ವಾರಾಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ ಚೇತರಿಕೆ
ಮಧ್ಯಾಂತರದಲ್ಲಿ ಸೂಚ್ಯಂಕ 46,309ಕ್ಕೆ ಜಿಗಿತ
Team Udayavani, Dec 12, 2020, 12:28 AM IST
![BSE](https://www.udayavani.com/wp-content/uploads/2020/12/BSE-620x462.jpg)
![BSE](https://www.udayavani.com/wp-content/uploads/2020/12/BSE-620x462.jpg)
ಬಿಎಸ್‌ಇನಲ್ಲಿ ಕೊನೆಯ ಹಂತದಲ್ಲಿ ಖರೀದಿ ಮೂಡ್ ಇದ್ದ ಕಾರಣ ಪರಿಸ್ಥಿತಿ ಸುಧಾರಿಸಲು ನೆರವು
ಮುಂಬಯಿ: ವಾರಾಂತ್ಯವಾಗಿರುವ ಶುಕ್ರವಾರ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ನಲ್ಲಿ ಉತ್ಸಾಹದಾ ಯಕವಾಗಿಯೇ ವಹಿವಾಟು ಮುಕ್ತಾಯವಾಗಿದೆ. ಬಿಎಸ್‌ಇ ಸೂಚ್ಯಂಕ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿ ಮುಕ್ತಾಯಗೊಂಡಿದೆ. ದಿನದ ಅಂತ್ಯಕ್ಕೆ ಸೂಚ್ಯಂಕ 139.13 ಪಾಯಿಂಟ್ಸ್ ಏರಿಕೆಯಾಗುವ ಮೂಲಕ 46,099.01ರಲ್ಲಿ ಕೊನೆಯಾಗಿದೆ. ನಿಫ್ಟಿ ಸೂಚ್ಯಂಕ ಕೂಡ 35.55 ಪಾಯಿಂಟ್ಸ್ ಜಿಗಿದು, 13,513.85ರಲ್ಲಿ ಕೊನೆಯಾಯಿತು.
ಬಿಎಸ್‌ಇ ವಹಿವಾಟಿನ ಪ್ರಧಾನ ಅಂಶವೆಂದರೆ ಮಧ್ಯಾಂತರದಲ್ಲಿ ಸೂಚ್ಯಂಕ 46,309.63ಕ್ಕೆ ಏರಿಕೆ ಯಾದದ್ದು. ಅನಂತರ ಅದೇ ಉತ್ಸಾಹ ಉಳಿದೆಯೇ ಇದ್ದರೂ, ಹೂಡಿಕೆದಾರರಿಗೆ ನಿರಾಶೆಯಾಗಲಿಲ್ಲ. ಒಎನ್‌ಜಿಸಿಯ ಷೇರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಯಿತು. ಎನ್‌ಟಿಪಿಸಿ, ಟಾಟಾ ಸ್ಟೀಲ್, ಐಟಿಸಿ, ಐಸಿಐಸಿಐ ಬ್ಯಾಂಕ್, ಟೈಟನ್, ಬಜಾಜ್ ಅಟೋ ಮತ್ತು ಎಸ್‌ಬಿಐ ಷೇರುಗಳು ಅನಂತರದ ಸ್ಥಾನಗಳಲ್ಲಿ ಬಿಕರಿ ಯಾದವು. ಗುರುವಾರ ಹೊರತುಪಡಿಸಿ ಈ ವಾರ ಬಿಎಸ್‌ಇ ಸೂಚ್ಯಂಕ 1,019.46, ನಿಫ್ಟಿ ಸೂಚ್ಯಂಕ 255.30 ಪಾಯಿಂಟ್ಸ್‌ಗಳಷ್ಟು ಏರಿಕೆಯಾಗಿವೆ.
ಡಾಲರ್ ಎದುರು ರೂಪಾಯಿ ಸ್ಥಿರ
ಅಮೆರಿಕದ ಡಾಲರ್ ಎದುರು ರೂಪಾಯಿ 2 ಪೈಸೆಯಷ್ಟು ಮಾತ್ರ ವ್ಯವಹಾರ ನಡೆಸಲು ಶಕ್ತವಾಯಿತು. ಅಂದರೆ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. 73.65 ರೂ.ಗಳಿಂದ ಶುರುವಾದ ವಹಿವಾಟು ಮಧ್ಯಾಂತರದಲ್ಲಿ 73.56ಕ್ಕೆ ಏರಿಕೆಯಾಯಿತು. ದಿನಾಂತ್ಯಕ್ಕೆ ಅದು 73.71 ರೂ.ಗಳಲ್ಲಿ ಕೊನೆಗೊಂಡಿತು.
ಕಾರಣಗಳೇನು?
ಬ್ರೆಕ್ಸಿಟ್ ಡೀಲ್, ಅಮೆರಿಕದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಬಗೆಗಿನ ಮಾತುಕತೆ ಪ್ರಗತಿ ಕಾಣದ್ದು ಕೊಂಚ ಸೂಚ್ಯಂಕ ಏರಿಳಿತಕ್ಕೆ ಕಾರಣ ಧನಾತ್ಮಕವಾಗಿ ವಹಿವಾಟು ಶುರುವಾದರೂ, ಜಾಗತಿಕ ಷೇರುಪೇಟೆಯ ಪ್ರಭಾವ ಸೆನ್ಸೆಕ್ಸ್ ಓಟಕ್ಕೆ ಬ್ರೇಕ್.
ಬಿಎಸ್‌ಇನಲ್ಲಿ ಕೊನೆಯ ಹಂತದಲ್ಲಿ ಖರೀದಿ ಮೂಡ್ ಇದ್ದ ಕಾರಣ ಪರಿಸ್ಥಿತಿ ಸುಧಾರಿಸಲು ನೆರವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ](https://www.udayavani.com/wp-content/uploads/2025/02/Sensex-150x84.jpg)
![Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ](https://www.udayavani.com/wp-content/uploads/2025/02/Sensex-150x84.jpg)
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
![Nirmala-Seetaraman](https://www.udayavani.com/wp-content/uploads/2025/02/Nirmala-Seetaraman-150x90.jpg)
![Nirmala-Seetaraman](https://www.udayavani.com/wp-content/uploads/2025/02/Nirmala-Seetaraman-150x90.jpg)
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
![RBI-Logo](https://www.udayavani.com/wp-content/uploads/2025/02/RBI-Logo-150x90.jpg)
![RBI-Logo](https://www.udayavani.com/wp-content/uploads/2025/02/RBI-Logo-150x90.jpg)
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
![Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!](https://www.udayavani.com/wp-content/uploads/2025/02/BSE-5-150x89.jpg)
![Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!](https://www.udayavani.com/wp-content/uploads/2025/02/BSE-5-150x89.jpg)
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
![gold](https://www.udayavani.com/wp-content/uploads/2025/02/gold-2-150x84.jpg)
![gold](https://www.udayavani.com/wp-content/uploads/2025/02/gold-2-150x84.jpg)
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