ಪುತ್ರನಿಗಾಗಿ ತಾಯಿಯಿಂದ ಮಾಲೀಕರ ಮನೆಯಲ್ಲೇ ಕಳ್ಳತನ.!
ಬಾಲಿವುಡ್ ನಟ ಬೊಮನ್ ಇರಾನಿ ಸಹೋದರಿ ಖುರ್ಷಿದ್ ಇರಾನಿ ಮನೆಯಲ್ಲಿ ಕಳವು
Team Udayavani, Dec 14, 2020, 2:11 PM IST
ಬೆಂಗಳೂರು: ಪುತ್ರನ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಹೆದರಿದ ತಾಯಿಯೊಬ್ಬರು ಸುಮಾರು 28 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಬಾಲಿವುಡ್ ನಟ ಬೊಮನ್ ಇರಾನಿ ಸಹೋದರಿ ಖುರ್ಷಿದ್ ಇರಾನಿ ಮನೆಯಲ್ಲಿ ಕೋಟ್ಯಂತರರೂ. ಮೌಲ್ಯದ ಚಿನ್ನಾಭರಣ, ವಿದೇಶಿ ಕರೆನ್ಸಿಕಳವು ಮಾಡಿ ಇದೀಗ ಪುತ್ರನೊಂದಿಗೆ ಬೈಯಪ್ಪನಹಳ್ಳಿ ಪೊಲೀಸರ ಅತಿಥಿ ಯಾಗಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಮೇರಿ ಆಲಿಸ್(50), ಆಕೆಯ ಪುತ್ರಮೈಕೆಲ್ ವಿನ್ಸೆಂಟ್(24) ಬಂಧಿತರು. ಅವರಿಂದ6 ಚಿನ್ನದಬಿಸ್ಕೆಟ್, ಲಕ್ಷಾಂತರ ರೂ. ನಗದು ವಶಕ್ಕೆ ಪಡೆಯಲಾಗಿದೆ.ಆರೋಪಿ ಮೇರಿ ಅಲಿಸ್3ವರ್ಷಗಳಿಂದ ಖುರ್ಷಿದ್ ಇರಾನಿ ಮನೆಯಲ್ಲಿದ್ದ ಚಿನ್ನಾಭರಣ, ನಗದುಕಳವು ಮಾಡಿ ಪುತ್ರನಿಗೆ ಕೊಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಬಾಲಿವುಡ್ ನಟ ಬೊಮನ್ ಇರಾನಿ ಸಹೋದರಿ ಖುರ್ಷಿದ್ ಇರಾನಿ ಅವರು ಅಬ್ಟಾಸ್ ಅಲಿ ರಸ್ತೆಯ ಎಂಬೆಸ್ಸಿ ಕ್ರೌನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ.ಅದೇ ಮನೆಯಲ್ಲಿ 28 ವರ್ಷಗಳಿಂದ ಮೇರಿ ಅಲಿಸ್ ಮನೆ ಕೆಲಸ ಮಾಡಿಕೊಂಡಿದ್ದರು. ಖುರ್ಷಿದ್ ಇರಾನಿ ಅವರ ನಂಬಿಕೆಗಳಿಸಿದ್ದರು. ಹೀಗಾಗಿ ಮನೆಯ ಎಲ್ಲೆಡೆ ಹೋಗಲು ಅವಕಾಶ ನೀಡಲಾಗಿತ್ತು.ಕೆಲ ದಿನಗಳ ಹಿಂದೆ ಮನೆಯಲ್ಲಿ ಚಿನ್ನಾಭರಣ ಪರಿಶೀಲಿಸಿದಾಗ ಕಡಿಮೆಯಾಗಿರುವುದು ಗೊತ್ತಾಗಿತ್ತು. ಈ ಸಂಬಂಧ ಎಲ್ಲೆಡೆ ವಿಚಾರಿಸಿದರೂ ಮಾಹಿತಿ ಸಿಕ್ಕಿರಲಿಲ್ಲ. ಅನುಮಾನಗೊಂಡು ಹಲಸೂರು ಠಾಣೆಗೆ ಖುರ್ಷಿದ್ ಇರಾನಿ ದೂರು ನೀಡಿದ್ದರು.
