ಅರ್ಧದಷ್ಟು ಕೋವಿಡ್ ಪರೀಕ್ಷೆಗಳು ಪೂರ್ಣ
ನಗರದಲ್ಲಿ ಮೂವರಲ್ಲಿ ಒಬ್ಬರಿಗೆ ಕೋವಿಡ್ ಟೆಸ್ಟ್, ದೇಶದಲ್ಲಿಯೇ 2ನೇ ಅತಿ ಹೆಚ್ಚು ಪರೀಕ್ಷೆಗಳು
Team Udayavani, Dec 15, 2020, 1:37 PM IST
ಬೆಂಗಳೂರು: ನಗರದ ಒಟ್ಟಾರೆಜನಸಂಖ್ಯೆಯ ಹೆಚ್ಚು-ಕಡಿಮೆ ಅರ್ಧಕ್ಕರ್ಧದಷ್ಟು ಕೋವಿಡ್ ಸೋಂಕು ಪರೀಕ್ಷೆಗಳು ಆಗಿದ್ದು, ಈ ಮೂಲಕ ದೇಶದಲ್ಲಿಯೇ ಎರಡನೇ ಅತ್ಯಧಿಕ ಪರೀಕ್ಷೆಗಳು ನಡೆದಿವೆ.
ಮಾರ್ಚ್‌ನಲ್ಲಿಆರಂಭಗೊಂಡ ಕೋವಿಡ್ ಸೋಂಕು ಪರೀಕ್ಷೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಇದುವರೆಗೂ 50.6 ಲಕ್ಷ ಪರೀಕ್ಷೆಗಳು ಪೂರ್ಣಗೊಂಡಿವೆ. ಅಂದರೆ, ಇಲ್ಲಿನ ನಿಖರ ಜನಸಂಖ್ಯೆಗೆ ಲೆಕ್ಕ ಹಾಕಿದರೆ,ನಗರದ ಪ್ರತಿ ಮೂವರ ಪೈಕಿ ಒಬ್ಬರು ಪರೀಕ್ಷೆ ಗೊಳಗಾಗಿದ್ದಾರೆ.ಈ ಪರಿಣಾಮಕಾರಿ ಕ್ರಮವು ಸೋಂಕು ನಿಯಂತ್ರಣ ರೂಪದಲ್ಲಿಪ್ರತಿಫಲಿಸಿದೆ. ಇನ್ನು ದೇಶದಲ್ಲಿ ದೆಹಲಿಯಲ್ಲಿ ಮೊದಲ ಅತಿ ಹೆಚ್ಚು 72 ಲಕ್ಷ ಪರೀಕ್ಷೆಗಳು ನಡೆದಿವೆ. ಆದರೆ, ಅಲ್ಲಿನ ಜನಸಂಖ್ಯೆ 3 ಕೋಟಿ ಮೀರಿದೆ. ಸೋಂಕು ಪ್ರಕರಣಗಳು ಕೂಡಾ ಬೆಂಗಳೂರಿಗಿಂತಲೂ ದುಪಟ್ಟಿವೆ.
ಒಟ್ಟಾರೆ ಸೋಂಕು ಪರೀಕ್ಷೆಯಲ್ಲಿ ಪುನಾರಾವರ್ತಿತ ಪರೀಕ್ಷೆಗಳು ಇರಬಹುದು.ಆದರೆ, ಅವುಗಳ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆ ಇದೆ. ಹೀಗಾಗಿ, ನಗರದಲ್ಲಿ 35ಲಕ್ಷಕ್ಕೂಅಧಿಕಮಂದಿಪರೀಕ್ಷೆಗೊಳಗಾಗಿರುವಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಾರೆ. ದೇಶದ ಒಟ್ಟಾರೆ ಪರೀಕ್ಷೆ ಗಳಲ್ಲಿ ಶೇ.3.3 ರಷ್ಟು, ರಾಜ್ಯದ ಒಟ್ಟಾರೆ ಪರೀಕ್ಷೆಗಳ ಪೈಕಿ ಶೇ.41 ರಷ್ಟು ಬೆಂಗಳೂರಿನಲ್ಲಿ ನಡೆದಿವೆ. ಇಂದಿಗೂ ನಗರದ 150ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಪ್ರಮುಖ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಉಚಿತ ಕೋವಿಡ್ ಪರೀಕ್ಷೆಗಳನ್ನು ಕೈಗೊಳ್ಳ ಲಾಗುತ್ತಿದೆ. ಜತೆಗೆ 20ಕ್ಕೂ ಹೆಚ್ಚು ಖಾಸಗಿ ಪ್ರಯೋಗಾಲಯಗಳಲ್ಲಿಯೂ ಪರೀಕ್ಷೆಗಳು ನಡೆಯುತ್ತಿವೆ.
