ದಾವಣಗರೆ: ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭ; 3 ದಿನದಿಂದ 1.20 ಕೋಟಿ ರೂ. ನಷ್ಟ
Team Udayavani, Dec 14, 2020, 3:05 PM IST
ದಾವಣಗರೆ: ನಗರದಲ್ಲಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ಬಸ್‌ಗಳ ಸಂಚಾರ ಆರಂಭವಾಗಿದೆ. ಮಧ್ಯಾಹ್ನದವರೆಗೆ ರಾಣೇಬೆನ್ನೂರು, ಚಿತ್ರದುರ್ಗ ಹಾಗೂ ಹರಿಹರ ಪಟ್ಟಣಗಳಿಗೆ ತಲಾ ಎರಡು ಹಾಗೂ ಹರಪನಹಳ್ಳಿಗೆ ಒಂದು ಸೇರಿ 7 ಬಸ್‌ಗಳು ಸಂಚರಿಸಿದವು ಎಂದು ವರದಿಯಾಗಿದೆ.
ಬಸ್ ಸಂಚಾರ ಆರಂಭವಾಗುತ್ತಿರುವ ಸುದ್ದಿ ತಿಳಿದು ವಿವಿಧ ನಗರ ಹಾಗೂ ಪಟ್ಟಣಗಳಿಗೆ ತೆರಳಲು ಜನರು ನಿಲ್ದಾಣಗಳತ್ತ ಬರುತ್ತಿದ್ದು, ಕೆಲವು ಪ್ರಯಾಣಿಕರು ಬೆಳಿಗ್ಗೆಯಿಂದ ಕಾದು ಕುಳಿತಿದ್ದಾರೆ. ಆದರೆ ನಿಗದಿತ ಸಮಯಕ್ಕೆ ಬಸ್‌ಗಳು ಹೊರಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ದಾವಣಗೆರೆ 12 ಹಾಗೂ ಹರಿಹರ ಘಟಕಗಳ 1,132 ನೌಕರರಲ್ಲಿ ಕೇವಲ 14 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರು, ಕಲಬುರ್ಗಿ, ರಾಯಚೂರು, ಹುಮ್ನಾಬಾದ್‌ಗಳಿಗೆ 7 ಬಸ್‌ಗಳು ಸಂಚರಿಸಿವೆ. ಬೆಳಿಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಚಾಲಕರು ಬಂದ ನಂತರ ಪ್ರಯಾಣಿಕರ ಅಗತ್ಯಗಳನ್ನು ನೋಡಿಕೊಂಡು ಬಸ್‌ಗಳನ್ನು ಕಳುಹಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದರು.
ದಿನಕ್ಕೆ ₹40 ಲಕ್ಷದಂತೆ ಮೂರು ದಿವಸದಿಂದ ₹1.20 ಕೋಟಿ ನಷ್ಟವಾಗಿದೆ. ಚಾಲಕರು ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಸಂಜೆಯ ವೇಳೆಗೆ ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ ಎಂದು ಸಿದ್ದೇಶ್ವರ್ ಈ ವೇಳೆ ತಿಳಿಸಿದರು.
ಇದನ್ನೂ ಓದಿ: ಮುಗ್ಧರ ಬದುಕಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಚೆಲ್ಲಾಟ: ಸಚಿವ ಸೋಮಣ್ಣ ವಾಗ್ದಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.