ಸೌರವ್ ಗಂಗೂಲಿ, ಜಯ್ ಶಾ ಅಧಿಕಾರ ಮುಂದುರಿಕೆ: ಸುಪ್ರೀಂ ನಲ್ಲಿ ವಿಚಾರಣೆ ಆರಂಭ
Team Udayavani, Dec 10, 2020, 3:19 PM IST
ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಬೇಕೆಂಬ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ. ಕೆಲವು ತಿಂಗಳ ಹಿಂದೆಯೇ ಗಂಗೂಲಿ ಮತ್ತು ಜಯ್ ಶಾ ಅವರ ಅಧಿಕಾರಾವಧಿ ಮುಗಿದುಹೋಗಿದೆ.
ಸದ್ಯ ಅವರು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಧಿಕಾರದಲ್ಲಿ ಮುಂದುವರಿದ್ದಾರೆ. ಬಿಸಿಸಿಐನ ಹೊಸ ನಿಯಮಗಳ ಪ್ರಕಾರ, ಪದಾಧಿಕಾರಿಗಳು ಸತತ 6 ವರ್ಷಗಳ ಅಧಿಕಾರಾವಧಿ ನಂತರ 3 ವರ್ಷ ಕಡ್ಡಾಯ ವಿಶ್ರಾಂತಿ ಪಡೆಯಲೇಬೇಕು. ಬಿಸಿಸಿಐ ಮತ್ತು ರಾಜ್ಯಸಂಸ್ಥೆಯಲ್ಲಿ ಪ್ರತ್ಯೇಕವಾಗಿ 6 ವರ್ಷವಾಗಿರಬಹುದು, ಎರಡೂ ಸೇರಿಯೂ ಆಗಿರಬಹುದು; 3 ವರ್ಷ ವಿಶ್ರಾಂತಿ ಅನಿವಾರ್ಯ. ಈ ನಿಯಮವನ್ನು ಬದಲಿಸಬೇಕು ಎನ್ನುವುದು ಬಿಸಿಸಿಐ ಸಲ್ಲಿಸಿದ ಅರ್ಜಿಯ ಮುಖ್ಯಾಂಶ.
ಒಂದು ವೇಳೆ ನ್ಯಾಯಪೀಠ ಇದನ್ನು ಒಪ್ಪಿಕೊಂಡರೆ ಲೋಧಾ ಸಮಿತಿ ಮಾಡಿದ ನಿಯಮವೇ ಸಡಿಲವಾದಂತಾಗುತ್ತದೆ. ಒಪ್ಪಿಕೊಳ್ಳದಿದ್ದರೆ ಗಂಗೂಲಿಯಂತಹ ಸಮರ್ಥರು ಬಿಸಿಸಿಐ ಆಡಳಿತದಿಂದ ದೂರಾಗುವ ಪರಿಸ್ಥಿತಿ ಎದುರಿಸುತ್ತಾರೆ. ಇದು ಸ್ವತಃ ಕ್ರಿಕೆಟ್ ಬೆಳವಣಿಗೆಗೂ ಅಪಾಯಕಾರಿ ಎಂದು ವಾದಿಸಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.