![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 15, 2020, 1:26 PM IST
ಬೆಂಗಳೂರು: ಸರ್ಕಾರ ಮತ್ತು ಪಾಲಿಕೆ ಮಟ್ಟದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಸಂಕಷ rದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿಯು 2020-21ನೇ ಸಾಲಿನ ಬಜೆಟ್ ಗಾತ್ರ ಕುಗ್ಗಿಸುವುದಕ್ಕೆ ಮುಂದಾಗಿದೆ.
ಹಲವು ವರ್ಷಗಳಿಂದ ಅವೈಜ್ಞಾನಿಕ ಬಜೆಟ್ ಮಂಡನೆಯಾಗುತ್ತಿದ್ದು, ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ವರ್ಷ ಕೋವಿಡ್ ಸೋಂಕಿನಿಂದ ಪಾಲಿಕೆಯ ಆದಾಯ ಕುಸಿತ ಕಂಡಿದ್ದು, ವೈದ್ಯಕೀಯ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ಬಜೆಟ್ ಮೊತ್ತ ಕಡಿಮೆ ಮಾಡುವ ಅನಿವ ರ್ಯತೆ ಸೃಷ್ಟಿಯಾಗಿದೆ.ಇದರಭಾಗವಾಗಿ ಕೆಲವು ನಿರ್ದಿಷ್ಟ ಕಾಮಗಾರಿಗಳು, ಮೂಲಸೌಕರ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಪಾಲಿಕೆಯ 2020-21ನೇ ಸಾಲಿನ ಬಜೆಟ್ ಪರಿಷ್ಕರಣೆ ಮಾಡಿ ವೈಜ್ಞಾನಿಕ ಬಜೆಟ್‌ಮಂಡನೆಮಾಡುವುದಾಗಿ ಆಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಬಿಬಿಎಂಪಿಯು2020-21ನೇ ಸಾಲಿನಲ್ಲಿ 11,969.5 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಮಾಡಿತ್ತು.ಇದನ್ನು ಪರಿಷ್ಕರಣೆ ಮಾಡಿದ್ದ ರಾಜ್ಯ ಸರ್ಕಾರ ಬಜೆಟ್‌ಮೊತ್ತವನ್ನು 11,715.2 ಕೋಟಿ ರೂ.ಗೆ (254 ಕೋಟಿರೂ. ಕಡಿತ) ಇಳಿಸಿತ್ತು. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ, ಗುತ್ತಿಗೆದಾರರಿಗೆ ಬಾಕಿ ಹಾಗೂ ಟೆಂಡರ್ ಪ್ರಕ್ರಿಯೆ ಪ್ರಗತಿ ಯಲ್ಲಿರುವುದು ಸೇರಿದಂತೆಒಟ್ಟು 22,656.52 ಕೋಟಿ ರೂ. ಹೊಣೆಗಾರಿಕೆ ಇದೆ ಎಂದು ಇತ್ತೀಚೆಗಷ್ಟೇಬಿಬಿಎಂಪಿಆಯುಕ್ತ ಎನ್.ಮಂಜು ನಾಥ್ ಪ್ರಸಾದ್ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದು ವಿವರಣೆ ನೀಡಿದ್ದರು.
ಮತ್ತೆ ಮೂಲಸೌಕರ್ಯಕ್ಕೆ ಕತ್ತರಿ: ಪ್ರತಿ ಬಾರಿ ಬಜೆಟ್ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಸರ್ಕಾರಮೂಲಸೌಕರ್ಯ ವೆಚ್ಚ ಅನುದಾನಕ್ಕೆಕಡಿವಾಣ ಹಾಕಿದ್ದೇ ಹೆಚ್ಚು. 2020-21ನೇ ಸಾಲಿನ ಬಜೆಟ್ ಪರಿಷ್ಕರಣೆಯಲ್ಲೂ ಮೂಲಭೂತ ಸೌಕರ್ಯಕ್ಕೆ ಕಡಿವಾಣ ಬಿದ್ದಿತ್ತು. ಇದೀಗ ಆಡಳಿತಾಧಿಕಾರಿ ಬಜೆಟ್ ಪರಿಷ್ಕರಣೆಗೆ ಕೈಹಾಕಿದ್ದು, ಮತ್ತೆ ಮೂಲಭೂತಸೌಕರ್ಯ ಅನುದಾನಕ್ಕೆ ಕಡಿ ವಾಣ ಹಾಕುವ ಸಾಧ್ಯತೆ ನಿಚ್ಚಳವಾಗಿದೆ.
