ದಟ್ಟಕಾನನ,ಕಡಿದಾದ ‌ರಸ್ತೆಯಲ್ಲೇ ಪಡಿತರ ತರಬೇಕು : 4 ಕಿ.ಮೀ. ನಡೆದರೆ ಮಾತ್ರ ಸಿಗುತ್ತೆ ಪಡಿತರ

ಕಾಡುಪ್ರಾಣಿಗಳ ಭಯದಲ್ಲೇ 4 ಕಿ.ಮೀ. ನಡೆದರೆ ಮಾತ್ರ ಸಿಗುತ್ತೆ ಪಡಿತರ, ಪುರಾಣಿ ಪೋಡಿನ ಸೋಲಿಗರ ಪರದಾಟ

Team Udayavani, Dec 15, 2020, 1:59 PM IST

ದಟ್ಟಕಾನನ,ಕಡಿದಾದ ‌ರಸ್ತೆಯಲ್ಲೇ ಪಡಿತರ ತರಬೇಕು

ಯಳಂದೂರು: ಈ ಭಾಗದಲ್ಲಿ ಒಂದೆಡೆ ಕಾಡು ಪ್ರಾಣಿಗಳ ಭಯ, ಮತ್ತೂಂದೆಡೆ ಕಲ್ಲು, ಮಣ್ಣು, ಹಳ್ಳದಿಣ್ಣೆಗಳ ನಡುವೆ ಕಿಲೋ ಮೀಟರ್‌ಗಟ್ಟಲೆ ಜೀವದ ಹಂಗನ್ನು ತೊರೆದು ನಡೆದೇ ಸಾಗಬೇಕಿದೆ.ಇಂತಹ ಪರಿಸ್ಥಿತಿಯಲ್ಲೇ ಸರ್ಕಾರ ನೀಡುವ ಪಡಿತರವನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ತರಬೇಕಿದೆ.

ಇದು ಪ್ರಸಿದ್ಧ ಗಿರಿಧಾಮವಾಗಿರುವ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಸೋಲಿಗ ಜನಾಂಗ ವಾಸಿಸುವ ಪುರಾಣಿ ಪೋಡಿನ ಜನರ ಕಣ್ಣೀರಿನ ಕಥೆ. ಕಾಡುಪ್ರಾಣಿಗಳ ಭಯದಲ್ಲೇ ಕಡಿದಾದ 2 ಕಿ.ಮೀ. ಕಚ್ಚಾ ರಸ್ತೆಯಲ್ಲೇ ನಡೆದು ಪಡಿತರ ತರಬೇಕಿದೆ. ಒಟ್ಟು ಹೋಗುವ, ಬರುವ ದೂರ ಸೇರಿದರೆ ನಾಲ್ಕು ಕಿ.ಮೀ. ನಡೆದರೆ ಮಾತ್ರ ಪಡಿತರ ಸಿಗುತ್ತದೆ.

ಸೌಲಭ್ಯ ಮರೀಚಿಕೆ: ಮೂಲ ಸೌಲಭ್ಯಗಳಿಲ್ಲದೆ ಹಲವು ಶತಮಾನಗಳಿಂದಲೂ ಈ ಜನಾಂಗ ಇಲ್ಲಿ ವಾಸವಾಗಿದೆ. ಇಲ್ಲಿಗೆ ಕುಡಿವ ನೀರಿನ ಸಮಸ್ಯೆ ಇದೆ. ವಿದ್ಯುತ್‌ ಅಂತೂ ಇಲ್ಲವೇ ಇಲ್ಲ. ರಸ್ತೆ ಮರೀಚಿಕೆ ಯಾಗಿದೆ. ಇದರ ನಡುವೆ ದಟ್ಟ ಕಾಡಿನಲ್ಲಿ ನಡೆದುಕೊಂಡೇ ಸಾಗುವ ಅನಿವಾರ್ಯತೆ ಇಲ್ಲಿದೆ. ಇಲ್ಲಿಗೆ ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಮಳೆ ಯಿಂದಕೊಚ್ಚಿಹೋಗಿದೆ. ಇದು ಹಳ್ಳದಿಣ್ಣೆಯಿಂದ ಕೂಡಿರುವ ಈ ರಸ್ತೆ ಕೊರಚಲು ರಸ್ತೆಯಾಗಿ ಮಾರ್ಪಟ್ಟಿದೆ. ಪುರಾಣಿಪೋಡಿ ನಿಂದ ಬೆಟ್ಟಕ್ಕೆ8 ಕಿ.ಮಿ.ದೂರವಿದೆ. ಇಲ್ಲಿನ ಮುಖ್ಯ ರಸ್ತೆಯಿಂದ ಚೈನ್‌ ಗೇಟ್‌ ಮೂಲಕ ಹಾದು ಹೋಗುವ 3 ಕಿ.ಮೀ.ರಸ್ತೆ ಸಂಪೂರ್ಣ ಹಾಳಾಗಿದೆ. ಇದು ದಟ್ಟ ಕಾಡಾಗಿದೆ. ಇಲ್ಲಿ ಹುಲಿ, ಕರಡಿ, ಆನೆ, ಚಿರತೆಗಳ ಹಾವಳಿ ಹೆಚ್ಚಾಗಿರುತ್ತದೆ. ಇದರ ನಡುವೆ ನಡೆದುಕೊಂಡೆ ಇಲ್ಲಿನ ಜನರು ಸಂಚರಿಸುವ ಅನಿವಾರ್ಯತೆ ಇದೆ.