ಇದನ್ನೂ ಓದಿ : ಮೇಲ್ಮನೆಯಲ್ಲಿ ಹೊಯ್ ಕೈ, ಎಳೆದಾಟ.. ಪರಿಷತ್ ಪೀಠದ ಮೇಲೆ ಜಂಗೀಕುಸ್ತಿ: ಕಲಾಪ ಮುಂದೂಡಿಕೆ
ಲಕ್ಷದ ಹಾದಿ ಹೀಗಿತ್ತು: ಸೋಂಕಿನ ಆರಂಭದಲ್ಲಿ ಒಂದು ಲಕ್ಷ ಪರೀಕ್ಷೆ ಕೈಗೊಳ್ಳಲು ಬರೋಬ್ಬರಿ 80 ದಿನ ಹಿಡಿದಿತ್ತು. ಜೂನ್26 ರಂದು ಒಂದು ಲಕ್ಷ ಪೂರೈಸಿತ್ತು. ಸದ್ಯ 55ಸಾವಿರ ಪರೀಕ್ಷೆಗಳನ್ನು ಒಂದೇ ದಿನದಲ್ಲಿ ನಡೆಸಲಾಗುತ್ತಿದೆ. ಪ್ರತಿ ಆರೋಗ್ಯ ಕೇಂದ್ರಗಳಿಗೂ ನಿಗದಿತ ಗುರಿ ನೀಡುವಮೂಲಕ ಪರೀಕ್ಷೆ ವೇಗವನ್ನು ಹೆಚ್ಚಿಸಲಾಗಿದೆ.ಆನಂತರ ಸೆಪ್ಟೆಂಬರ್ 4ಕ್ಕೆ 10 ಲಕ್ಷ, ಅಕ್ಟೋಬರ್ 8ಕ್ಕೆ 20 ಲಕ್ಷ ಗಡಿದಾಟಿತ್ತು. ಆನಂತರ ನಿತ್ಯ 50 ಸಾವಿರಕ್ಕೂ ದಾಟಿದ್ದು, ನವೆಂಬರ್ 20ಕ್ಕೆ 40 ಲಕ್ಷಕ್ಕೆ, ಸೋಮವಾರ (ಡಿ.14) 50 ಲಕ್ಷ ಗಡಿದಾಡಿವೆ. ಇನ್ನು ಒಟ್ಟಾರೆ ಪರೀಕ್ಷೆಗಳಲ್ಲಿ ಶೇ.70 ರಷ್ಟು ಕಳೆದ ಮೂರು ತಿಂಗಳಲ್ಲಿ ನಡೆದಿದೆ.
ನಗರದಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಿದ ಪರಿಣಾಮ ಸೋಂಕು ಹತೋಟಿಗೆ ಬಂದಿದೆ. ಮುಂದಿನ ವರ್ಷ ಜನವರಿ ಅಂತ್ಯದವರೆಗೂ ಪರೀಕ್ಷೆ ಪ್ರಮಾಣವನ್ನುಕಡಿಮೆ ಮಾಡುವುದಿಲ್ಲ. ಒಟ್ಟಾರೆ ಪರೀಕ್ಷೆಗಳಲ್ಲಿ ಪುನಾರಾವರ್ತಿತ ಪರೀಕ್ಷೆಗಳು ಶೇ.5ಕ್ಕಿಂತಲೂ ಕಡಿಮೆ ಇವೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಪರೀಕ್ಷೆ ನಡೆಯುತ್ತಿದ್ದು, ಜನರು ಕೂಡಾ ಸೋಂಕಿನ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೇ ಆರೋಗ್ಯ ಕೇಂದ್ರಗಳಿಗೆ ಬಂದು ಪರೀಕ್ಷೆಗೊಳಗಾಗಬೇಕು. –ಡಾ.ಸಿ.ಎನ್.ಮಂಜುನಾಥ್, ನೋಡಲ್ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.