ್ಠ ಮಟ್ಟಕ್ಕೇರಿತ್ತು. ಭಾರತದಲ್ಲಿ ಸೋಂಕಿನ ಉತ್ತುಂಗದ ಅವಧಿಗೆ ಹೋಲಿಸಿದರೆ ಈಗ ದೈನಂದಿನ ಸೋಂಕಿತರ ಪ್ರಮಾಣ 3 ಪಟ್ಟು ಇಳಿಮುಖವಾಗಿದೆ. ಆದರೆ ಸುಮಾರು 30 ಸಾವಿರದಷ್ಟು ಮಂದಿಗೆ ಪ್ರತಿ ದಿನ ಸೋಂಕು ದೃಢಪಡುತ್ತಿರುವ ಕಾರಣ, 2ನೇ ಅಲೆಯ ಭೀತಿ ಇದ್ದೇ ಇದೆ. ಹಲವು ಅಲೆಗಳಿಗೆ ಸಾಕ್ಷಿಯಾಗಿರುವ ದೇಶಗಳಲ್ಲಿ, ಮೊದಲನೇ ಅಲೆಗಿಂತಲೂ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿತ್ತು ಎನ್ನುತ್ತವೆ ವರದಿಗಳು.
ಅಲರ್ಜಿ ಇರುವವರು ದೂರವಿರಿ
ಅಲರ್ಜಿ ಇರುವವರು ಫೈಜರ್ ಲಸಿಕೆಯಿಂದ ದೂರ ಇರಿ ಎಂದು ಬುಧವಾರ ಯು.ಕೆ. ಸರಕಾರ ತನ್ನ ಜನರಿಗೆ ಎಚ್ಚರಿಕೆ ನೀಡಿದೆ. ಇಬ್ಬರು ವ್ಯಕ್ತಿಗಳಿಗೆ ಲಸಿಕೆ ನೀಡಿದ ಬಳಿಕ ಸಮಸ್ಯೆ ತಲೆದೋರಿದ್ದರಿಂದ ಸರಕಾರ ಈ ಆದೇಶ ಹೊರಡಿಸಿದೆ.
ಶೀತಲೀಕರಣ ವ್ಯವಸ್ಥೆ ಪೂರೈಕೆ ಶುರು
ದೇಶಾದ್ಯಂತ ಲಸಿಕೆ ವಿತರಣೆಗೆ ಸಿದ್ಧತೆ ನಡೆಯುತ್ತಿರುವಂತೆಯೇ ಡಿ.10ರಿಂದ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರದ ವತಿಯಿಂದ ಪೂರೈಕೆ ಶುರುವಾಗಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ ಸದ್ಯ 85,634 ಶೀತಲೀಕರಣ ವ್ಯವಸ್ಥೆ ಇದೆ. ಅದರಲ್ಲಿ ಸಾಗಣೆ ರೀತಿಯ ಶೈತ್ಯೀಕರಣದ ಬಾಕ್ಸ್ ಮತ್ತು ಇತರ ಉಪಕರಣಗಳನ್ನು ಹೊಂದಿವೆ.
ಲಕ್ಷದ್ವೀಪದಲ್ಲಿ ಸೋಂಕು ಭೀತಿ ಇಲ್ಲ
ಲಕ್ಷದ್ವೀಪದಲ್ಲಿ ಮಾತ್ರ ಸೋಂಕಿನ ಸಮಸ್ಯೆಯೇ ಇಲ್ಲವೇನೋ ಎಂಬ ಸ್ಥಿತಿ ಇದೆ. ಯಾರೂ ಕೂಡ ಮಾಸ್ಕ್ ಧರಿಸುತ್ತಿಲ್ಲ, ಸ್ಯಾನಿಟೈಸರ್‌ಗಳನ್ನು ಬಳಕೆ ಮಾಡುತ್ತಿಲ್ಲ. ಕಟ್ಟುನಿrಟ್ಟಿನ ಕೊರೊನ ನಿಯಮಗಳೇ ಇಲ್ಲಿ ಕಂಡು ಬರುತ್ತಿದೆ. ಕಾರ್ಯಕ್ರಮಗಳನ್ನು ನಡೆಸಲೂ ನಿಯಮದ ಅಡ್ಡಿ ಇಲ್ಲ. ಸಂಸದ ಪಿ.ಪಿ.ಮೊಹಮ್ಮದ್ ಫೈಜಲ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮುತುವರ್ಜಿಯಿಂದ ಕೆಲಸ ಮಾಡಿದ್ದಾರೆ. 36 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿತ್ತು. ಹೀಗಾಗಿ, ಒಂದೇ ಒಂದು ಪ್ರಕರಣ ದಾಖಲಾಗಲಿಲ್ಲ ಎಂದು ಸಂಸದ ಫೈಜಲ್ ಹೇಳಿದ್ದಾರೆ.
ಮನೆಗೆ ಪೋಸ್ಟರ್ ಅಂಟಿಸಬೇಡಿ
ಕೊರೊನಾ ಸೋಂಕಿತರು ಎಂದು ದೃಢಪಟ್ಟವರ ಮನೆಗಳಿಗೆ ಪೋಸ್ಟರ್ ಅಂಟಿಸಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ. ವಿಪತ್ತು ನಿರ್ವಹಣಾ ಕಾಯ್ದೆಯ ಅನ್ವಯ ಸಂಬಂಧಿಸಿದ ಅಧಿಕಾರಿ ವಿಶೇಷ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭಗಳಲ್ಲಿ ಮಾತ್ರ ಪೋಸ್ಟರ್ ಅಂಟಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ನ್ಯಾ| ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.