ಹೊಸ ಮತ್ಸ್ಯಧಾಮ ಘೋಷಣೆಗೆ ಶಿಫಾರಸು
15 ಹೊಸ ತಾಣಗಳು ಆಯ್ಕೆ ಜೀವ ವೈವಿಧ್ಯ ಮಂಡಳಿ ಕ್ರಮ
Team Udayavani, Dec 12, 2020, 6:08 AM IST
ಮಂಗಳೂರು: ಮಲೆನಾಡಿನಲ್ಲಿ ಹುಟ್ಟಿ ಹರಿಯುವ ನದಿಗಳಲ್ಲಿ ಅಪರೂಪದ ಮೀನು ಸಂತತಿಗಳ ಆವಾಸಸ್ಥಾನಗಳನ್ನು ಗುರುತಿಸಲಾಗಿದೆ. ಅವುಗಳನ್ನು ಮೀನುಗಾರಿಕೆ ಕಾಯ್ದೆಯಡಿ “ಮತ್ಸ್ಯಧಾಮ’ ಎಂದು ಘೋಷಿಸಿ, ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳ ಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಸರಕಾರಕ್ಕೆ ಶಿಫಾರಸು ಮಾಡಿದೆ.
ಪಶ್ಚಿಮ ಘಟ್ಟದ ತಪ್ಪಲಿನ ಶಿಶಿಲ, ಅಡ್ಡಹೊಳೆ, ರಾಮನ ಗುಳಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ 8, ಉಡುಪಿಯ ಸೀತಾನದಿ, ಕೊಡಗಿನ 2, ಮಂಡ್ಯದ 2, ಉತ್ತರ ಕನ್ನಡ ಮತ್ತು ಕಲಬುರಗಿ ಜಿಲ್ಲೆಗಳ ತಲಾ ಒಂದು ಸ್ಥಳಗಳನ್ನು “ಮತ್ಸ್ಯಧಾಮ’ ಎಂದು ಗುರುತಿಸಲಾಗಿದೆ. ಇವು ಮಹಶೀರ್, ಹರಗಿ (ಹುಲ್ಲುಗೆಂಡೆ), ಪರ್ಲ್ಸ್ಪಾಟ್ ಸಾಲ್ಮೊಸ್ಟೋಮ್ ಮುಂತಾದ ಅಪರೂಪದ ಮೀನು ಸಂತತಿಗಳ ಆವಾಸಸ್ಥಾನವಾಗಿರುವುದನ್ನು ಗುರುತಿಸಲಾಗಿದೆ. ಈಗಾಗಲೇ ಶೃಂಗೇರಿ, ಸುಳ್ಯದ ತೊಡಿಕಾನ, ಶಿವನ ಸಮುದ್ರ, ಹರಿಹರಪುರ, ತಿಂಗಳೆ, ರಾಮನಾಥಪುರ ಮುಂತಾದ 11 ಸ್ಥಳಗಳಲ್ಲಿ “ಮತ್ಸ್ಯಧಾಮ’ ಘೋಷಣೆ ಆಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ. ಅವರು ಇತ್ತೀಚೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ವಿವರ ನೀಡಿದರು.
“ಮತ್ಸ್ಯಧಾಮ’ಗಳ ಮೂಲಕ ಅಪರೂಪದ ಮೀನು ಸಂತತಿ ಸಂರಕ್ಷಣೆ ಸಾಧ್ಯವಾಗಿದೆ. ಹೊಸ ಮತ್ಸéಧಾಮಗಳ ಘೋಷಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಶಿಶಿಲ, ತೊಡಿಕಾನಗಳಲ್ಲಿ ಮಹಶೀರ್ ಮೀನು
ಬೆಳ್ತಂಗಡಿಯ ಶಿಶಿಲೇಶ್ವರ ದೇಗುಲದ “ಮತ್ಸ್ಯತೀರ್ಥ’ ದಲ್ಲಿ ಮಹಶೀರ್ ಮೀನುಗಳಿವೆ. ಸುಳ್ಯ ತಾಲೂಕಿನ ತೊಡಿಕಾನದ ಮಲ್ಲಿಕಾರ್ಜುನ ದೇವಸ್ಥಾನದ ತೀರ್ಥದಲ್ಲಿಯೂ ಇದೇ ಜಾತಿಯ ಮೀನುಗಳಿವೆ. ಮಹಶೀರ್ ಮೀನಿಗೆ ಸ್ಥಳೀಯವಾಗಿ ಪೆರುವೋಳ್ ಎನ್ನುತ್ತಾರೆ. ಕಪಿಲಾ ನದಿ ಇವುಗಳ ಆಶ್ರಯ ತಾಣ. ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲೂ ಇದು ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.