ಜಾಬ್‌ಕೋಡ್ ಹಿಂಪಡೆಯುವ ಸಾಧ್ಯತೆ: ಪಾಲಿಕೆಯ ಅನುದಾನದಲ್ಲಿ ನಿರ್ವಹಿಸಿದ 2,575.25 ಕೋಟಿ ರೂ. ಕಾಮಗಾರಿಗಳ ಬಿಲ್ಲುಗಳನ್ನು ಗುತ್ತಿಗೆದಾರರಿಗೆ ಪಾವತಿಸುವುದು ಬಾಕಿ ಇದೆ. ಈ ಮಧ್ಯ ಪ್ರಸಕ್ತ ಸಾಲಿನಲ್ಲಿ 1,100 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಜಾಬ್‌ಕೋಡ್ ಮಂಜೂರು ಮಾಡಲಾಗಿದೆ. ಇದು ಸಹ ಪಾಲಿಕೆಯಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕೆ ಮುಳುವಾಗಿದೆ. ಹೀಗಾಗಿ, ಪರಿಷ್ಕೃತ ಬಜೆಟ್ ಮಂಡನೆ ಮಾಡುವ ಸಂದ ರ್ಭದಲ್ಲಿಅನಗತ್ಯ ಜಾಬ್‌ಕೋಡ್‌ಗಳನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಕತ್ತರಿ ಹಾಕುವುದು ಸವಾಲಿನ ಕೆಲಸ: ಬಿಬಿಎಂಪಿಯ ಬಜೆಟ್ ಪರಿಷ್ಕರಣೆ ಮಾಡುವ ಸಂಬಂಧ ಇಲ್ಲಿಯವರೆಗೆ ಬಿಬಿಎಂಪಿಯ ಎಲ್ಲ ವಿಭಾಗದ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳು ನಡೆದಿವೆ. ಒಟ್ಟಾರೆಆರು ಬಾರಿ ಬಜೆಟ್ ಪರಿಷ್ಕರಣೆ ಟ್ರಯಲ್ ನೋಡ ಲಾಗಿದೆ! ಇಷ್ಟಾದರೂ ಪರಿಷ್ಕೃತ ಬಜೆಟ್ ಮಂಡನೆ ಮಾಡುವ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೂಲಸೌಕರ್ಯಅನುದಾನಕ್ಕೆ ಕತ್ತರಿ ಹಾಕುವಂತಿಲ್ಲ,ಹಾಕದೆ ಅನ್ಯ ಮಾರ್ಗ ಇಲ್ಲ ಎನ್ನುವ ಪರಿಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಪರಿಷತ್ ಪೀಠಕ್ಕಾಗಿ ತಳ್ಳಾಟ, ಗದ್ಗದಿತರಾದ ಹೊರಟ್ಟಿ:’ಚಿಂತಕರ ಚಾವಡಿ’ಯಲ್ಲಿ ನಡೆದಿದ್ದಿಷ್ಟು
ಹಣಕಾಸಿನ ಜವಾಬ್ದಾರಿ ಕಾಯ್ದೆ ಜಾರಿ: ಪಾಲಿಕೆಯ ಆದಾಯಕ್ಕೆಅನುಸಾರವಾಗಿಬಜೆಟ್ ಮಂಡನೆ ಮಾಡುವ ಉದ್ದೇಶದಿಂದ “ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯ್ದೆ -2002’ನ್ನು ಪಾಲಿಕೆ ಬಜೆಟ್‌ನಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ. ಸ್ಥಳೀಯ ಆಡಳಿತದ ಆರ್ಥಿಕ ನಿರ್ವಹಣೆ ಮತ್ತು ನಿಗದಿಗಿಂತ ಹೆಚ್ಚು ಆದಾಯ ನಿರೀಕ್ಷೆ ತೋರಿಸುವುದಕ್ಕೆ ಇದು ಕಡಿವಾಣ ಹಾಕುತ್ತದೆ. ಈ ಕಾಯ್ದೆ ಸೇರಿಸುವುದರಿಂದ ನಿರೀಕ್ಷೆಗಿಂತ ಹೆಚ್ಚು ಆದಾಯ ತೋರಿಸುವಂತಿಲ್ಲ. ಹೀಗಾಗಿ, ಅನವಶ್ಯಕವಾಗಿ ಬಜೆಟ್ ಗಾತ್ರ ಹೆಚ್ಚಿಸುವುದು ಸಹ ತಪ್ಪಲಿದೆ ಎಂಬ ಮುಂದಾಲೋಚನೆ ಇದೆ.
ಬಿಬಿಎಂಪಿ ವಿಧೇಯಕ -2020 ಕಾಯ್ದೆಯಲ್ಲೂ ಉಲ್ಲೇಖ: ಸರ್ಕಾರ ಉಭಯ ಸದನಗಳಲ್ಲಿ ಮಂಡನೆ ಮಾಡಿರುವ ಕಾಯ್ದೆಯಲ್ಲೂ ಪಾಲಿಕೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ “ಸಮಗ್ರ ಋಣ ಮಿತಿ ನೀತಿ’ ರೂಪಿಸಲು ನಿರ್ದೇಶನ ನೀಡಲಾಗಿದೆ. ಇದರಂತೆಪಾಲಿಕೆ ಯಾವುದೇ ಸಾಲವನ್ನು ಮಾಡುವ ಮುನ್ನ ಸಮಗ್ರ ಋಣ ಮಿತಿ (ಪಾಲಿಕೆಯ ಆದಾಯ ಗಮನದಲ್ಲಿರಿಸಿಕೊಂಡು) ರೂಪಿಸಬೇಕಾಗುತ್ತದೆ.
ಪರಿಷ್ಕರಣೆಯಲ್ಲಿ ಪಾಲಿಕೆ ಮುಂದಿರುವ ಆಯ್ಕೆಗಳು :
ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ ಪರಿಷ್ಕರಣೆ ಸಂಬಂಧ ಚರ್ಚೆ ನಡೆಯುತ್ತಿದ್ದು,ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ನೀಡಲಾಗುವುದು. –ತುಳಸಿ ಮದ್ದಿನೇನಿ, ಬಿಬಿಎಂಪಿ ವಿಶೇಷ ಆಯುಕ್ತೆ(ಹಣಕಾಸು).
ಹಿತೇಶ್ ವೈ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.