”ಸ್ಮಾರ್ಟ್ ಕ್ಲಾಕ್ ಟವರ್’: ಕಾಮಗಾರಿ ಮುಗಿದರೂ ಉದ್ಘಾಟನೆ ಭಾಗ್ಯವಿಲ್ಲ !
Team Udayavani, Dec 15, 2020, 5:15 AM IST
ಮಹಾನಗರ: ನಗರಕ್ಕೆ ಕಲಶಪ್ರಾಯದಂತಿರುವ ಹಂಪನಕಟ್ಟೆ ಯಲ್ಲಿ ರುವ ಸ್ಮಾರ್ಟ್ ಕ್ಲಾಕ್ ಟವರ್ ಕಾಮಗಾರಿ ಪೂರ್ಣ ಗೊಂಡು ತಿಂಗಳು ಕಳೆದರೂ ಉದ್ಘಾಟನೆಗೆ ಮಾತ್ರ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ !
ಮಂಗಳೂರಿನ ಹೆಗ್ಗುರುತಾದ ಕ್ಲಾಕ್ ಟವರ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಕೆಲವು ತಿಂಗಳ ಹಿಂದೆಯೇ ಗೋಪುರದ ನಾಲ್ಕೂ ದಿಕ್ಕಿಗೂ ಗಡಿಯಾರವನ್ನು ಅಳವಡಿಸಲಾಗಿದೆ. ಗೋಪುರದ ಸುತ್ತಲೂ ಕಟ್ಟೆ ನಿರ್ಮಾಣ ಕೂಡ ಇತ್ತೀಚೆಗೆ ಪೂರ್ಣಗೊಂಡಿದ್ದು, ರಾತ್ರಿ ವೇಳೆ ಆಕರ್ಷಣೀಯವಾಗಿ ಕಾಣಲೆಂದು ಗೋಪುರದಲ್ಲಿ ಲೈಟ್ ವ್ಯವಸ್ಥೆ ಮಾಡಲಾಗಿದೆ. ಆದರೂ ಕ್ಲಾಕ್ ಟವರ್ ಉದ್ಘಾಟನೆಗೆ ಮಾತ್ರ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ.
ನಗರದಲ್ಲಿ ಸಮಯ ಸೂಚಕವಾಗಿ ಹಲವು ವರ್ಷಗಳ ಹಿಂದೆ ಹಂಪನಕಟ್ಟೆಯಲ್ಲಿ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗಿತ್ತು. ನಗರದಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ 1994ರಲ್ಲಿ ಟವರ್ ಅನ್ನು ಕೆಡಹಲಾಗಿತ್ತು. ಬಳಿಕ ಇದೇ ಜಾಗದಲ್ಲಿ ಹಿಂದಿನ ಕ್ಲಾಕ್ ಟವರ್‌ನ ನೆನಪಿಗಾಗಿ ಹೊಸದಾಗಿ ನಿರ್ಮಿಸಲು ಪಾಲಿಕೆ ಮೇಯರ್ ಆಗಿದ್ದ ಕವಿತಾ ಸನಿಲ್ ನಿರ್ಧರಿಸಿ 2018ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಬಳಿಕ ಈ ಯೋಜನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿ ಮುಂದುವರಿಸಲಾಗಿತ್ತು.
ಸುಮಾರು 90 ಲಕ್ಷ ರೂ. ವೆಚ್ಚ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಕ್ಲಾಕ್ ಟವರ್ ರಾಜ್ಯದಲ್ಲಿಯೇ ಅತೀ ದೊಡ್ಡªದು. ಈ ಯೋಜನೆಗೆ ಸುಮಾರು 90 ಲಕ್ಷ ರೂ. ವೆಚ್ಚವಾಗಿದ್ದು, ಇಷ್ಟೊಂದು ಹಣ ಖರ್ಚು ಮಾಡಿ ನಿರ್ಮಾಣ ಮಾಡಬೇಕಾ? ಎಂಬ ಬಗ್ಗೆ ಸಾರ್ವಜನಿಕಕ ವಲಯದಲ್ಲಿ ಅಪಸ್ವರವೂ ಕೇಳಿಬಂದಿತ್ತು.
ಇಟಲಿಯಿಂದ ತಂದ ಯಂತ್ರ
ಸುಮಾರು 88 ಅಡಿ ಸುತ್ತಳತೆ ಹೊಂದಿ ರುವ ಈ ಕ್ಲಾಕ್‌ಟವರ್‌ನಲ್ಲಿ ಬಳಕೆ ಯಾಗುವ ಗಡಿಯಾರಕ್ಕೆ ಯಂತ್ರೋ ಪಕರಣಗಳನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದೆ. 8 ಬಗೆಯ ಬೆಲ್ ಮಾಡುವ ಸಾಮರ್ಥ್ಯ ಇರುವ ಮೈಕ್ರೋ ಪ್ರೊಸೆಸರ್ ಕೂಡ ಇದರಲ್ಲಿದೆ. ಈ ಕ್ಲಾಕ್‌ಗೆ
ಅಕ್ರೇಲಿಕ್ ಶೀಟ್, ಸ್ಟೈನ್‌ಲೆಸ್ ಸ್ಟೀಲ್ ಹಾಗೂ ಎಸಿಪಿ ಶೀಟ್‌ಗಳನ್ನು ಬಳಸಿ ಕೊಂಡು ಸಿದ್ಧಪಡಿಸಿಕೊಂಡಿದ್ದು, ಈಗಾಗಲೇ ಗೋಪುರದ ನಾಲ್ಕು ಬದಿಗಳಲ್ಲಿ ನಾಲ್ಕು ಕ್ಲಾಕ್ ಮಾದರಿಗಳಿದ್ದು, ಅವುಗಳಿಗೆ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ಅನೇಕ ದಿನಗಳಿಂದ ಗಡಿಯಾರದ ಮುಳ್ಳು ಗಳು ತಿರುಗುತ್ತಿಲ್ಲ. ಸರಿಯಾದ ಸಮಯ ತೋರಿಸಬೇಕಾಗಿದ್ದ ಗಡಿ ಯಾರ ಕೆಟ್ಟು ಹೋಗಿದೆ.
1930ರ ದಶಕದಲ್ಲಿ ನಾಯಕ್ ಕ್ಲಾಕ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ ವಾಮನ್ ನಾಯಕ್ ಅವರು ಕುಡ್ಲದ ಕ್ಲಾಕ್ ಟವರ್‌ಗೆ 1964ರಲ್ಲಿ ಕ್ಲಾಕ್ ನಿರ್ಮಿಸಿಕೊಟ್ಟಿದ್ದರು. ಇದು ಪೂರ್ಣವಾಗಿ ಯಂತ್ರಿಕ ಬಲ ದಿಂದಲ್ಲೇ ಓಡುವ ಗಡಿಯಾರವಾಗಿತ್ತು. ವಾರಕ್ಕೆ ಒಂದು ಸಲ ಕೀ ಕೊಡಬೇಕಿತ್ತು.
ಕೊನೆಯ ಹಂತದ ಕೆಲಸ
ಮಂಗಳೂರಿಗೆ ಕಲಶಪ್ರಾಯದಂತಿರುವ ಕ್ಲಾಕ್‌ಟವರ್ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತದ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಕ್ಲಾಕ್‌ಟವರ್ ಉದ್ಘಾಟನೆಗೊಳ್ಳಲಿದೆ.
-ಡಿ. ವೇದವ್ಯಾಸ ಕಾಮತ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.