ಪರಿಪೂರ್ಣವಲ್ಲ ; ಸಂಪೂರ್ಣ ಬದುಕು ಅರಳಲಿ
Team Udayavani, Dec 12, 2020, 6:05 AM IST
ಸಾಂದರ್ಭಿಕ ಚಿತ್ರ
“ಕಷ್ಟಗಳು ಮನುಷ್ಯನಿಗೆ ಬಾರದೆ ಕಲ್ಲಿಗೆ ಬರುತ್ತವೆಯೇ’ ಮತ್ತು “ತಪ್ಪು ಮಾಡುವುದು ಮನುಷ್ಯ ಸಹಜ’ ಎಂಬುದು ಒಂದಕ್ಕೊಂದು ಪೂರಕ ನುಡಿಗಟ್ಟುಗಳು. ಅಂದರೆ ಮನುಷ್ಯ ನಾದವನು ತಪ್ಪು ಮಾಡಿಯೇ ಮಾಡುತ್ತಾನೆ, ತಪ್ಪಾಗುವುದು ಸಹಜ. ವಾಸದ ಮನೆ ಕಟ್ಟುವಾಗ ನೂರಕ್ಕೆ ನೂರು ಪ್ರಮಾಣಬದ್ಧ ವಾಗಿ ಕಟ್ಟಬಾರದು ಎಂಬ ಒಂದು ನಂಬಿಕೆ ಇದೆ. ಹಾಗೆ ಮಾಡಿದರೆ ಅದು ದೇವಾಲಯ ವಾಗುತ್ತದೆ ಎಂಬುದು ಪ್ರತೀತಿ.
ಬದುಕಿನಲ್ಲಿಯೂ ಪರಿಪೂರ್ಣತೆಯನ್ನು ಸಾಧಿಸಬೇಕು ಎಂಬುದು, ಮಾಡಿದ್ದೆಲ್ಲ ಪೂರ್ತಿಯಾಗಿ ಸರಿಯಿರಬೇಕು ಎಂದು ಆಗ್ರ ಹಪಡುವುದು ಒಳ್ಳೆಯ ಆಲೋಚನೆ ಅಲ್ಲ. ಎಲ್ಲವೂ ಸರಿಯಾಗಿರಬೇಕು ಎಂದು ಆಲೋಚಿಸುವುದು ಹುಚ್ಚು ತನ. ಬದುಕು ಒಂದು ಹರಿವು. ಅದು ನದಿಯಂತೆ ಓರೆಕೋರೆಯಾಗಿರುತ್ತದೆ, ಏರಿಳಿಯುತ್ತದೆ. ಆ ಅಪರಿ ಪೂರ್ಣತೆ, ಕೊರತೆಯೇ ಅದರ ಸೌಂದರ್ಯ. ಬದುಕು ಸಂಪೂರ್ಣವಾಗಿ ರಲಿ, ಆದರೆ ಪರಿಪೂರ್ಣತೆ ಗಾಗಿ ತಹತಹಿಸಬಾರದು. “ಸಂಪೂರ್ಣ’ ಎಂದರೆ, ನಾವು ಯಾವುದನ್ನು ಮಾಡುತ್ತಿದ್ದೇ ವೆಯೋ, ಏನಾಗಿದ್ದೇವೆಯೋ ಅದರಲ್ಲಿ ಪೂರ್ಣವಾಗಿ ಮಗ್ನವಾಗುವುದು, ಏಕೋ ಭಾವ. ಸಂಪೂರ್ಣತೆ ಮತ್ತು ಪರಿಪೂರ್ಣತೆ ಇವೆರಡೂ ಎರಡು ವಿರುದ್ಧ ಧ್ರುವಗಳಿದ್ದಂತೆ.
ಪರಿಪೂರ್ಣತಾವಾದವು ಮನುಷ್ಯ ಸಹಜ ಗುಣ, ಪ್ರವೃತ್ತಿಗಳಲ್ಲಿ ಕೆಲವನ್ನು ಅಲ್ಲಗಳೆ ಯುತ್ತದೆ. ಉದಾಹರಣೆಗೆ, ಸಿಟ್ಟು. ಪರಿ ಪೂರ್ಣ ಮನುಷ್ಯ ಸಿಟ್ಟಾಗಬಾರದು ಎನ್ನು ತ್ತದೆ ಪರಿಪೂರ್ಣತಾವಾದ. ಆದರೆ ಸಿಟ್ಟಾಗದಿ ರಲಿಕ್ಕಾಗುತ್ತದೆಯೇ! ಹಾಗಾಗಿ ಒಂದು ರೀತಿಯಲ್ಲಿ ಪರಿಪೂರ್ಣತೆ ಎಂಬುದೇ ಅಮಾನವೀಯ. ಇನ್ನೂ ಚೆನ್ನಾಗಿ ಹೇಳಬೇಕು ಎಂದರೆ, ಪರಿಪೂರ್ಣತೆಯ ಸಿದ್ಧಾಂತದ ಪ್ರಕಾರ ಬುದ್ಧನು ಅಳುವುದನ್ನು ಕಲ್ಪಿಸಲಾ ಗದು. ಗೌತಮ ಬುದ್ಧ ಜ್ಞಾನೋದಯವನ್ನು ಹೊಂದಿದಾತ, ಪರಿಪೂರ್ಣ, ಆತ ಅಳು ವುದು ಎಂದರೇನು!
