ವಿರಳಾತಿವಿರಳ ವಿದ್ಯಾವಾಚಸ್ಪತಿ
Team Udayavani, Dec 14, 2020, 7:00 AM IST
ವಿದ್ಯಾವಾಚಸ್ಪತಿ ಎಂಬ ಬಿರುದಿಗೆ ಅನ್ವರ್ಥ ವಾಗಿ ಕನ್ನಡ ಮತ್ತು ಸಂಸ್ಕೃತದಲ್ಲಿ ಹಲವು ತಲೆಮಾರುಗಳ ಅವಧಿಯ ಸಾಧನೆಯನ್ನು ಒಂದು ಜೀವಿತ ಕಾಲದಲ್ಲಿ ನಡೆಸಿದ ಮಹಾಸಾಧಕ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಕಳೆದುಕೊಂಡ ವಿದ್ವತ್ ಲೋಕ ಬಡವಾಗಿದೆ.
ಬನ್ನಂಜೆ ಗೋವಿಂದಾಚಾರ್ಯರು ಅದಮಾರು ಮಠದ ಹಿಂದಿನ ಸ್ವಾಮೀಜಿಯವರಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಸಹಪಾಠಿಯಾಗಿದ್ದರು. ಅಂತೆಯೇ ಬನ್ನಂಜೆಯವರ ತಂದೆ ಪಡಮನ್ನೂರು ನಾರಾಯಣ ಆಚಾರ್ಯರು ಶ್ರೀ ವಿಬುಧೇಶತೀರ್ಥರ ಗುರುಗಳು. ಬನ್ನಂಜೆಯವರು ಅನೇಕ ವರ್ಷಗಳ ಪರ್ಯಂತ ಸಕುಟುಂಬಿಕರಾಗಿ ಶ್ರೀಮಠದ ಆವರಣದಲ್ಲಿದ್ದುಕೊಂಡು ಶ್ರೀ ವಿಬುಧೇಶತೀರ್ಥ ಶ್ರೀಪಾದರೊಂದಿಗೆ ಚಿಂತನ-ಮಂಥನ ನಡೆಸುತ್ತಿದ್ದರು. ಬನ್ನಂಜೆಯವರಿಗೆ ವಿದ್ಯಾವಾಚಸ್ಪತಿ ಎಂಬ ಬಿರುದನ್ನು ಶ್ರೀ ವಿಬುಧೇಶತೀರ್ಥ ಶ್ರೀಪಾದರು 1972ರ ಪರ್ಯಾಯದಲ್ಲಿ ನೀಡಿದ್ದರು. ಬನ್ನಂಜೆಯವರಿಗೆ ಅನೇಕ ಬಿರುದುಗಳಿದ್ದರೂ ವಿದ್ಯಾವಾಚಸ್ಪತಿ ಎಂಬ ಬಿರುದು ಬಹಳ ಪ್ರಸಿದ್ಧವಾಗಿದೆ.
ಆಡುಭಾಷೆಯ ಸಂಸ್ಕೃತವೇ ಬೇರೆ; ವೇದ, ಉಪನಿಷತ್ತುಗಳ ಸಂಸ್ಕೃತವೇ ಬೇರೆ. ಸಂಸ್ಕೃತ ಬಲ್ಲವರೆಂದ ಮಾತ್ರಕ್ಕೆ ವೇದೋಪನಿಷತ್ತುಗಳ ಅರ್ಥ ಹೇಳಲು ಸಮರ್ಥರಾಗರು. ಪ್ರಾಚೀನ ಸಂಸ್ಕೃತದ ಜ್ಞಾನ ಹೊಂದಿದ ವಿರಳಾತಿವಿರಳರಲ್ಲಿ ಬನ್ನಂಜೆಯವರೊಬ್ಬರು. ಶತರುದ್ರೀಯ ಟೀಕೆಯನ್ನು ಸಂಸ್ಕೃತದಲ್ಲಿ ಬರೆದವರು ಸುಮಾರು 700 ವರ್ಷಗಳಲ್ಲಿ ಬೇರೆಯವರಿಲ್ಲ. ಪ್ರಸಿದ್ಧವಾದ ವೇದದ ಸೂಕ್ತಗಳಿಗೆ ಅರ್ಥವನ್ನು ಬರೆದರು, ಇನ್ನಷ್ಟು ಬರೆಯಬೇಕೆಂಬ ಹಂಬಲವಿದ್ದರೂ ಅದು ಕೈಗೂಡಲಿಲ್ಲ. ಭಗವದ್ಗೀತೆಗೆ ಶಂಕರ, ರಾಮಾನುಜ, ಮಧ್ವರ ವಿಶ್ಲೇಷಣೆ ಸಹಿತ ತನ್ನ ವಿಮರ್ಶೆಯನ್ನೂ ಬರೆದರು. ಮೂರೂ ಆಚಾರ್ಯರ ಅಭಿಪ್ರಾಯ ಸಹಿತವಾಗಿ ಹೊರಬಂದ ಇಂತಹ ಕೃತಿ ಬೇರೆ ಇಲ್ಲ.
