ಮರಳು ಲಾರಿಗಳಿಂದ ಮಾಲಿನ್ಯ: ಅಪಘಾತ
Team Udayavani, Dec 14, 2020, 6:11 PM IST
ತಿಪಟೂರು: ನಗರದ ಬಿ.ಎಚ್. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಲಾರಿಗಳು ಜಲ್ಲಿ ಮತ್ತು ಮರಳನ್ನು ಅಕ್ರಮವಾಗಿ ತುಂಬಿಕೊಂಡು ಹೋಗುವಾಗ ಲಾರಿಯಲ್ಲಿರುವ ಮರಳು, ಜಲ್ಲಿ ಎಲ್ಲೆಂದರಲ್ಲಿ ಚಲ್ಲಾಡಿ ಬೀಳುತ್ತಿರುವುದರಿಂದ ಹಿಂಬದಿ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಪೊಲೀಸರು ಹಾಗೂ ಆರ್‌ಟಿಒ ಜಾಣ ಕುರುಡು ವ್ಯಕ್ತಪಡಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆಕಾರಣವಾಗಿದೆ.
ನಗರದ ಪ್ರಮುಖ ಬಿ.ಎಚ್. ರಸ್ತೆ, ಹಾಲ್ಕುರಿಕೆ, ಹಾಸನ, ತುರುವೇಕೆರೆ ರಸ್ತೆಗಳಲ್ಲಿ ಪ್ರತಿದಿನ ದೊಡ್ಡ ದೊಡ್ಡ ಟಿಪ್ಪರ್ ಲಾರಿ, ಟ್ರಕ್‌ಗಳಲ್ಲಿ ಅಕ್ರಮವಾಗಿ ನಾನಾಕಾಮಗಾರಿಗಳಿಗಾಗಿಜಲ್ಲಿ,ಮರಳನ್ನುಓವರ್‌ಲೋಡ್‌ಮಾಡಿಕೊಂಡು ಸಾಗಾಟ ನಡೆಸುತ್ತಿವೆ. ಆದರೆ, ಸಂಚಾರದ ವೇಳೆ ಲಾರಿಗಳಿಂದ ಮರಳು ಜಲ್ಲಿ ಚೆಲ್ಲಾಡುತ್ತಿರುವ ಕಾರಣ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೆ ತೊಂದರೆ ಯಾಗುತ್ತಿದೆ.
ಇಂತಹ ಲಾರಿಗಳು ಬಂದ ತಕ್ಷಣ ಬದಿಯಲ್ಲಿ ನಿಂತುನಂತರ ಸವಾರರು ಹೋಗುವಂತಾಗಿದೆ. ಇದರಿಂದ ವಾಹನ ಚಲಾಯಿಸಲಾಗದೆ ಎಷ್ಟೋ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ಲಾರಿಗಳಲ್ಲಿರುವ ಜಲ್ಲಿ ಕಲ್ಲು ರಸ್ತೆಯುದ್ದಕ್ಕೂ ಚೆಲ್ಲುವುದರಿಂದ ವಾಹನಗಳು ಆಯಾತಪ್ಪಿ ಬಿದ್ದಿರುವ ನಿದರ್ಶನಗಳೂ ಹೆಚ್ಚಿವೆ.
ಕಿತ್ತು ಬರುತ್ತಿರುವ ಡಾಂಬರು : ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತೂಕದ ಮರಳು, ಜಲ್ಲಿಹಾಕಿಕೊಂಡು ಓಡಾಡುತ್ತಿರುವ ಲಾರಿಗಳಿಂದ ಚನ್ನಾಗಿರುವ ರಸ್ತೆಗಳೆಲ್ಲಾ ಕಿತ್ತು ಹಾಳಾಗುತ್ತಿವೆ. ಡಾಂಬರು ಹಾಳಾದ ತಕ್ಷಣವೇ ರಸ್ತೆಗಳೆಲ್ಲಾ ಗುಂಡಿ ಬೀಳಿತ್ತಿದ್ದರೂ ಪೊಲೀಸರು ಹಾಗೂ ಆರ್‌ಟಿಒ ಮತ್ತು ನ್ಯಾಷನಲ್ ಹೈವೇ ಪ್ರಾಧಿಕಾರ ಯಾವುದೇಕ್ರಮ ಜರುಗಿಸದೆ ಲಾರಿಯವರಿಗೇ ಸಹಕಾರ ನೀಡುತ್ತಿದ್ದಾರೆಂಬುದು ಸವಾರರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.