ಕೋಡಿ ಗ್ರಾ.ಪಂ.ಚುನಾವಣೆ ಬಹಿಷ್ಕಾರ; ಮೂರು ನಾಮಪತ್ರಗಳು ವಾಪಸ್; ಕಣದಲ್ಲಿ ಶೂನ್ಯ ಅಭ್ಯರ್ಥಿಗಳು
Team Udayavani, Dec 14, 2020, 12:47 PM IST
ಕೋಟ: ಅಭಿವೃದ್ಧಿ ಸಮಸ್ಯೆಗಳಿಗೆ ಸಂಬಂಧಿಸಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಕೋಡಿ ಗ್ರಾ.ಪಂ.ನಲ್ಲಿ ಸಲ್ಲಿಕೆಯಾಗಿದ್ದ ಮೂರು ನಾಮಪತ್ರಗಳನ್ನು ಅಭ್ಯರ್ಥಿಗಳು ವಾಪಾಸು ಪಡೆದಿದ್ದು ಚುನಾವಣೆ ಬಹಿಷ್ಕಾರಕ್ಕೆ ಮತ್ತಷ್ಟು ಬಲ ಬಂದಿದೆ.
ಇಲ್ಲಿ ಚುನಾವಣೆ ಬಹಿಷ್ಕಾರದ ಘೋಷಣೆಯ ನಡುವೆ ಕೋಡಿಬೆಂಗ್ರೆ ವಾರ್ಡ್ ನಿಂದ ಸಾಮಾನ್ಯ ಕ್ಷೇತ್ರದಿಂದ 2 ಹಾಗೂ ಹಿಂದುಳಿದ ವರ್ಗದಿಂದ 1 ಸೇರಿದಂತೆ ಒಟ್ಟು ಮೂರು ನಾಮಪತ್ರಗಳು ಸಲ್ಲಿಕೆಯಾಗಿತ್ತು ಹಾಗೂ ಸ್ಥಳೀಯರಲ್ಲಿ ಈ ಬಗ್ಗೆ ಅಸಮಾಧಾನವಿತ್ತು. ನಾಮ ಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನವಾದ ಸೋಮವಾರ ಅಭ್ಯರ್ಥಿಗಳಾದ ವಿನಯ್ ಅಮೀನ್, ಪ್ರಸಾದ್, ನಿಶಾ ಪಂಚಾಯತ್ ಗೆ ಆಗಮಿಸಿ ತಮ್ಮ ನಾಮಪತ್ರವನ್ನು ವಾಪಸು ಪಡೆಯುವ ಮೂಲಕ ಕಣದಿಂದ ಹಿಂದೆಸರಿದಿದ್ದು, ಗ್ರಾಮಸ್ಥರ ಹೋರಾಟದಲ್ಲಿ ಜತೆಗಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಇಲ್ಲಿ ಶೂನ್ಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹಕ್ಕುಪತ್ರ ಸಮಸ್ಯೆ ಹಾಗೂ ಜೆಟ್ಟಿ ಸಮಸ್ಯೆ, ಅಭಿವೃದ್ಧಿಯ ವಿಚಾರದಲ್ಲಿ ಜನಪ್ರತಿನಿಧಿಗಳ ಅಸಹಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇಲ್ಲಿನ ಕೋಡಿಕನ್ಯಾಣ, ಕೋಡಿತಲೆ, ಕೋಡಿ ಹೊಸಬೆಂಗ್ರೆ, ಕೋಡಿಬೆಂಗ್ರೆ ಸೇರಿದಂತೆ ಸಂಪೂರ್ಣ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕಾರಿಸುವುದಾಗಿ ಘೋಷಿಸಿದ್ದರು ಹಾಗೂ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸೇರಿದಂತೆ ಉನ್ನತ ಅಧಿಕಾರಿಗಳು ಆಗಮಿಸಿ ಚುನಾವಣೆ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದರು ಪ್ರಯೋಜನವಾಗಿರಲಿಲ್ಲ.
ಇದನ್ನೂ ಓದಿ: ಘನಘೋರ ಸುಳ್ವಾಡಿ ದುರಂತಕ್ಕೆ 2 ವರ್ಷ: ಏನಿದು ಘಟನೆ ? ಮನಕಲಕುವಂತಿದೆ ಭಾಧಿತರ ಪರಿಸ್ಥಿತಿ !
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.