ಕಡಿದಾದ ರಸ್ತೆ: ಕಳೆದ ಮೂರು ತಿಂಗಳಿಂದ ಇಲ್ಲಿ ಹೆಚ್ಚು ಮಳೆಯಾಗಿದ್ದು, ಅರಣ್ಯ ಇಲಾಖೆಯ ಕಚ್ಚಾ ರಸ್ತೆ ಕೊಚ್ಚಿ ಹೋಗಿದೆ. ಅರ್ಧ ರಸ್ತೆ ತನಕ ಮಾತ್ರ ವಾಹನ ಚಲಿಸಲು ಸಾಧ್ಯ. ಪಡಿತರವನ್ನು ಬೆಟ್ಟದ ಲ್ಯಾಂಪ್‌ ಸೊಸೈಟಿಯ ಮೂಲಕವಿತರಣೆ ಮಾಡ ಲಾಗುತ್ತದೆ. ಆದರೆ, ಇದೀಗ ಪಡಿತರತುಂಬಿಕೊಂಡು ಸಾಗುವ ವಾಹನ ಅರ್ಧ ದಾರಿಯಲ್ಲೇನಿಲ್ಲುತ್ತದೆ. ಇಲ್ಲಿಂದ ಮುಂದೆ ಸಾಗಲು ಅಸಾಧ್ಯವಾದ ಕಾರಣ ತೇಗದಕಟ್ಟೆ ಎಂಬಲ್ಲಿ ವಾಹನ ನಿಲ್ಲುತ್ತದೆ. ಇದುಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ನೀರು ಕುಡಿಯುವಸ್ಥಳವಾಗಿದೆ. ಈ ಕಡಿದಾದ ರಸ್ತೆಯ ಮೂಲಕ ನಡೆದುಕೊಂಡೇ ಬರುವ ಸೋಲಿ ಗರು ಇಲ್ಲಿಂದ ಪಡಿತರದ ಅಕ್ಕಿ, ಧಾನ್ಯಗಳನ್ನು ಹೆಗಲ ಮೇಲಿಟ್ಟೇ ಸಾಗುವ ಸ್ಥಿತಿ ಇದೆ.