ಸಂಸ್ಕೃತ ಗ್ರಂಥಗಳು ಮತ್ತು ಪ್ರಕಟಿತ ವರ್ಷ
ಶ್ರೀ ಮಧ್ವವಿಜಯ 2000, 2003, 2018
ಉಪನಿಷಚ್ಚಂದ್ರಿಕಾ 2011
ಮಹಾಭಾರತ ತಾತ್ಪರ್ಯಂ 2013
ಮಹಾಭಾರತ ತಾತ್ಪರ್ಯ ನಿರ್ಣಯ 2000
ಪ್ರಾಣಾಗ್ನಿಸೂಕ್ತ ಭಾಷ್ಯಂ 1989, 2011
ಮಧ್ವವಿಜಯ (ಮೂಲ ಮಾತ್ರ) 2017
ಖಂಡಾರ್ಥನಿರ್ಣಯ 2020
ಸರ್ವಮೂಲ ಗ್ರಂಥಗಳು (5 ಸಂಪುಟ)
ಇತರ ಕೃತಿಗಳು
ವೇದಗಳ ಸಂದೇಶ
ನಂದಾದೀಪ-ಹೊಂಬೆಳಕು
ಪ್ರಶ್ನೋತ್ತರಗಳು
ಮುಖಪುಟ ಚಿಂತನೆಗಳು
ಸಾಹಿತ್ಯಿಕ ವಿಮರ್ಶೆಗಳು
ವ್ಯಕ್ತಿವಿಶೇಷ- ಬನ್ನಂಜೆ ಕಂಡಂತೆ
ಬನ್ನಂಜೆ ಸಂದರ್ಶನಗಳು
ಅಪ್ರಕಟಿತ ಕವನಗಳು- ಗಪದ್ಯಗಳು
ನೀಲಕಂಠ ದೀಕ್ಷಿತನ ಶತಕ- ಕನ್ನಡಾನುವಾದ ಋಗ್ವೇದ ಮೋಕ್ಷಗಳು-ಕನ್ನಡದ ಕನ್ನಡಿಯಲ್ಲಿ ದಾಸ ಸಾಹಿತ್ಯ ಚಿಂತನೆಗಳು
ಪ್ರವಚನ ಸಂಗ್ರಹಗಳು
ಗೀತೆಯ ಬೆಳಕು (ತರಂಗ)
ಗೀತೆ ಮತ್ತು ಜೀವನ (ಡಿವೈನ್‌ಪಾರ್ಕ್)
ಶ್ವೇತಾಶ್ವತರ ಉಪನಿಷತ್ (ಸಗ್ರಿ)
ಮಧ್ವ ಪರವಾದ ಮಂತ್ರಗಳು (ಅನಂತಕೃಷ್ಣ) ಗಾಯತ್ರಿ ಮಂತ್ರಗಳು
ಕರೋಪನಿಷತ್
ದೇವೀ ಭಾಗವತ ಅನುಸಂಧಾನ
ಮಧ್ವ-ಉಪನಿಷತ್ ಮಹಾಭಾರತ-
ರಾಮಾಯಣ-ಭಾಗವತ-ಗೀತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.