15 ದಿನಗಳ ಯುದ್ಧಕ್ಕೆ ಸೇನೆ ತಯಾರಿ: ಚೀನ ಜತೆಗಿನ ಬಿಕ್ಕಟ್ಟಿನ ನಡುವೆ ದಿಟ್ಟ ಹೆಜ್ಜೆ
Team Udayavani, Dec 14, 2020, 6:50 AM IST
ಹೊಸದಿಲ್ಲಿ: ಚೀನದ ಜತೆಗಿನ ಉದ್ವಿಗ್ನತೆಯ ನಡುವೆಯೇ ಭಾರತೀಯ ಸೇನೆಯು 15 ದಿನಗಳ ಯುದ್ಧಕ್ಕೆ ಸಾಕಾಗುವಷ್ಟು ಶಸ್ತ್ರಾಸ್ತ್ರ, ಯುದ್ದೋಪಕರಣಗಳ ಸಂಗ್ರಹ ಆರಂಭಿಸಿದೆ.
ಸೇನೆಗೆ ಮೀಸಲಾಗಿರುವ ತುರ್ತು ಆರ್ಥಿಕ ನಿಧಿ ಅಡಿಯಲ್ಲಿ ಹೆಚ್ಚುವರಿ ಶಸ್ತ್ರಾಸ್ತ್ರಗಳ ಖರೀದಿಗೆ 50 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಸ್ಥಳೀಯ ಮತ್ತು ವಿದೇಶಿ ಸಂಸ್ಥೆಗಳಿಂದ ಶಸ್ತ್ರಾಸ್ತ್ರ, ಯುದ್ದೋಪಕರಣಗಳ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಮುಂಚೂಣಿ ನೆಲೆಗಳಲ್ಲಿನ ಯೋಧರಿಗೆ ಧೈರ್ಯ ತುಂಬು ವುದಕ್ಕಾಗಿಯೂ ಬೃಹತ್ ಪ್ರಮಾಣದ ಉಪಕರಣ ಗಳ ದಾಸ್ತಾನು ಅನಿವಾರ್ಯ ಎಂದು ಸೇನೆ ತಿಳಿಸಿವೆ.
10 ದಿನಗಳಿಂದ 15ಕ್ಕೆ!
ಸೇನೆ ಕೆಲವು ತಿಂಗಳುಗಳ ಹಿಂದಷ್ಟೇ 10 ದಿನಗಳ ಯುದ್ಧಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ, ಮದ್ದುಗುಂಡು, ಯುದೊœàಪ ಕರಣ ಖರೀದಿಗೆ ನಿರ್ಧರಿಸಿತ್ತು. ಈಗ 15 ದಿನಗಳ ಯುದ್ಧ ದೃಷ್ಟಿಯಲ್ಲಿ ಇರಿಸಿಕೊಂಡು ಯುದೊœàಪ ಕರಣ ಗಳನ್ನು ಸಂಗ್ರಹಿಸುತ್ತಿದೆ ಎಂದು ಎಎನ್ಐ ವರದಿ ಮಾಡಿದೆ.
“ಉರಿ’ ಟರ್ನಿಂಗ್ ಪಾಯಿಂಟ್
ವರ್ಷಗಳ ಹಿಂದೆ 40 ದಿನಗಳ ಯುದ್ಧ ದೃಷ್ಟಿಯಲ್ಲಿಟ್ಟು ಕೊಂಡು ಅಗತ್ಯವಿರುವ ಯುದ್ದೋಪಕರಣ ಖರೀದಿಗೆ ಸೇನೆ ನಿರ್ಧರಿಸಿತ್ತು. ಆದರೆ ಬದಲಾದ ತಂತ್ರಜ್ಞಾನ, ಶಸ್ತ್ರಾಸ್ತ್ರ- ಮದ್ದುಗುಂಡುಗಳ ಸಂಗ್ರಾಹಕಗಳ ಸಮಸ್ಯೆ ಯಿಂದಾಗಿ ಇದನ್ನು 10 ದಿನಗಳಿಗೆ ಇಳಿಸಲಾಗಿತ್ತು. “ಉರಿ’ ದಾಳಿ ಬಳಿಕ ಸೇನೆ ಯುದ್ದೋಪಕರಣ ಸಂಗ್ರಹ ಅಗತ್ಯ ಮನಗಂಡಿದ್ದು, ಯೋಜನೆಗೆ ವೇಗ ನೀಡಿದೆ.
ಏನೇನು ದಾಸ್ತಾನು?
ಯುದ್ದೋಪಕರಣ ಬಿಡಿಭಾಗಗಳು, ಶಸ್ತ್ರಾಸ್ತ್ರ, ಕ್ಷಿಪಣಿ, ಟ್ಯಾಂಕರ್ಗೆ ಅಗತ್ಯವುಳ್ಳ ಮದ್ದುಗುಂಡು, ಫಿರಂಗಿಗಳನ್ನು ಖರೀದಿಸಲಾಗುತ್ತಿದೆ.
ಸಾಲ ತೀರಿಸಲು ಚೀನ ನೆರವು
ಬೀಜಿಂಗ್: ಪಾಕಿಸ್ಥಾನವು ಸೌದಿ ಅರೇಬಿಯಾದಿಂದ ಪಡೆದಿದ್ದ 2 ಶತಕೋಟಿ ಡಾಲರ್ ಸಾಲದ ಪೈಕಿ 1.5 ಶತಕೋಟಿ ಡಾಲರ್ ನೆರವು ನೀಡಲು ಚೀನ ಒಪ್ಪಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.