ಸೇವಾ ಮಂಡಲವು ವೈದ್ಯಕೀಯ ಕ್ಷೇತ್ರದಲ್ಲೂ ವಿಶ್ವಪ್ರಸಿದ್ಧಿ ಪಡೆಯಲಿ: ಸಂಯಮೀಂದ್ರ ಶ್ರೀ
Team Udayavani, Dec 13, 2020, 7:48 PM IST
ಮುಂಬಯಿ, ಡಿ. 12: ವಿಶ್ವವಿಖ್ಯಾತ ಗಣೇಶೋತ್ಸವ ಮಂಡಳಿ ಎಂದೇ ಬಿಂಬಿತ ವಾಗಿರುವ ಜಿಎಸ್‌ಬಿ ಸೇವಾ ಮಂಡಲ ಕಿಂಗ್‌ಸರ್ಕಲ್ ಇದರ ಬಹು ಕಾಲದ ನಿರೀಕ್ಷೆಯ ಸೇಜ್ (ಎಸ್‌ಎಜಿಇ) ಹಾಸ್ಪೆಟಲ್ ಪ್ರಾಜೆಕ್ಟ್‌ನ ಶಿಲಾನ್ಯಾಸ ಕಾರ್ಯ ಕ್ರಮವು ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾ ದರ ದಿವ್ಯ ಹಸ್ತದಿಂದ ಅದ್ದೂರಿಯಾಗಿ ನಡೆಯಿತು.
ಮಂಡಲವು ಖರೀದಿಸಿರುವ 9.75 ಎಕ್ರೆ ಜಾಗದಲ್ಲಿ ಮೀರಾ-ಭಾಯಂದರ್‌ನ ವರ್ಸಾವೇಯಲ್ಲಿ ಡಿ. 10ರಂದು ಬೆಳಗ್ಗೆ 8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಡಿ. 8 ರಂದು ಗುರು ಸ್ಮರಣೆ, ಗಣಪತಿ ಪೂಜೆ, ಭೂವರಾಹ ಹವನ ನಡೆಯಿತು. ಡಿ. 9ರಂದು ಗಣಪತಿ ಹೋಮ, ನವಗ್ರಹ ಹವನ ಇನ್ನಿತರ ಪೂಜಾವಿಧಿಗಳು ನೆರವೇರಿದವು.
ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇವಾ ಮಂಡಲದ ಅಧ್ಯಕ್ಷ ರಮೇಶ್ ಭಂಡಾರ್ಕರ್ ಮತ್ತು ಕಾರ್ಯದರ್ಶಿ ಶಿವಾನಂದ ಭಟ್ ಅವರಿಂದ ಪೂಜ್ಯ ಗುರುವರ್ಯರ ಪಾದ ಪೂಜೆ ನಡೆಯಿತು. ಮಂಡಳದ ಉಪಾಧ್ಯಕ್ಷ ಯಶವಂತ್ ಕಾಮತ್ ಸ್ವಾಗತಿಸಿದರು. ಬಳಿಕ ಮಂಡಳದ ಆರ್. ಜಿ. ಭಟ್ ಪ್ರಸ್ತಾವಿಸಿ, ಮಂಡಳದ ಆಸ್ಪತ್ರೆ ಸ್ಥಾಪನೆಯ ಆವಶ್ಯಕತೆಯನ್ನು ವಿವರಿಸಿದರು. ಈ ಬೃಹತ್ ಯೋಜನೆ ಶೀಘ್ರದಲ್ಲೇ ಪೂರ್ಣಗೊಂಡು ಕಾರ್ಯರೂಪಕ್ಕೆ ಬರಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.
