“ನಮ್ಮಮೆಟ್ರೋ’: ಲಕ್ಷದ ಗಡಿ ದಾಟಿದ ಪ್ರಯಾಣಿಕರ ಸಂಖ್ಯೆ
Team Udayavani, Dec 12, 2020, 12:16 PM IST
ಬೆಂಗಳೂರು: ಕೋವಿಡ್ ಮತ್ತು ಜಾರಿಯಾದ ಸುದೀರ್ಘ ಲಾಕ್ಡೌನ್ ನಂತರ ಮೊದಲ ಬಾರಿಗೆ “ನಮ್ಮ ಮೆಟ್ರೋ’ ಪ್ರಯಾಣಿಕರ ಸಂಖ್ಯೆ ಲಕ್ಷದ ಗಡಿ ದಾಟಿದೆ. ಕಳೆದ ಒಂದು ತಿಂಗಳಿಂದ ಪ್ರಯಾಣಿಕರ ಸಂಖ್ಯೆ70-80 ಸಾವಿರದ ಆಸುಪಾಸು ಇತ್ತು. ಬುಧವಾರ ಮತ್ತು ಗುರುವಾರ ಈ ಸಂಖ್ಯೆ ಒಂದು ಲಕ್ಷ ದಾಟಿದ್ದು, ಇದರೊಂದಿಗೆ ಆದಾಯ ಕೂಡ ಗಣನೀಯವಾಗಿ ಏರಿಕೆ ಕಂಡು ಬಂದಿದೆ. ಇದು ಸಹಜವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್ಸಿಎಲ್)ದಲ್ಲಿ ಸಂತಸ ಮೂಡಿಸಿದೆ.
ಲಾಕ್ಡೌನ್ ನಂತರ ಸೆ. 7ರಂದು ನೇರಳೆ ಮಾರ್ಗದಲ್ಲಿ ಸೀಮಿತ ಅವಧಿಯಲ್ಲಿ ಮೆಟ್ರೋ ಪುನಾರಂಭಗೊಂಡಿತ್ತು. ಅಂದು ಕೇವಲ 3,770 ಜನ ಪ್ರಯಾಣಿಸಿ ದ್ದರು. ಇದರಿಂದಬಂದಆದಾಯವುಕಾರ್ಯಾಚರಣೆಗೆಖರ್ಚಾದ ವಿದ್ಯುತ್ ದರಕ್ಕಿಂತ ಅರ್ಧದಷ್ಟೂ ಅಂದರೆ 3,770 ರೂ.ಬಂದಿತ್ತು. ಎರಡನೇಹಂತದಲ್ಲಿ ಸೆ.9ರಂದು ಹಸಿರು ಮಾರ್ಗ ಹಾಗೂ 11ರಂದು ಪೂರ್ಣ ಪ್ರಮಾಣ ಸಂಚಾರ ಶುರುವಾಗಿತ್ತು. ಅಲ್ಲಿಂದ ಸರಿಯಾಗಿ ಮೂರು ತಿಂಗಳಲ್ಲಿ “ನಮ್ಮ ಮೆಟ್ರೋ’ ಈ ಸಾಧನೆ ಮಾಡಿದೆ.
ಇದನ್ನೂ ಓದಿ : ವೇತನ ನೀಡದ ಆರೋಪ : ಕಾರ್ಮಿಕರ ಆಕ್ರೋಶಕ್ಕೆ ದೇಶದ ಮೊದಲ ಐಫೋನ್ ಕಂಪನಿ ಧ್ವಂಸ
ಒಂದೆಡೆ ನಗರದಲ್ಲಿ ಕೋವಿಡ್ ಹಾವಳಿ ತಗ್ಗಿದೆ. ಮತ್ತೂಂದೆಡೆ ನಿಧಾನವಾಗಿ ಕೆಲವು ಕಂಪೆನಿಗಳು ಮನೆಯಿಂದ ಕೆಲಸ ಮಾಡುವ ನಿಯಮ ಸಡಿಲಗೊಳಿಸುತ್ತಿವೆ. ಇದರೊಂದಿಗೆ ಬಿಎಂಆರ್ಸಿಎಲ್ನಲ್ಲಿ ಅನುಸರಿಸುತ್ತಿರುವಕ್ರಮಗಳುಇವೆಲ್ಲವೂಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸಿವೆ. ಹಾಗಾಗಿ, ಜನ ಮೆಟ್ರೋದತ್ತ ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವವಿಶ್ವಾಸಇದೆಎಂದುನಿಗಮದನಿರ್ವಹಣೆ ಮತ್ತು ಕಾರ್ಯಾಚರಣೆ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಪ್ರಯಾಣಿಕರ ಸಂಖ್ಯೆ ಏರಿಕೆ : ಈ ಮಧ್ಯೆ ಶುಕ್ರವಾರಕೂಡ ಬಸ್ ಮುಷ್ಕರದಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ರಾತ್ರಿ 9.50ಕ್ಕೆ ಒಂದು ಲಕ್ಷ ತಲುಪಿತ್ತು. ಆದಾಯದ ನಿಖರ ಮಾಹಿತಿ ಲಭ್ಯ ಇರಲಿಲ್ಲ. ಸದ್ಯಕೊನೆಯ ಮೆಟ್ರೋ ರೈಲು ಸೇವೆ ರಾತ್ರಿ9 ಗಂಟೆಗೆ ನಾಲ್ಕೂ ದಿಕ್ಕುಗಳಿಂದ ಇದೆ.
50 ರೈಲು ಕಾರ್ಯಾಚರಣೆ : ಬಸ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ಎಲ್ಲ 50 ಮೆಟ್ರೋ ರೈಲುಗಳನ್ನುಕಾರ್ಯಾಚರಣೆ ಮಾಡಲು ಬಿಎಂಆರ್ಸಿಎಲ್ ನಿರ್ಧರಿಸಿದೆ. ಶುಕ್ರವಾರದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ದಟ್ಟಣೆ ಅವಧಿಯಲ್ಲಿ ಎಲ್ಲ50 ರೈಲುಗಳ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ಮೆಟ್ರೋ ಕಾರ್ಡ್ಗಳನ್ನು ಬಳಸಿ ಪ್ರಯಾಣಿಸ ಬಹುದು. ಹೊಸಕಾರ್ಡ್ಗಳನ್ನು ಡೆಬಿಟ್ ಅಥವಾಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ನಿಲ್ದಾಣಗಳಲ್ಲಿ ಹಣಪಾವತಿ ಮಾಡಿ, ಆರಂಭಿಕ ಟಾಪ್ ಅಪ್ನೊಂದಿಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯ ಎಲ್ಲ ನಿಲ್ದಾಣಗಳಲ್ಲೂ ಲಭ್ಯ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.