ಪ್ಯಾಂಗಾಂಗ್ ದಕ್ಷಿಣದಲ್ಲಿ ಚೀನ ಬೆಪ್ಪು
105 ದಿನಗಳ ಬಳಿಕ ಭಾರತೀಯ ಸೇನೆ ತಂತ್ರ ಬಯಲು
Team Udayavani, Dec 15, 2020, 6:00 AM IST
ಹೊಸದಿಲ್ಲಿ: ಆಗಸ್ಟ್ ಅಂತ್ಯದಲ್ಲಿ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತೀಯ ಪಡೆಯು ಚೀನದ ಸೈನಿಕರನ್ನು ಮೂರ್ಖರನ್ನಾಗಿಸಿದ ರಹಸ್ಯ 105 ದಿನಗಳ ಬಳಿಕ ಬಯಲಾಗಿದೆ. ದಕ್ಷಿಣ ದಂಡೆಯ ಪರ್ವತಗಳನ್ನೇರಿ ಕುಳಿತಿದ್ದ ಭಾರತೀಯ ತುಕಡಿಗಳು ಇದಕ್ಕಾಗಿ ಒಂದು ತಿಂಗಳ ಮಾಸ್ಟರ್ ಪ್ಲ್ರಾನ್ ರೂಪಿಸಿದ್ದವು.
ಸಂಪೂರ್ಣ ರಹಸ್ಯ ಮತ್ತು ಹಲವು ಅಸಾಂಪ್ರದಾಯಿಕ ನಿಯೋಜನೆ, ಫಾಲ್ಸ್ ಫ್ಲ್ಯಾಗ್ ರಣತಂತ್ರವನ್ನು ಅನುಸರಿಸಿ ಚೀನವನ್ನು ತಬ್ಬಿಬ್ಬುಗೊಳಿಸಲಾಗಿತ್ತು ಎಂದು ಸೇನೆಯ ಮೂಲಗಳು ವಿಶ್ಲೇಷಿಸಿವೆ.
ಯೋಜನೆ ಹೇಗಿತ್ತು?
ಚೀನವು ಕಣ್ಣಿಟ್ಟಿದ್ದ ಪೂರ್ವ ಲಡಾಖ್‌ನ ಪ್ರಮುಖ 6-7 ತಾಣಗಳನ್ನು ಸೇನೆ ಮುಂಚಿತವಾಗಿ ಗುರುತಿಸಿತ್ತು. ಇಂಥ ತಾಣಗಳ ಮುಂಚೂಣಿಯಲ್ಲಿ ಮೌಂಟನ್ ಸ್ಟ್ರೈಕ್ ಕಾಪ್ಸ್ì (ಎಂಎಸ್‌ಸಿ) ಯೋಧರನ್ನು ನಿಯೋಜಿಸಲಾಗಿತ್ತು.
24 ತಾಸು ಹದ್ದಿನಗಣ್ಣು
ಆಗಸ್ಟ್ ಆರಂಭದಲ್ಲೇ ಎಂಎಸ್‌ಸಿ ತಂಡ ಲೆ|ಜ| ಸವನೀತ್ ಸಿಂಗ್ ನೇತೃತ್ವದಲ್ಲಿ ಈ ತಾಣಗಳ ಮೇಲೆ 24 ತಾಸು ಹದ್ದಿನಗಣ್ಣು ನೆಟ್ಟು, ಚೀನದ ತುಕಡಿಗಳ ದೌರ್ಬಲ್ಯ ಗಳನ್ನು ಗಮನಿಸಿತ್ತು.
“ಫಾಲ್ಸ್ ಫ್ಲ್ಯಾಗ್’ ತಂತ್ರ
ಆಕ್ರಮಣಕಾರಿ ದಾಳಿಗೆ ಹೆಸರಾದ ಎಂಎಸ್‌ಸಿಯ 17ನೇ ತುಕಡಿಯನ್ನು ಮುಂಚೂಣಿಗೆ ಬಿಟ್ಟು, ರಕ್ಷಣಾತ್ಮಕ ದಾಳಿಗೆ ಹೆಸರಾದ 14ನೇ ತುಕಡಿಯನ್ನು ಬೆಂಗಾವಲಿನಲ್ಲಿ ನಿಲ್ಲಿಸಲಾಗಿತ್ತು. 17ನೇ ತುಕಡಿ ಮುಂದೆ ಮುಂದೆ ಹೋದಂತೆ, ಬೆಂಗಾವಲು ಪಡೆ ದಕ್ಷಿಣ ದಂಡೆಯ ಪ್ರಮುಖ ಬೆಟ್ಟಗಳನ್ನು ಏರಿ, ಅಲ್ಲಿ ಯುದ್ದೋಪಕರಣಗಳನ್ನೂ ನಿಯೋಜಿಸಿತ್ತು. ಇದು ಚೀನವನ್ನು ಬೆಕ್ಕಸ ಬೆರಗಾಗಿಸಿತ್ತು.
ಗಡಿ ರಕ್ಷಣೆಗೆ ಗರಿಷ್ಠ ಸಿದ್ಧತೆ: ಸಿಡಿಎಸ್
ದೇಶದ ಉತ್ತರದ ಗಡಿಯ ಯಥಾಸ್ಥಿತಿಯನ್ನು ಚೀನ ಬದಲಾಯಿಸಲು ಯತ್ನಿಸುತ್ತಿದೆ. ಚೀನ ಜತೆಗಿನ ಭೂ, ಸಮುದ್ರ, ವಾಯು ಗಡಿಗಳಲ್ಲಿ ಗರಿಷ್ಠ ಮಟ್ಟದ ಸಿದ್ಧತೆ ನಡೆಸಿದ್ದೇವೆ ಎಂದು ಮೂರೂ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜ| ಬಿಪಿನ್ ರಾವತ್ ತಿಳಿಸಿದ್ದಾರೆ. ಲಡಾಖ್ ಗಡಿಯಲ್ಲಿ ಇನ್ನೂ ನಾವು ಮುಖಾ ಮುಖೀ ಎದುರಿಸುತ್ತಿದ್ದೇವೆ. ನಮ್ಮ ಯುದ್ಧ ವ್ಯವಸ್ಥೆ ಯಲ್ಲಿ ಭವಿಷ್ಯದ ಹೋರಾಟದ ತಂತ್ರಜ್ಞಾನ ಅಳವಡಿಸುವ ಕಾಲ ಬಂದಿದೆ. ಉತ್ತರ ಭಾಗದ ಗಡಿಗಳಲ್ಲಿ ಯಾವುದೇ ಬೆದರಿಕೆ ಹಿಮ್ಮೆಟ್ಟಿಸಲು ನಾವು ಅರ್ಹ ತಾಂತ್ರಿಕ ಪಡೆ ಹೊಂದಬೇಕಿದೆ ಎಂದು ಅವರು “ಎಎನ್‌ಐ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ
Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.