ಹರೀಶನ ವಯಸ್ಸು ಮತ್ತು ಮದುವೆ ಕನಸು
Team Udayavani, Dec 11, 2020, 5:30 PM IST
ಹರೀಶ ವಯಸ್ಸು 36 -ಹೀಗೊಂದು ವಿಭಿನ್ನ ಶೀರ್ಷಿಕೆಯ ಸಿನಿಮಾ ಸದ್ದಿಲ್ಲದೇ ಆರಂಭವಾಗುತ್ತಿದೆ. ಹೆಸರು ಕೇಳಿದ ಕೂಡಲೇ ಇದೊಂದು ಮದುವೆಗೆ ಸಂಬಂಧಿಸಿದ ಸಿನಿಮಾವಾಗಿರಬಹುದು ಎಂದು ನೀವು ಊಹಿಸಿಕೊಂಡರೆ, ನಿಮ್ಮ ಊಹೆ ಸರಿ.
ಹೌದು, ಯುವಕನೋರ್ವ ಹುಡುಗಿ ಹುಡುಕಲು ಪರದಾಡುವ ಅಂಶವನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳಲು ತಂಡ ಹೊರಟಿದೆ. ಈ ಚಿತ್ರವನ್ನು ಗುರುರಾಜ್ ಜೇಷ್ಠ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೈಟಲ್ ಪೋಸ್ಟರ್‌ಬಿಡುಗಡೆಯಾಗಿದೆ. ಅಂದಹಾಗೆ, ಇದು ನೈಜ ಘಟನೆಯಾಧರಿತ ಸಿನಿಮಾ. ಅದನ್ನು ನಿರ್ದೇಶಕರು ಕಾಮಿಡಿ ರೂಪದಲ್ಲಿ ತರಲು ಹೊರಟಿದ್ದಾರೆ. ಇಡೀ ಸಿನಿಮಾ ಮಂಗಳೂರು ಸುತ್ತಮುತ್ತ ಚಿತ್ರೀಕರಣವಾಗಲಿದೆ. ಯೋಗೀಶ್ ಈ ಚಿತ್ರದ ನಾಯಕರಾದರೆ ಶ್ವೇತಾ ಅರೆಹೊಳೆ ನಾಯಕಿ. ಉಳಿದಂತೆ ಹಿರಿಯ ನಟ ಉಮೇಶ್, ಪ್ರಕಾಶ್ ತುಮಿನಾಡು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ಇದನ್ನೂ ಓದಿ : ಫಿಟ್ ನೆಸ್ ಟೆಸ್ಟ್ ನಲ್ಲಿ ತೇರ್ಗಡೆಯಾದ ರೋಹಿತ್: ಆಸೀಸ್ ಗೆ ಹಾರಲಿದ್ದಾರೆ ಹಿಟ್ ಮ್ಯಾನ್
ನಿರ್ದೇಶಕ ಗುರುರಾಜ್ ಅವರೇ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರದ ಒಂದು ಹಾಡನ್ನು ಪುನೀತ್ ರಾಜ್‌ಕುಮಾರ್ ಹಾಡಿದ್ದಾರೆ. ಈ ಚಿತ್ರವನ್ನು ಲಕ್ಷ್ಮೀಕಾಂತ್ ರಾವ್, ತ್ರಿಲೋಕ್‌ಕುಮಾರ್, ಆರ್ ದೀಪಾ, ಶ್ರೀದೇವಿ ಹಾಗೂ ರಜಿನಿ ಸೇರಿ ನಿರ್ಮಿಸುತ್ತಿದ್ದಾರೆ.ಚಿತ್ರಕ್ಕೆ ರಾಜೇಶ್‌ಕುಡ್ಲಕಾರ್ಯಕಾರಿ ನಿರ್ಮಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.