![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 10, 2020, 6:16 PM IST
ಮೈಸೂರು: ಅಬಲೆಯರ ರಕ್ಷಣೆ ಮಾಡಬೇಕಾದ ಪಿಎಸ್‌ಐ ದರ್ಜೆಯ ಪೊಲೀಸ್ ಅಧಿಕಾರಿಯೇ ತನ್ನ ಸಹೋದ್ಯೋಗಿ ಮಹಿಳಾ ಪಿಎಸ್‌ಐ ಅಧಿಕಾರಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವ ಪ್ರಕರಣ ಸಾಂಸ್ಕೃತಿಕ ನಗರಿಯಲ್ಲಿ ಬೆಳಕಿಗೆ ಬಂದಿದೆ.
ಇದೀಗ ವಂಚನೆಗೊಳಗಾದ ಮಹಿಳಾ ಪಿಎಸ್ಐ, ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಸ್ಥಾನದಲ್ಲಿರುವ ಪಿಎಸ್‌ಐ ವಿರುದ್ಧ ಐಪಿಸಿ 376, 406, 313, 354, 417, 504, 506 ಹಾಗೂ 509 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಮೈಸೂರು ನಗರ ವ್ಯಾಪ್ತಿಯಲ್ಲೇ ಇರುವ ಎರಡು ಪ್ರತೇಕ ಠಾಣೆಗಳ ಸಬ್ ಇನ್ಸ್ ಪೆಕ್ಟರ್ ಗಳ ನಡುವೆ ಬಹಳ ದಿನಗಳಿಂದ ಇದ್ದ ಸ್ನೇಹ ಹಾಗೂ ವಿಶ್ವಾಸ ತದನಂತರದ ದಿನಗಳಲ್ಲಿ ಪ್ರೀತಿಯಾಗಿ ಪರಿವರ್ತನೆ ಆಗಿತ್ತು ಎನ್ನಲಾಗಿದೆ.
ಇಬ್ಬರೂ ಹಲವಾರು ಸ್ಥಳಗಳಲ್ಲಿ ಸುತ್ತಾಡಿದ್ದೆವು, ಆದರೇ ವಿರೋಧದ ನಡುವೆಯೇ ನನ್ನೊಂದಿಗೆ ಬಲತ್ಕಾರ ರೀತಿಯಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದರು. ತರುವಾಯ ತಾನು ಗರ್ಭಿಣಿ ಎಂದು ಗೊತ್ತಾದ ಕೂಡಲೇ ಗಾಬರಿಗೊಂಡು ನಿನ್ನನ್ನೇ ಮದುವೆಯಾಗುವುದಾಗಿ ಹೇಳಿದ್ದರು. ಮಾತ್ರವಲ್ಲ, ತದನಂತರವೂ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದರು ಎಂದು ಮಹಿಳಾ ಪಿಎಸ್ಐ ವಿಜಯನಗರ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತಿರುವುದನ್ನು ಮನಗಂಡು, ಬೇಗ ಮದುವೆ ಆಗುವಂತೆ ತಿಳಿಸಿದರೂ, ಈ ವೇಳೆ ಗಲಾಟೆ ತೆಗೆದುದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ, ಬೇರೆ ಯಾರನ್ನಾದರೂ ಮದುವೆ ಆಗು. ನನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ನಿಂದಿಸಿದ್ದರು. ಮಾತ್ರವಲ್ಲ, ಚಾಕೊಲೇಟ್, ಹಾರ್ಲಿಕ್ಸ್ ಸೇರಿದಂತೆ ಬೇರೆ ಬೇರೆ ಪದಾರ್ಥಗಳಲ್ಲಿ ಗರ್ಭಪಾತವಾಗುವ ಔಷಧಿ ಸೇರಿಸಿ ನನಗೆ ಬಲವಂತವಾಗಿ ತಿನ್ನಿಸಿ ಗರ್ಭಪಾತ ಮಾಡಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪತಿ ಒತ್ತೆಯಾಳು…. ಪತ್ನಿ ಮೇಲೆ 17 ಮಂದಿಯಿಂದ ಅತ್ಯಾಚಾರ; ಶೀಘ್ರ ತನಿಖೆಗೆ ಆಯೋಗ ಒತ್ತಾಯ
ಏತನ್ಮಧ್ಯೆ ಆತನಿಗೆ ಮದುವೆ ನಿಶ್ಚಯವಾಗಿದ್ದು, ಆ ಮಾಹಿತಿ ಪಡೆದ ಕೂಡಲೇ ಮದುವೆ ಮನೆಗೆ ತೆರಳಿ ಮದುವೆ ನಿಲ್ಲಿಸಲಾಗಿತ್ತು. ಇದರಿಂದ ಕುಪಿತಗೊಂಡ ಆತ, ಕಳೆದ ಕೆಲ ದಿನಗಳ ಹಿಂದಷ್ಟೇ ಯಾರ ಗಮನಕ್ಕೂ ಬಾರದೆ ಬೇರೊಂದು ಮದುವೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ ಎಂದು ಮಹಿಳಾ ಪಿಎಸ್ ಐ ತಿಳಿಸಿದ್ದಾರೆ.
ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯಾಗಲು ಹಾಗೂ ನನ್ನ ಅರಿವಿಗೆ ಬಾರದಂತೆ ತಿಂಡಿ ಪದಾರ್ಥದಲ್ಲಿ ಗರ್ಭಪಾತವಾಗುವ ಔಷಧ ಸೇರಿಸಿ ನನಗೆ ಗರ್ಭಪಾತ ಆಗಲು ಕಾರಣವಾದ ಪಿಎಸ್ಐ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮಹಿಳಾ ಪಿಎಸ್ ಐ ಅವರು ವಿಜಯನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ: ನೂತನ ಕಟ್ಟಡ ಹೇಗಿರಲಿದೆ?
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.