ನಿಮ್ಮ ಏಳಿಗೆಗೆ ನಮ್ಮ ಕಾಯ್ದೆ: ಕೃಷಿ ಕಾಯ್ದೆಗಳನ್ನು ಸಮರ್ಥಿಸಿದ ಸಚಿವ ರಾಜನಾಥ್
Team Udayavani, Dec 15, 2020, 1:29 AM IST
ಹೊಸದಿಲ್ಲಿ ಸಮೀಪದ ಸಿಂಘು ಗಡಿಯಲ್ಲಿ ರಸ್ತೆ ತಡೆ ನಡೆಸುವ ವೇಳೆ ರೈತರು ಸೋಮವಾರ ಹುಕ್ಕಾ ಸೇದಿದರು.
ಹೊಸದಿಲ್ಲಿ: ಕೃಷಿ ಮಾತೃ ಸಮಾನ ವಲಯ. ಇದರ ವಿರುದ್ಧ ಸರಕಾರ ಎಂದಿಗೂ ವಿಮುಖ ಹೆಜ್ಜೆಗಳನ್ನಿಡುವ ಪ್ರಶ್ನೆಯೇ ಇಲ್ಲ. ಪ್ರಸ್ತುತ ಜಾರಿಗೆ ತಂದಿರುವ ಸುಧಾ ರಣೆಗಳು ಭಾರತೀಯ ರೈತರ ಏಳ್ಗೆಯನ್ನು ದೃಷ್ಟಿಯ ಲ್ಲಿಟ್ಟುಕೊಂಡೇ ರೂಪಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೂತನ ಕೃಷಿ ಕಾಯ್ದೆಗಳನ್ನು ಪುನಃ ಸಮರ್ಥಿಸಿಕೊಂಡಿದ್ದಾರೆ.
ಎಫ್ಐಸಿಸಿ ವಾರ್ಷಿಕ ಸಭೆಯಲ್ಲಿ ಅವರು, “ಕೊರೊನಾ ಬಿಕ್ಕಟ್ಟಿನ ವೇಳೆ ಎಲ್ಲ ಕ್ಷೇತ್ರಗಳೂ ನಲುಗಿ ದವು. ಆದರೆ ಕೃಷಿರಂಗವೊಂದೇ ಯಾವುದೇ ಆಘಾತ ಗಳಿಗೂ ಒಳಗಾಗದೆ, ಒಳ್ಳೆಯ ಆದಾಯ ಕಂಡಿದೆ. ಏನೇ ಆಗಲೀ, ನಾವು ರೈತ ಸಹೋದರರ ನೋವಿಗೆ ಸದಾ ಕಿವಿಗೊಡುತ್ತೇವೆ. ಅವರ ಅನುಮಾನಗಳನ್ನು ನಿವಾರಿಸುವ ಭರವಸೆ ನೀಡುತ್ತೇವೆ. ರೈತರ ಸಮಸ್ಯೆಗಳ ಚರ್ಚೆಗೆ ಕೇಂದ್ರ ಸರಕಾರ ಸದಾ ಸಿದ್ಧವಿದೆ’ ಎಂದು ತಿಳಿಸಿದ್ದಾರೆ.
6ನೇ ಸಭೆ ನಡೆಯಲಿದೆ: “ಪ್ರತಿಭಟನಾನಿರತ ರೈತ ಮುಖಂಡರೊಂದಿಗೆ 6ನೇ ಸುತ್ತಿನ ಸಭೆ ನಿಶ್ಚಿತವಾಗಿ ನಡೆಯಲಿದೆ. ಈ ಬಗ್ಗೆ ನಾವು ರೈತರೊಂದಿಗೆ ಸಂಪರ್ಕ ದಲ್ಲಿದ್ದೇವೆ’ – ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, “ಮಾತುಕತೆ ವಿಚಾರದಲ್ಲಿ ಸರಕಾರ ಹಿಂದೆ ಸರಿದಿಲ್ಲ’ ಎನ್ನುವ ಸ್ಪಷ್ಟನೆಯನ್ನು ಸೋಮವಾರವೂ ನೀಡಿ ದರು. “ಆದರೆ ಯಾವಾಗ ಸಭೆ ನಡೆಸಬೇಕೆಂಬು ದನ್ನು ರೈತ ಮುಖಂಡರೇ ಸ್ಪಷ್ಟಪಡಿಸಬೇಕು’ ಎಂದು ತಿಳಿಸಿದ್ದಾರೆ.
“ರೈತರು, ರೈತ ಒಕ್ಕೂಟಗಳ ಮುಖಂಡರ ಮನವೊಲಿ ಸಲು ನಾವು ಸಾಕಷ್ಟು ಯತ್ನಿಸಿದ್ದೇವೆ. ಕೃಷಿ ಕಾಯ್ದೆಗಳಲ್ಲಿ ಅವರಿಗೆ ಆತಂಕ ತಂದಿರುವ ಸಂಗತಿಗಳ ಬಗ್ಗೆ ಮುಕ್ತ ವಾಗಿ ಮಾತುಕತೆ ನಡೆಸಲು ನಾವು ತಯಾರಿದ್ದೇವೆ’ ಎಂದು ಹೇಳಿದ್ದಾರೆ.