ಈ ರಸ್ತೆ ಕಲ್ಲು ಮಣ್ಣು, ಹಳ್ಳ ದಿಣ್ಣೆಗಳಿಂದ ಕೂಡಿದೆ. ಇಲ್ಲಿ ಅಲ್ಪ ಆಯತಪ್ಪಿದರೂ ಬಿದ್ದುಮೂಳೆಮುರಿಯುವ ಸಾಧ್ಯತೆ ಇದೆ. ಮಹಿಳೆಯರು ಹಾಗೂ ವೃದ್ಧರು ನಡೆಯುವುದೇಕಷ್ಟವಾಗಿದ್ದು, ಭಾರಹೊತ್ತ ಮೂಟೆಗಳನ್ನು ಹೊತ್ತುಸಾಗುವುದು ಮತ್ತಷ್ಟುಕಷ್ಟವಾಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಪ್ರತಿ ಬಾರಿ ಚುನಾವಣೆ ನಡೆದಾಗಲೂ ಇಲ್ಲಿಗೆ ರಸ್ತೆ, ವಿದ್ಯುತ್‌, ನೀರು ನೀಡುವ ಭರವಸೆ ನೀಡಿದ್ದ ಶಾಸಕರು ಗೆದ್ದ ನಂತರ ಇತ್ತ ತಿರುಗಿನೋಡೇ ಇಲ್ಲ. ಚುನಾವಣೆಗೆ ಮುಂಚೆ ಮತಯಾಚನೆಗೆ ಮೂರ್‍ನಾಲ್ಕು ಬಾರಿ ಬಂದಿದ್ದ ಇವರು ಗೆದ್ದನಂತರ ಇತ್ತ ತಿರುಗೇ ನೋಡಿಲ್ಲ ಎಂದು ಇಲ್ಲಿನವಾಸಿಗಳಾದ ಸಿದ್ದೇಗೌಡ, ಮಾದೇಗೌಡ, ರಂಗಮ್ಮ, ಕೇತಮ್ಮ, ದೈತಮ್ಮ ಮತ್ತಿತರರು ದೂರಿದ್ದಾರೆ.

ಪಡಿತರ ವಾಹನ ತೆರಳಲು ಸಾಧ್ಯವಿಲ್ಲ :

ಈ ಹಿಂದೆ ಪುರಾಣಿ ಪೋಡಿನ ಆಶ್ರಮ ಶಾಲೆಯ ಬಳಿ ನಾವು ಪಡಿತರ ವಿತರಿಸುವ ಪಾಯಿಂಟ್‌ ಇಟ್ಟುಕೊಂಡಿದ್ದೆವು. ಒಟ್ಟು 105 ಪಡಿತರದಾರರು ಇದ್ದಾರೆ. ಆದರೆ, ಮಳೆಯಿಂದ ಇಲ್ಲಿನ ರಸ್ತೆಹಾಳಾಗಿದೆ. ಇಲ್ಲಿಗೆ ತೇಗದಕಟ್ಟೆ ತನಕ ಮಾತ್ರವಾಹನ ತೆರಳುತ್ತದೆ. ಹಾಗಾಗಿ ಕಳೆದ ಮೂರು ತಿಂಗಳಿಂದ ಇಲ್ಲೇ ಪಡಿತರವನ್ನು ವಿತರಿಸ ಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ರಸ್ತೆ ದುರಸ್ತಿ ಮಾಡಿದರೆ ಅಲ್ಲೇ ಪಡಿತರ ವಿತರಣೆ ಮಾಡಲುಕ್ರಮ ವಹಿಸಲಾಗುವುದು ಎಂದು ಲ್ಯಾಂಪ್ಸ್‌ ಸೊಸೈಟಿಯ ಸೇಲ್ಸ್‌ಮನ್‌ ಪರಶಿವಮೂರ್ತಿ ಮಾಹಿತಿ ನೀಡಿದರು.

ಮಳೆ ಬಂದು ಈ ರಸ್ತೆ ಹಾಳಾಗಿದೆ.ಈ ಬಗ್ಗೆ ಇಲಾಖೆಯ ವತಿಯಿಂದದುರಸ್ತಿ ಮಾಡಲು ಸಂಬಂಧಪಟ್ಟ ಮೇಲಧಿಕಾರಿ ಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ತಕ್ಷಣ ಇದನ್ನು ಆದಷ್ಟು ಬೇಗ ದುರಸ್ತಿ ಮಾಡಲು ಕ್ರಮ ವಹಿಸಲಾಗುವುದು. ಲೋಕೇಶ್‌ ಮೂರ್ತಿ, ಆರ್‌ಎಫ್ಒ

 

ಫೈರೋಜ್‌ ಖಾನ್‌

ಟಾಪ್ ನ್ಯೂಸ್

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

Aishwarya Rai  ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

9-kollegala

Kollegala: ಕಲುಷಿತ ನೀರು ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು

Elephanat-1

Chamarajanagara: ವಕ್ರದಂತ ಹೊಂದಿದ್ದ ಕಾಡಾನೆ ಸ್ವಾಭಾವಿಕ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

Aishwarya Rai  ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.