ಪತ್ರಿಕೋದ್ಯಮಕ್ಕೆ ಪ್ಯಾಕೇಜ್‌ ಘೋಷಿಸಿ

Team Udayavani, Dec 12, 2020, 6:15 AM IST

ಪತ್ರಿಕೋದ್ಯಮಕ್ಕೆ ಪ್ಯಾಕೇಜ್‌ ಘೋಷಿಸಿ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೊರೊನಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ಪತ್ರಿಕೋದ್ಯಮ ಕ್ಷೇತ್ರಕ್ಕೆ ಉತ್ತೇಜನಕಾರಿ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ದಿ ಇಂಡಿಯನ್‌ ನ್ಯೂಸ್‌ಪೇಪರ್‌ ಸೊಸೈಟಿ (ಐಎನ್‌ಎಸ್‌) ಅಧ್ಯಕ್ಷ ಎಲ್‌. ಆದಿ ಮೂಲಂ ಒತ್ತಾಯಿಸಿದ್ದಾರೆ.

“ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಪತ್ರಿಕೋದ್ಯಮದ ಆದಾಯ ಮೂಲಗಳಾದ ಜಾಹೀರಾತು ಮತ್ತು ವಿತರಣೆ ವ್ಯವಸ್ಥೆ ಹಿಂದೆಂದೂ ಕಾಣದಂಥ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಾಗಿ, ಹಲವು ಪ್ರಕಾಶನ ಸಂಸ್ಥೆಗಳು ಬಾಗಿಲು ಮುಚ್ಚಿವೆ. ಮತ್ತೆ ಕೆಲವು ತಮ್ಮ ಆವೃತ್ತಿಗಳನ್ನೇ ರದ್ದುಗೊಳಿಸಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ಮತ್ತಷ್ಟು ಕಾರ್ಯಚಟುವಟಿಕೆಗಳು ಬಲವಂತವಾಗಿ ಮಚ್ಚುವ ಅಪಾಯವೂ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಎಂಟು ತಿಂಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರ ಅಂದಾಜು 12,500 ರೂ. ಕೋಟಿ ರೂ. ನಷ್ಟ ಅನುಭವಿಸಿದೆ. ಸುಮಾರು 16 ಸಾವಿರ ಕೋಟಿ ರೂ. ವಾರ್ಷಿಕ ನಷ್ಟವಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ

ಪರಿಣಾಮ ಬೀರಲಿದೆ: ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭಕ್ಕೆ ಉಂಟಾಗಿರುವ ಆಘಾತ ಗಂಭೀರ ಸಾಮಾಜಿಕ- ರಾಜಕೀಯ ಪರಿಣಾಮ ಗಳನ್ನೇ ಬೀರಲಿದೆ ಎಂದು ಐಎನ್‌ಎಸ್‌ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ಯಮದಲ್ಲಿ ಪತ್ರಕರ್ತರಾಗಿ, ಮುದ್ರಕ ರಾಗಿ, ವಿತರಕರಾಗಿ ಮತ್ತು ಪ್ರತ್ಯಕ್ಷ- ಪರೋಕ್ಷವಾಗಿ ದುಡಿಯುತ್ತಿರುವ 30 ಲಕ್ಷ ಉದ್ಯೋಗಿ ಮತ್ತು ಸಿಬಂದಿ ಅಪಾಯದ ಅಂಚಿನಲ್ಲಿದ್ದಾರೆ. ಉದ್ಯೋಗಿ ಮತ್ತು ಅವರ ಕುಟುಂಬವನ್ನೊಳಗೊಂಡಂತೆ ಲಕ್ಷಾಂತರ ಭಾರತೀಯರು, ಅಲ್ಲದೆ ಉದ್ಯಮ ಸಂಬಂಧಿತ ಕೈಗಾರಿಕೆಗಳು, ಮುದ್ರಣ ಪ್ರಕ್ರಿಯೆ, ಸುದ್ದಿಪತ್ರಿಕೆ ಮಾರಾಟಗಾರರು ಮತ್ತು ಪತ್ರಿಕೆ ಹಂಚುವ ಹುಡುಗರನ್ನೊಳಗೊಂಡ ವಿತರಣ ಸರಪಳಿ, ಇತ್ಯಾದಿ ಪತ್ರಿಕೋದ್ಯಮದ ಅವನತಿಯ ವಿನಾಶ ಕಾರಿ ಪರಿಣಾಮ ಎದುರಿಸುತ್ತಿದ್ದಾರೆ. ಇವರೆಲ್ಲರೂ ಹಲವು ದಶಕಗಳಿಂದ, ಇದನ್ನೇ ಜೀವನೋಪಾಯ ಮಾಡಿಕೊಂಡವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದಲೂ ಮೆಚ್ಚುಗೆ: ಪರಿ ಶೀಲಿಸಲ್ಪಟ್ಟ ಮತ್ತು ವಾಸ್ತವ ಸುದ್ದಿಗಳ ಪ್ರಸಾರ ಸವಾಲಾಗಿರುವ ಈ ಸಮಯದಲ್ಲಿ ಭಾರತೀಯ ವೃತ್ತಪತ್ರಿಕೆಗಳು ವಹಿಸುತ್ತಿರುವ ಮಹತ್ವದ ಪಾತ್ರ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಮೆಚ್ಚುಗೆ ವ್ಯಕ್ತಪಡಿ ಸಿದೆ ಎಂದು ಐಎನ್‌ಎಸ್‌ ಅಧ್ಯಕ್ಷ ಆದಿಮೂಲಂ ಹೇಳಿದ್ದಾರೆ. “ಸಂಪೂರ್ಣ ಉದ್ಯಮದ ಪುನಶ್ಚೇತನ ಕ್ಕಾಗಿ ಅತ್ಯಗತ್ಯವಿರುವ ಉತ್ತೇಜನಕಾರಿ ಪ್ಯಾಕೇಜ್‌ ಘೋಷಿಸಲು ಸರಕಾರ ಮುಂದಾಗಬೇಕು. ನ್ಯೂಸ್‌ಪ್ರಿಂಟ್‌- ಜಿಎನ್‌ಪಿ ಮತ್ತು ಎಲ್‌ಡಬ್ಲ್ಯುಸಿ ಪೇಪರ್‌ ಮೇಲಿನ ಬಾಕಿ ಉಳಿದ ಶೇ.5 ಕಸ್ಟಮ್ಸ್‌ ಸುಂಕ ರದ್ದತಿ, ಮುದ್ರಣ ಮಾಧ್ಯಮಕ್ಕಾಗಿ ಸರಕಾರದ ವೆಚ್ಚ ಶೇ.200ರಷ್ಟು ಹೆಚ್ಚಿಸುವುದು, ಬಾಕಿ ಉಳಿದ ಜಾಹೀರಾತು ಬಿಲ್‌ಗ‌ಳನ್ನು ಬಿಒಸಿ ಮತ್ತು ರಾಜ್ಯ ಸರಕಾರಗಳ ಮೂಲಕ ಕೂಡಲೇ ಬಿಡುಗಡೆಗೊಳಿಸುವುದು- ಇವು ಈ ಸಮಯದ ತುರ್ತಾಗಿದೆ’ ಎಂದು ಅವರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

Ambari-utsava

Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’

Basavaraj-horatti

CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Chandigarh: ಅಂಬೇಡ್ಕರ್‌ ಕುರಿತು ವಿವಾದ: ಚಂಡೀಗಢ ಪಾಲಿಕೆಯಲ್ಲಿ ತಳ್ಳಾಟ

Chandigarh: ಅಂಬೇಡ್ಕರ್‌ ಕುರಿತು ವಿವಾದ: ಚಂಡೀಗಢ ಪಾಲಿಕೆಯಲ್ಲಿ ತಳ್ಳಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

Ambari-utsava

Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’

Basavaraj-horatti

CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.