ತನಿಖಾಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಣೆ
Team Udayavani, Dec 13, 2020, 3:56 PM IST
ಕಲಬುರಗಿ: ಮಹಾನಗರ ತಲ್ಲಣಗೊಳಿಸಿದ್ದ ಮತ್ತು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಅಶೋಕ ನಗರ ಠಾಣೆ ವ್ಯಾಪ್ತಿಯ ಗೋದುತಾಯಿ ಕಾಲೋನಿಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದ್ದ ಉದ್ಯಮಿ ಸುನೀಲ ರಂಕಾ ಪ್ರಕರಣ ಭೇದಿಸಿ, ಆರೋಪಿಗಳನ್ನು ಸೆರೆ ಹಿಡಿದಿರುವ ತನಿಖಾ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತಾಲಯದ ಡಿಸಿಪಿ ಡಿ.ಕಿಶೋರಬಾಬುಶ್ಲಾಘಿಸಿದರು.
ಶನಿವಾರ ನಗರದ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ತನಿಖಾ ತಂಡದದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಅಶೋಕ ನಗರ ಇನ್ ಸ್ಪೆಕ್ಟರ್ ಪಂಡಿತ ಸಗರ ಮತ್ತವರ ವಿಶೇಷ ತಂಡದ ಸಿಬ್ಬಂದಿ ಮಾಹಿತಿ ಕಲೆ ಹಾಕಿ, ಮಾದರಿಯಾಗಿ ಶ್ರಮವಹಿಸಿ ಕೆಲಸ ಮಾಡುವ ಮೂಲಕ ಸವಾಲಿನಪ್ರಕರಣ ಪತ್ತೆ ಮಾಡುವ ಮೂಲಕ ಇಲಾಖೆ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಮನೆ ಎದುರೆ ಗುಂಡಿಟ್ಟು ಕೊಲೆ ನಡೆದ ಬಳಿಕ, ತನಿಖೆ ಶುರು ಮಾಡಿದರೂ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಹಗಲು-ರಾತ್ರಿ ಎನ್ನದೆ ಶ್ರಮ ವಹಿಸಿದ ತನಿಖಾ ತಂಡದವರು ಚಾಣಾಕ್ಷತನದಿಂದ ಕೆಲಸ ಮಾಡುವ ಮೂಲಕ ಪ್ರಕರಣ ಬೇಧಿಸಿದ್ದಾರೆ ಎಂದು ಹೇಳಿದರು.
ಎ ಉಪ ವಿಭಾಗದ ಎಸಿಪಿ ಗಂಗಾಧರ ಬಿ.ಎಂ. ಇನ್‌ಸ್ಪೆಕ್ಟರ್‌ಗಳಾದ ಪಂಡಿತ ಸಗರ, ಸಿದ್ದರಾಮೇಶ್ವರ ಗಡದ, ಕಪಿಲ್‌ದೇವ, ಅರುಣಕುಮಾರ ಮುರಗುಂಡಿ ಮತ್ತು ಸಿಬ್ಬಂದಿ ಗುರುಮೂರ್ತಿ, ಸಂಜುಕುಮಾರ, ಮಲ್ಲಿಕಾರ್ಜುನ, ಶರಣಗೌಡ ಪಾಟೀಲ, ಶಿವಲಿಂಗ, ಚನ್ನು, ಮಲ್ಲಿಕಾರ್ಜುನ, ಶಿವಶರಣಪ್ಪ, ಪ್ರಲ್ಹಾದ ಇತರ ಸಿಬ್ಬಂದಿಗೆ ಪ್ರಶಂಸನಾ ಪತ್ರಗಳನ್ನು ಕಿಶೋರಬಾಬು ವಿತರಿಸಿ, ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.