ಮತ್ತೆ ಶಾ ಭೇಟಿ: ರೈತ ಪ್ರತಿಭಟನೆಗೆ ತಾರ್ಕಿಕ ಅಂತ್ಯ ದೊರಕಿಸುವ ಸಂಬಂಧ ಕೃಷಿ ಸಚಿವರು ಸೋಮವಾರ ಹಲವು ತಾಸು ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಗಹನ ಚರ್ಚೆ ನಡೆಸಿದ್ದಾರೆ.
ಅಣ್ಣಾ ಹಜಾರೆ “ನಿರಶನ’ ಎಚ್ಚರಿಕೆ
ಕೃಷಿ ಸಂಬಂಧಿತ ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರಕಾರಕ್ಕೆ ನಿರಶನ ಎಚ್ಚರಿಕೆ ರವಾನಿಸಿದ್ದಾರೆ. ಈ ಸಂಬಂಧ ಹಜಾರೆ ಕಳೆದವರ್ಷವೂ ಸುದೀರ್ಘ ಧರಣಿ ಉಪವಾಸ ಆಚರಿಸಿದ್ದರು. ಆಗ ಕೇಂದ್ರ ಸಚಿವರಾಗಿದ್ದ ರಾಧಾ ಮೋಹನ್ ಸಿಂಗ್, ಪತ್ರ ಬರೆದು, ಈ ಕುರಿತು ಉನ್ನತ ಅಧಿಕಾರಿಗಳ ಸಮಿತಿ ರಚಿಸುವ ಭರವಸೆ ನೀಡಿದ್ದರು. ಇದುವರೆಗೂ ಆ ಭರವಸೆ ಈಡೇರಿಲ್ಲ. ಶೀಘ್ರವೇ ಉಪವಾಸ ಸತ್ಯಾಗ್ರಹ ಆಚರಿಸುವುದಾಗಿ ಹಜಾರೆ ಎಚ್ಚರಿಸಿದ್ದಾರೆ.
ಟ್ರ್ಯಾಕ್ಟರ್ ಟು ಟ್ವಿಟರ್
ರೈತ ಪ್ರತಿಭಟನೆ ವಿರುದ್ಧ ಹುಟ್ಟಿಕೊಳ್ಳುತ್ತಿರುವ ನಕಲಿ ಸುದ್ದಿಗಳ ಕುರಿತಾಗಿ ಸ್ಪಷ್ಟನೆ ನೀಡಲೂ ಒಂದು ಟ್ವಿಟರ್ ಖಾತೆ ಇದೆ. ಅದುವೇ “ಟ್ರ್ಯಾಕ್ಟರ್2ಟ್ವಿಟರ್’! ಕೃಷಿ ಕಾಯ್ದೆ ಜತೆಜತೆಗೇ ಈ ಖಾತೆ ಕೂಡ ನ.28ರಿಂದ ಚರ್ಚೆಯಲ್ಲಿದ್ದು, ಬರೋಬ್ಬರಿ 25 ಲಕ್ಷ ಅನುಯಾಯಿ ಗಳನ್ನು ಗಳಿಸಿದೆ. ಸಿಡ್ನಿಯಲ್ಲಿ ಐಟಿ ಉದ್ಯೋಗದಲ್ಲಿದ್ದ ಲೂಧಿಯಾನದ ಭವ್‌ಜಿತ್ ಸಿಂಗ್ ಈ ಟ್ವಿಟರ್ ಅಭಿಯಾನದ ರೂವಾರಿ.
“ಚಲೋ’ ಕ್ವಿಕ್ ಲುಕ್
ಸಿಂಘು ಗಡಿಯಲ್ಲಿ ರೈತರಿಗೆ ವಿಂಟರ್ ಜಾಕೆಟ್, ಸ್ವೆಟರ್, ದಪ್ಪನೆಯ ಶಾಲುಗಳನ್ನು
ಮಾರುವ 12 ಅಂಗಡಿ ಶುರು.
ಸಿಂಘು ಗಡಿಗೆ ಪಂಜಾಬ್‌ನಿಂದ ಮತ್ತೆ 2 ಸಾವಿರ ರೈತ ಮಹಿಳೆಯರ ಆಗಮನ.
ಹೈವೇಗಳಲ್ಲಿ ರೈತರು ಬಲವಂತವಾಗಿ ನಿಲ್ಲಿಸಿರುವ ಟೋಲ್ ಶುಲ್ಕ ಪಾವತಿಯನ್ನು ಮರು ಆರಂಭಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಂಜಾಬ್ ಸಿಎಂಗೆ ಪತ್ರ ಬರೆದಿದ್ದಾರೆ.
ಕಾಯ್ದೆ ಜಾರಿಮಾಡುವಂತೆ 10 ರೈತ ಒಕ್ಕೂಟಗಳು ಕೇಂದ್ರ ಸರಕಾರಕ್ಕೆ ಬೆಂಬಲ ನೀಡಿಕೆ.
ಹರಿಯಾಣ ಸಂಸದ, ಶಾಸಕರ ನಿಯೋಗ ಕೃಷಿ ಸಚಿವ ತೋಮರ್ ಜತೆಗೆ ಭೇಟಿ.
ಕಾನ್ಪುರ ಮೊಬೈಲ್ ಶಾಪ್‌ನ ಮಾಲಕರೊಬ್ಬರಿಂದ ರೈತರಿಗೆ ಬ್ಲಾಂಕೆಟ್ಸ್, ಮಫ್ಲರ್ ಪೂರೈಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.