ಬಳಿಕ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಜಿಎಸ್‌ಬಿ ಸಮಾಜದವರು ಕರ್ನಾಟಕ, ಕೇರಳದಿಂದ ಹಲವು ಶತಮಾನಗಳ ಹಿಂದೆ ಮುಂಬಯಿಗೆ ಆಗಮಿಸಿ ನೆಲೆಸಿದವರು. ನಮ್ಮ ಸಮಾಜದ ಉದ್ಧಾರದೊಂದಿಗೆ ಇತರರಿಗೂ ಒಳಿತಾಗಲು ಸಹಕರಿಸುತ್ತಿರುವವರು ನಾವು. ಅದೇ ರೀತಿ ಸದ್ಯದಲ್ಲೇ ಇಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಆಸ್ಪತ್ರೆ ಜಿಎಸ್‌ಬಿ ಸಮಾಜ ಮಾತ್ರವಲ್ಲದೆ ಇತರ ಸಮಾಜದವರಿಗೂ ಉಪಯೋಗವಾಗಲಿ. ನಮ್ಮ ಕಾಶೀ ಮಠ ಪರಂಪರೆಯ ಹೆಚ್ಚಿನ ಗುರುವರ್ಯರು ಆಯುರ್ವೇದ ಪಂಡಿತರಾಗಿದ್ದರು. ವೈದ್ಯಕೀಯ ರಂಗಕ್ಕೂ ನಮ್ಮ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಗಣೇಶೋ ತ್ಸವ ಪ್ರತಿ ವರ್ಷ ಐದು ದಿನಗಳ ಕಾಲ ಜರಗುತ್ತಿದೆ. ಆಸ್ಪತ್ರೆಯು ವರ್ಷದ 365 ದಿನಗಳು ತೆರೆದಿರುತ್ತದೆ ಎಂದು ನೆನಪಿ ಡಬೇಕು. ಇಲ್ಲಿನ ಆಸ್ಪತ್ರೆ ಯೋಜನೆ ಆದಷ್ಟು ಬೇಗ ಪೂರ್ಣಗೊಂಡು ಎಲ್ಲರಿಗೂ ಉಪಯೋಗ ವಾಗು ವಂತಾಗಲಿ. ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಮಾಜವು ವೈದ್ಯಕೀಯ ಕ್ಷೇತ್ರದಲ್ಲಿ ಆಸ್ಪತ್ರೆಯ ಮುಖಾಂತರ ವಿಶ್ವಪ್ರಸಿದ್ಧಿಯನ್ನು ಪಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುಧೀಂದ್ರ ಮಿಶನ್ ಆಸ್ಪತ್ರೆ ಎರ್ನಾಕುಲಂ ಇದರ ಟ್ರಸ್ಟಿ ಗಳಾದ ಟಿ. ಎಂ. ವಿ., ರಾಜೇಶ್ ಶೆಣೈ, ಮನೋಹರ ಪ್ರಭು, ನಿರ್ದೇಶಕ ಜುನಿಡ್ ರೆಹ ಮಾನ್, ಮಾಜಿ ಎಂಎಲ್‌ಎ ನರೇಂದ್ರ ಮೆಹ್ತ, ಶಾಸಕಿ ಮನಿಷಾ ಚೌಧರಿ, ಸಂಸದ ಗೋಪಾಲ್ ಶೆಟ್ಟಿ, ಎಂಬಿಎಂಸಿ ಇದರ ಟೌನ್ ಪ್ಲಾನರ್ ದಿಲೀಪ್ ಗೆವಾರೆ ಮೊದಲಾದವರು ಉಪಸ್ಥಿತರಿದ್ದರು.
ಆಸ್ಪತ್ರೆ ಸಮುಚ್ಚಯದ ಶಿಲಾನ್ಯಾಸ ಕಾರ್ಯಕ್ರಮದ ಸರ್ವ ಧಾರ್ಮಿಕ ಕಾರ್ಯಕ್ರಮಗಳನ್ನು ಪುರೋಹಿತ ವರ್ಗದವರು ವಿಧಿ ವತ್ತಾಗಿ ನೆರವೇರಿಸಿದರು. ಸೇವಾ ಮಂಡಲದ ಪದಾಧಿ ಕಾರಿಗಳು, ಸ್ವಯಂ ಸೇವಕರು, ಕಾರ್ಯ ಕಾರಿ ಸಮಿತಿಯ ಸದ ಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೋವಿಡ್ ಲಾಕ್‌ಡೌನ್ ಮಾರ್ಗ ಸೂಚಿಗಳಿಗೆ ಅನುಗುಣ ವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.