ಸ್ನೇಹಿತರ ಜತೆ ಜಾಲಿ ಟ್ರಿಪ್: ಕಳವು ಹಣದಿಂದಲೇಆರೋಪಿ ಸ್ನೇಹಿತರನ್ನು ತನ್ನ ಖರ್ಚಿನಲ್ಲಿಯೇ ಪ್ರವಾಸಿತಾಣಗಳಿಗೆ, ಸೆಲೆಬ್ರಿಟಿಗಳ ಹುಟ್ಟುಹಬ್ಬಕ್ಕೆ, ಅವರ ಚಿತ್ರಗಳ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿದ್ದ. ಇತ್ತೀಚೆಗೆ ತಮಿಳು ನಟ ವಿಜಯ್ ಅವರ ಮಾಸ್ಟರ್ ಚಿತ್ರದ ಆಡಿಯೋ ಕಾರ್ಯಕ್ರಮಕ್ಕೆ ತಮಿಳುನಾಡಿಗೆ ಕರೆದೊಯ್ದಿದ್ದ. ಅಲ್ಲದೆ, ಕೇರಳ, ಕೊಡೈಕೆನಾಲ್, ಊಟಿ ಸೇರಿ ಬೇರೆ ಬೇರೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದ. ಇದರೊಂದಿಗೆ ಈ ಮೊದಲು 6-7 ಲಕ್ಷರೂ. ವೆಚ್ಚದಲ್ಲಿಅನಿಮೇಷನ್ ಸೆಂಟರ್ ತೆರೆದು ಐದಾರು ಮಂದಿ ಯುವಕರನ್ನು ಕೆಲಸಕ್ಕೆ ನೇಮಿಸಿದ್ದ. ಆದರೆ, ಭಾರೀ ನಷ್ಟ ಹೊಂದಿಅದನ್ನುಇದೀಗ ಸ್ಥಗಿತಗೊಳಿಸಿದ್ದಾನೆ.ಕಳವು ಹಣದಿಂದಲೇ ಮೋಜಿನ ಜೀವನ ನಡೆಸುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಕ್ಷ ರೂ.ಸಾಲ– 2 ಲಕ್ಷ ರೂ.ವಾಪಸ್: ಸ್ನೇಹಿತರು, ಪರಿ ಚಯಸ್ಥರ ಬಳಿ ಒಂದು ಲಕ್ಷ ರೂ. ಸಾಲ ಪಡೆದರೆ ವಾಪಸ್‌ನೀಡುವಾಗ ಎರಡು ಲಕ್ಷ ರೂ. ಕೊಡುತ್ತಿದ್ದ. ಅಧಿಕ ಹಣಕೊಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಕ್ರಿಕೆಟ್ ಬೆಟ್ಟಿಂಗ್, ಭಾರೀ ಮೊತ್ತದ ಹಣಕಾಸು ವ್ಯವಹಾರ ನಡೆಸುತ್ತಿರುವುದಾಗಿ ಹೇಳುತ್ತಿದ್ದ. ಹೀಗಾಗಿ ವಿನ್ಸೆಂಟ್‌ಗೆ ಲಕ್ಷಾಂತರ ರೂ. ಸಾಲಕೊಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಕಿರಿಯ ಸೊಸೆ ಜತೆ ದೈಹಿಕ ಸಂಬಂಧ; ಪತಿಯ ಹತ್ಯೆಗೈದ ಪತ್ನಿ ಹಾಗೂ ಹಿರಿಯ ಸೊಸೆ!