ಒಮ್ಮೆ ಬಹುದೊಡ್ಡ ಝೆನ್ ಗುರುವೊಬ್ಬ ಸತ್ತುಹೋದ. ಅವರ ಶಿಷ್ಯರಲ್ಲಿ ಪ್ರಮುಖ ನೆನಿಸಿಕೊಂಡಾತ ಜೋರಾಗಿ ಅಳುವುದಕ್ಕೆ ಆರಂಭಿಸಿದನಂತೆ. ಅಗಲಿದ ಗುರುವಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕಾಗಿ ಸಾವಿರಾರು ಮಂದಿ ಅಲ್ಲಿ ಸೇರಿದ್ದರು. ಅವರೆಲ್ಲ ಮಹಾ ಗುರುವಿನ ಈ ಶಿಷ್ಯಪ್ರಮುಖನೂ ಜ್ಞಾನೋ ದಯ ಹೊಂದಿದವನು ಎಂದು ಭಾವಿಸಿ ದ್ದರು. ಆದರೆ ಈಗ ಆತ ಗೋಳ್ಳೋ ಎಂದು ಅಳುತ್ತಿದ್ದಾನೆ, ಕಣ್ಣುಗಳಲ್ಲಿ ನೀರು ಸುರಿಯುತ್ತಿದೆ!
ಅವರಲ್ಲಿ ಕೆಲವರು ಮೆಲ್ಲನೆ ಶಿಷ್ಯ ಪ್ರಮುಖನ ಬಳಿಗೆ ಬಂದು ಕಿವಿಯಲ್ಲಿ ಉಸುರಿದರಂತೆ, “ಎಲ್ಲರೂ ಗಮನಿಸುತ್ತಿದ್ದಾರೆ, ಹೀಗೆ ಅಳುವುದು ನಿನ್ನ ಘನತೆಗೆ ತಕ್ಕು ದಲ್ಲ, ಅವರೆಲ್ಲ ಏನಂದುಕೊಂಡಾರು’.
“ಜ್ಞಾನೋದಯ ಬದಿ ಗಿಡಿ, ನನಗೆ ದುಃಖವಾಗಿದೆ, ಅಳದೆ ಸುಳ್ಳಾಗಿ ವರ್ತಿಸ ಲಾರೆ’ ಎಂದು ಶಿಷ್ಯ ಪ್ರಮುಖ ಹೇಳಿದ.
“ಆದರೆ ಆತ್ಮ ಅವಿನಾಶಿ ಎಂಬುದಾಗಿ ನೀನೂ ಹೇಳುತ್ತಿದ್ದೆಯಲ್ಲ, ಇದೇನಿದು ಈಗ?’ ಅವರು ಪ್ರಶ್ನಿಸಿದರು.
ಆಗ ಶಿಷ್ಯಪ್ರಮುಖ ಹೇಳಿದ, “ನಾನು ಗುರುವಿನ ಆತ್ಮಕ್ಕಾಗಿ ಅಳುತ್ತಿಲ್ಲ. ಅದು ಅನಂತ ಎಂಬುದು ನಿಜ. ನಾನು ಕೊರಗುತ್ತಿ ರುವುದು ಈ ದೇಹಕ್ಕಾಗಿ, ಎಷ್ಟು ಸುಂದರ ವಾದ ಕಾಯವಿದು! ಅದು ಇನ್ನೊಮ್ಮೆ ಹುಟ್ಟಿ ಬರಲಾರದಲ್ಲ, ನಾನು ನನ್ನ ಗುರುವಿನ ದೇಹವನ್ನು ಮತ್ತೆ ನೋಡಲಾರೆನಲ್ಲ.’
ಆಸ್ತಿ, ಅಂತಸ್ತು, ಸಿರಿವಂತಿಕೆ, ಸಿದ್ಧಿ, ಪ್ರಸಿದ್ಧಿ, ಜ್ಞಾನ, ವಿದ್ಯೆ ಇತ್ಯಾದಿಗಳ ಹಂಗಿನಲ್ಲಿದ್ದು ಯಾವುದು ಮನುಷ್ಯ ಸಹಜವೋ ಅದನ್ನೆಲ್ಲ ದೂರ ಮಾಡುತ್ತ ಪರಿಪೂರ್ಣತೆಗಾಗಿ ತಹತಹಿಸಿದರೆ ಕಗ್ಗಲ್ಲಿನ ಮೂರ್ತಿ ಯಂತಾದೇವು. ಅಳು ಬಂದಾಗ ಕಣ್ಣೀರಿಡು ವುದು, ಖುಷಿಯಾದಾಗ ನಗುವುದು… ಸಂಪೂರ್ಣ ಬದುಕನ್ನು ಬದುಕೋಣ.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.