ಗೂಗಲ್ ಮತ್ತು ಅಮೆಜಾನ್‌ಗೆ ಭಾರೀ ದಂಡ ವಿಧಿಸಿದ ಫ್ರಾನ್ಸ್
Team Udayavani, Dec 10, 2020, 6:22 PM IST
ಹೊಸದಿಲ್ಲಿ: ಫ್ರಾನ್ಸ್‌ನ ಡೇಟಾ ಪ್ರೈವೆಸಿ ರೆಗ್ಯುಲೇಟರ್ ಸಂಸ್ಥೆ ಗೂಗಲ್ ಮತ್ತು ಅಮೆಜಾನ್‌ಗೆ ಭಾರೀ ಮೊತ್ತದ ದಂಡ ವಿಧಿಸಿದೆ. ಆ ದೇಶದ ಗ್ರಾಹಕ ಸ್ನೇಹಿ ಕಾನೂನನ್ನು ಮೀರಿದ ಕಾರಣಕ್ಕೆ ಈ ಎರಡು ಸಂಸ್ಥೆಗಳು ದಂಡ ಪಾವತಿಸಬೇಕಾಗಿ ಬಂದಿದೆ.
ಇದರಲ್ಲಿ ಗೂಗಲ್‌ಗೆ 100 ಮಿಲಿಯನ್ ಯುರೋ ಹಾಗೂ ಅಮೆಜಾನ್ ಸಂಸ್ಥೆಗೆ 35 ಮಿಲಿಯನ್ ಯುರೋಗಳಷ್ಟು ದಂಡವನ್ನು ವಿಧಿಸಲಾಗಿದೆ. ಇದು ಗೂಗಲ್‌ಗೆ ವಿಧಿಸಲಾದ ಇದುವರೆಗಿನ ಅತಿದೊಡ್ಡ ಮೊತ್ತದ ದಂಡವಾಗಿದೆ. ಫೈನ್ ಫ್ರಾನ್ಸ್‌ನ ಆನ್‌ಲೈನ್ ಜಾಹೀರಾತು ಟ್ರ್ಯಾಕರ್‌ಗಳ (ಕುಕೀಗಳು) ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಈ ದೊಡ್ಡ ಪ್ರಮಾಣದ ದಂಡವನ್ನು ವಿಧಿಸಿದೆ.
ಇ-ಕಾಮರ್ಸ್ ದೈತ್ಯ ಅಮೆರಿಕನ್ ಕಂಪೆನಿ ಅಮೆಜಾನ್‌ಗೆ 35 ಮಿಲಿಯನ್ ಯುರೋಗಳಷ್ಟು ದಂಡ ವಿಧಿಸಿದೆ ಎಂದು ಸಿಎನ್ಐಎಲ್ ಹೇಳಿಕೆಯಲ್ಲಿ ತಿಳಿಸಿದೆ. ಈ ಕಂಪೆನಿಗೆ ಗೂಗಲ್‌ನಂತೆಯೇ ಆರೋಪಗಳನ್ನು ಹೊರಿಸಲಾಗಿದೆ. ಕಂಪ್ಯೂಟರ್ ವೆಬ್‌ಸೈಟ್‌ನಲ್ಲಿ ಜಾಹೀರಾತು ಕುಕೀಗಳನ್ನು ಉಳಿಸಲು ಸಂದರ್ಶಕರ ಅನುಮೋದನೆಯನ್ನು ಪಡೆದಿಲ್ಲ ಎಂದು ಫ್ರಾನ್ಸ್ ಹೇಳಿದೆ. ಆನ್‌ಲೈನ್ ನಿಯಮಗಳ ಅಡಿಯಲ್ಲಿ ಯಾವುದೇ ಕುಕೀಗಳನ್ನು ಉಳಿಸಲು ಗ್ರಾಹಕನ ಅಥವಾ ಬಳಕೆದಾರರ ಅನುಮೋದನೆ ಪಡೆಯುವುದು ಅವಶ್ಯಕ ಎಂದು ಫ್ರಾನ್ಸ್ ಹೇಳಿದೆ.
ಗೂಗಲ್ ಮತ್ತು ಅಮೆಜಾನ್ ಇಂಟರ್ನೆಟ್ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡಲು ವಿಫಲವಾಗಿದೆ ಎಂದು ನಿಯಂತ್ರಕರು ಹೇಳಿದ್ದಾರೆ. ಜಾಲತಾಣದ ಬ್ಯಾನರ್ ಬದಲಾಯಿಸಲು ಅಮೆಜಾನ್ ಮತ್ತು ಗೂಗಲ್ ಗೆ 3 ತಿಂಗಳುಗಳ ಕಾಲಾವಕಾಶನ್ನು ನೀಡಲಾಗಿದೆ. ಅವರು ವಿಫಲವಾದರೆ ಲೋಪವನ್ನು ಸರಿಪಡಿಸುವವರೆಗೆ ದಿನಕ್ಕೆ 10,000 ಯೂರೋ ಹೆಚ್ಚುವರಿ ದಂಡವನ್ನು ತೆರಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.