ದುಡ್ಡಿಗಾಗಿ ಮಗನಿಂದಲೇ ಆತ್ಮಹತ್ಯೆಯ ಬ್ಲ್ಯಾಕ್‌ಮೇಲ್ :
ಮೈಕೆಲ್ ವಿನ್ಸೆಂಟ್ ಪಿಯುಸಿ ವ್ಯಾಸಂಗ ಮಾಡಿದ್ದು, ಮೋಜಿನ ಜೀವನಕ್ಕೆ ಅಂಟಿಕೊಂಡಿದ್ದ. ಐಪಿಎಲ್‌ಕ್ರಿಕೆಟ್ ಬೆಟ್ಟಿಂಗ್, ಸ್ನೇಹಿತರೊಂದಿಗೆ ಭರ್ಜರಿಪಾರ್ಟಿ,ಪ್ರವಾಸಿ ತಾಣಗಳಿಗೆ ಹೋಗುವುದು, ಸೆಲೆಬ್ರಿಟಿಗಳಹುಟ್ಟುಹಬ್ಬಕ್ಕೆ, ಆಡಿಯೋ, ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆಹೋಗುವ ಅಭ್ಯಾಸಇಟ್ಟುಕೊಂಡಿದ್ದೆ. ಮತ್ತೂಂದೆಡೆ ತನ್ನ ತಾಯಿ ಶ್ರೀಮಂತರ ಮನೆಯಲ್ಲಿ
ಕೆಲಸ ಮಾಡುತ್ತಿರುವ ವಿಚಾರ ತಿಳಿದ ಆರೋಪಿ, ಖುರ್ಷಿದ್ ಇರಾನಿ ಮನೆಯಿಂದ ಹಣ, ಚಿನ್ನಾಭರಣ ತರುವಂತೆ ದುಂಬಾಲು ಬಿದ್ದಿದ್ದ. ಆದರೆ, ತಾಯಿ ಮೇರಿ, 4-5 ಬಾರಿ ಪುತ್ರನಿಗೆ ಬೈದು ಎಚ್ಚರಿಕೆ ನೀಡಿದ್ದರು. ಆದರೆ, ಆರೋಪಿ, ತಾನು ಹೇಳಿದಂತೆ ಕೇಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದುಬ್ಲ್ಯಾಕ್ ಮೇಲ್ ಮಾಡಿ ಕಳೆದ ಮೂರು ವರ್ಷಗಳಿಂದ ತಾಯಿಂದಲೇ ಕಳವು ಮಾಡಿಸಿ ಅದೇ ಹಣದಲ್ಲಿ ಸ್ನೇಹಿತರೊಂದಿಗೆ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಚಿನ್ನದ ಬಿಸ್ಕೆಟ್ ಮಾರಾಟಕ್ಕೆ ಯತ್ನ : ಈ ನಡುವೆಕೆಲದಿನಗಳ ಹಿಂದೆ ಬೈಯಪ್ಪನಹಳ್ಳಿ ಠಾಣೆವ್ಯಾಪ್ತಿಯ ಚಿನ್ನಾಭರಣ ಮಳಿಗೆಯಲ್ಲಿ ಆರೋಪಿ ಮೈಕೆಲ್ ವಿನ್ಸೆಂಟ್ ಚಿನ್ನದ ಬಿಸ್ಕೆಟ್ ಮಾರಾಟಕ್ಕೆ ಯತ್ನಿಸಿದ್ದ. ಈ ವಿಚಾರ ತಿಳಿದ ಇನ್ಸ್‌ಪೆಕ್ಟರ್ ವೆಂಕಟಚಲಪತಿ ನೇತೃತ್ವದ ತಂಡ ಆರೋಪಿಯನ್ನುಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಮತ್ತೂಂದೆಡೆ ಹಲಸೂರು ಪೊಲೀಸರು ತಾಯಿ ಮೇರಿ ಆಲಿಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಈ ಸಂಬಂಧ ಹಲಸೂರು ಠಾಣೆಯಲ್ಲಿದಾಖಲಾಗಿದ್ದ ಪ್ರಕರಣವನ್ನು ಬೈಯಪ್ಪನಹಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.