174 ಸ್ಥಾನಕ್ಕೆ 655 ನಾಮಪತ್ರ ಸಲ್ಲಿಕೆ


Team Udayavani, Dec 12, 2020, 6:55 PM IST

174 ಸ್ಥಾನಕ್ಕೆ 655 ನಾಮಪತ್ರ ಸಲ್ಲಿಕೆ

ಲಕ್ಷ್ಮೇಶ್ವರ: ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಿತು.

ಲಕ್ಷಮೇಶ್ವರ ತಾಪಂ ವ್ಯಾಪ್ತಿ 14 ಗ್ರಾಪಂ ಹೊಂದಿದ್ದು, ಇದರಲ್ಲಿ ಬಟ್ಟೂರು ಗ್ರಾಪಂ ಚುನಾವಣೆ ಇಲ್ಲದ್ದರಿಂದ 13 ಪಂಚಾಯತಿಗಳಿಗೆ ಒಟ್ಟು 174 ಸದಸ್ಯ ಸ್ಥಾನಕ್ಕೆ ಡಿ. 22 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.

ನಾಮಪತ್ರ ಸಲ್ಲಿಕೆ ಡಿ.7ರಿಂದಲೇ ಪ್ರಾರಂಭವಾಗಿದ್ದರೂ ಬಹುತೇಕರುಶುಭ ದಿನ, ಶುಭ ಮಹೂರ್ತ, ಘಳಿಗೆ, ಸಂಖ್ಯಾಶಾಸ್ತ್ರದ ಲೆಕ್ಕಾಚಾರದಲ್ಲಿ ಗುರುವಾರ ಮತ್ತು ಶುಭ ಶುಕ್ರವಾರದ ದಿನ ಹೆಚ್ಚುನಾಮಪತ್ರ ಸಲ್ಲಿಸಿದರು. ಬೆಳಿಗ್ಗೆಯಿಂದಲೇನಾಮಪತ್ರ ಸಲ್ಲಿಸುವ ಅಭ್ಯರ್ಥಿ ತಮ್ಮ ಕುಟುಂಬದ ಸದಸ್ಯರು, ಬೆಂಬಲಿಗರೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕನಾಮಪತ್ರ ಸಲ್ಲಿಸಿದ್ದು ಕಂಡು ಬಂದಿತು.  ಇನ್ನು ಗ್ರಾಮ ಪಂಚಾಯತಿ ಹೊಂದಿರದ ಗ್ರಾಮದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಟ್ರ್ಯಾಕ್ಟರ್‌, ಕಾರು, ಬೈಕ್‌ಗಳ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ಬಳಿಕ ತಮ್ಮ ಜೊತೆ ಬಂದವರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಿದ್ದು ಸಾಮಾನ್ಯವಾಗಿತ್ತು.ಕೊನೆಯ ದಿನವೇ ನಾಮಪತ್ರ ಸಲ್ಲಿಸಲು ನಿರ್ಧರಿಸಿದ ಅನೇಕರು ಅವಶ್ಯಕ ಕಾಗದ ಪತ್ರಗಳನ್ನು ಸಿದ್ದಪಡಿಸುವುದರಲ್ಲಿ ಹೆಣಗಾಡಿದ್ದು ಕಂಡು ಬಂದಿತು. ಇನ್ನು ನಾಮಪತ್ರ ತಿರಸ್ಕೃತವಾಗಬಾರದು. ನಾನೂ ಒಂದು ಕೈ ನೋಡೇ ಬಿಡೋಣಾ, ಮತ್ತೂಬ್ಬರಿಗೆ ಟಾಂಗ್‌ ಕೊಡಲು, ಡಿಮ್ಯಾಂಡ್‌ ಮಾಡಲು ಹೀಗೆ ಅನೇಕ ಕಾರಣಗಳಿಂದ ಸಂಬಂಧ, ಗೆಳೆತನ, ಸಹೋದರತ್ವ ಎಲ್ಲವನ್ನೂ ಮೀರಿ ನಾಮಪತ್ರ ಸಲ್ಲಿಸಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಶುಕ್ರವಾರ ತಾಲೂಕಿನ ಮಾಡಳ್ಳಿ, ಹುಲ್ಲೂರು ಗೊಜನೂರ, ಬಾಳೆಹೊಸೂರಿನಲ್ಲಿ ಆಕಾಂಕ್ಷಿಗಳಿಗೆ ಚೀಟಿ ಕೊಟ್ಟು ರಾತ್ರಿ 8 ಗಂಟೆಯವರೆಗೂ ನಾಮಪತ್ರ ಸ್ವೀಕರಿಸಲಾಗಿದೆ.

174 ಸ್ಥಾನಕ್ಕೆ 655 ನಾಮಪತ್ರ ಸಲ್ಲಿಕೆ: 28 ಸದಸ್ಯರನ್ನೊಳಗೊಂಡ ಶಿಗ್ಲಿ ಪಂಚಾಯತಿಗೆ 126ನಾಮಪತ್ರಗಳು, 13 ಸದಸ್ಯರನ್ನೊಳಗೊಂಡ ಆದರಳ್ಳಿಗೆ 78, 11 ಸದಸ್ಯರಿರುವಅಡರಕಟ್ಟಿಗೆ 57, 15 ಸದಸ್ಯರಿರುವ ಬಾಲೇಹೊಸೂರಿಗೆ 41, 15 ಸದಸ್ಯರಿರುವ ದೊಡ್ಡೊರಿಗೆ-48, 9 ಸದಸ್ಯರಿರುವ ಪು. ಬಡ್ನಿಗೆ 27, 13 ಸದಸ್ಯರಿರುವ ಗೊಜನೂರಿಗೆ 35, 8 ಸದಸ್ಯರಿರುವ ಗೋವನಾಳಕ್ಕೆ 31, 9 ಸದಸ್ಯರಿರುವ ಹುಲ್ಲೂರಿಗೆ 31, 11 ಸದಸ್ಯರಿರುವ ಮಾಡಳ್ಳಿ 21, 10 ಸದಸ್ಯರಿರುವ ರಾಮಗಿರಿಗೆ 51, 12 ಸದಸ್ಯರಿರುವ ಯಳವತ್ತಿಗೆ 30, 20 ಸದಸ್ಯರಿರುವ ಸೂರಣಗಿಗೆ-79 ಸೇರಿ ಒಟ್ಟು ನಾಮಪತ್ರ ಸಲ್ಲಿಸಿ ಚುನಾವಣೆಗೆ ಸರ್ಧಿಸಲೇಬೇಕು ಎಂಬ ದಿಟ್ಟ ನಿರ್ಧಾರ ಕೈಗೊಂಡ ಅಭ್ಯರ್ಥಿಗಳು ಪಕ್ಷ, ಜಾತಿ ಇತರೆಲ್ಲ ಲೆಕ್ಕಾಚಾರದಲ್ಲಿ ಗೆಲ್ಲುವ ತಂತ್ರ ರೂಪಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಮತದಾರರ ಓಲೈಸುವಲ್ಲಿ ನಿರತರಾಗಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿಗರು, ಯುವಕರಿಗೆ ಹೋಟೆಲ್‌, ದಾಬಾಗಳಿಗೆ ಕರೆದುಕೊಂಡು ಹೋಗಿ ಓಲೈಸಿಕೊಳ್ಳುವ ತಂತ್ರ-ಪ್ರತಿತಂತ್ರಕ್ಕೆ ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.