ಕರಿಗೌಡನಹಳ್ಳಿ ಸೇತುವೆ ಪಿಲ್ಲರ್ ಕಾಮಗಾರಿ ಪೂರ್ಣ
ಹೇಮಾವತಿ ಹಿನ್ನೀರಿಗೆ ನಿರ್ಮಿಸುತ್ತಿರುವ ಸೇತುವೆಕಾಮಗಾರಿ ನಿರೀಕ್ಷೆಯಂತೆ ನಡೆದರೆ, 3 ತಿಂಗಳಲ್ಲಿ ಸೇವೆಗೆ ಲಭ್ಯ
Team Udayavani, Dec 15, 2020, 3:08 PM IST
ಆಲೂರು: ತಾಲೂಕಿನ ಕರಿಗೌಡನಹಳ್ಳಿ ಗ್ರಾಮದ ಬಳಿ ಹೇಮಾವತಿ ಹಿನ್ನೀರಿಗೆ ನಿರ್ಮಾಣವಾಗುತ್ತಿರುವಸೇತುವೆಯ ಪಿಲ್ಲರ್ ಕಾಮಗಾರಿ ಮುಕ್ತಾಯಗೊಂಡಿದ್ದು,ಮೂರ್ನಾಲ್ಕು ತಿಂಗಳಲ್ಲಿ ಸೇತುವೆ ಸಾರ್ವಜನಿಕರ ಸೇವೆಗೆ ಸಮರ್ಪಣೆಗೊಳ್ಳಲಿದೆ. ಸೇತುವೆ ನಿರ್ಮಾಣದ ಕನಸು ಹಲವು ವರ್ಷಗಳದ್ದಾಗಿದ್ದು, ಪಕ್ಕದ ಆಲೂರು ತಾಲೂಕು ಕೇಂದ್ರಕ್ಕೆ ಬರಲು 10 ರಿಂದ 12 ಕಿ.ಮೀ. ಕ್ರಮಿಸಬೇಕಾಗಿದ್ದಗ್ರಾಮಸ್ಥರು, ಸೂಕ್ತ ಸೇತುವೆ ಇಲ್ಲದೆ, 50 ಕಿ.ಮೀ. ಸುತ್ತಿ ಬಳಸಿಕೊಂಡು ಬರಬೇಕಾಗಿತ್ತು. ಹೀಗಾಗಿ ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯರು ಹಲವು ಬಾರಿ ಹೋರಾಟ ನಡೆಸಿದ್ದರು.
ಸ್ಥಳೀಯರ ಹೋರಾಟ ಕೊನೆಗೂ ಫಲಶ್ರುತಿಗೊಂಡು ಸರ್ಕಾರವು ಸೇತುವೆ ಕಾಮಗಾರಿಗೆ ಅನು ಮತಿ ನೀಡಿತ್ತು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ಯಾವಾಗ ಮುಕ್ತಾಯಗೊಳ್ಳು ತ್ತದೆ. ಸಂಚಾರಕ್ಕೆ ಅನುವು ಯಾವಾಗ ಎಂದು ಸ್ಥಳೀಯರು ಚಾತಕ ಪಕ್ಷಿಯಂತೆ ಕಾಯ ತೊಡಗಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲೂಕು ಕರಿಗೌಡನಹಳ್ಳಿ ಗ್ರಾಮದ ಬಳಿ ಹೇಮಾವತಿ ಹಿನ್ನೀರಿಗೆ ನಿರ್ಮಾಣವಾಗುತ್ತಿರುವ ಸೇತುವೆಯೇ ಸಾಕಷ್ಟು ಮಂದಿಯ ಹೋರಾಟಕ್ಕೆ ಮಣಿದ ಸೇತುವೆ. ಹಾಸನ ಹಾಗೂ ಆಲೂರು ತಾಲೂಕಿನ ಸಾರ್ವಜನಿಕರು ಹರ್ಷ ಹಲವು ದಶಕಗಳ ಕನಸು ಇದಾಗಿತ್ತು. ಎರಡು ತಾಲೂಕು ಕೇಂದ್ರಗಳು ಹತ್ತಿರವಿದ್ದರೂ ಸೇತುವೆಇಲ್ಲದೇ ಸಂಪರ್ಕಕೊಂಡಿಯೇ ಇರಲಿಲ್ಲ.
ಆಲೂರು ತಾಲೂಕಿನ ಕರಿಗೌಡನ ಹಳ್ಳಿ, ಚಾಕನಹಳ್ಳಿ, ಹಸಗನೂರು ಹಾಗೂ ಹಾಸನ ತಾಲೂಕಿನ ದುಂಡನಾಯಕನಹಳ್ಳಿ, ಬಳ್ಳೆ ಕೆರೆ, ಮಲ್ಲಿಗೆವಾಳು ಗ್ರಾಮಸ್ಥರ ಜಮೀನು ನದಿಯಿಂದ ಅಚೆ ಇಚೆ ಇದ್ದರೂ ಚಿಕ್ಕ ತೆಪ್ಪಗಳನ್ನು ಬಳಸಿ ಜೀವವನ್ನೇ ಕೈಯಲ್ಲಿಹಿಡಿದು ಒಡಾಡ ಬೇಕಾದ ಅನಿವಾರ್ಯತೆ ಎದುರಾಗಿತ್ತು. ದ್ವಿಚಕ್ರ ಅಥವಾ ಇನ್ನಾವುದೇ
ವಾಹನಗಳಲ್ಲಿ ತೆರಳಬೇಕಾದರೆ 50 ಕಿ.ಮೀ. ಸುತ್ತಿ ಕ್ರಮಿಸಿ ಈ ಗ್ರಾಮಗಳನ್ನು ತಲುಪಬೇಕಾಗಿತ್ತು. 4 ದಶಕಗಳಿಂದಲೂ ಈ ಒಂದು ಸೇತುವೆಗಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿತ್ತು. ಇದೀಗ ಸೇತುವೆ ಕಾಮಗಾರಿ ಆರಂಭಗೊಂಡು ನಿರ್ಮಾಣ ಹಂತವು ಅರ್ಧಷ್ಟು ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಸಂಚಾರ ನಡೆಸಬಹುದು ಎಂಬ ಸಂತಸದಲ್ಲಿದ್ದಾರೆ ಸ್ಥಳೀಯರು.
ಹೊರ ಜಿಲ್ಲೆಯ ಜನರಿಗೂ ಅನುಕೂಲ: ಈ ಸೇತುವೆ ನಿರ್ಮಾಣದಿಂದ 2 ತಾಲೂಕುಗಳ ವ್ಯಾಪಾರ ವಹಿವಾಟು ವೃದ್ಧಿ ಆಗುವುದರ ಜೊತೆಗೆ ಹೊಳೆನರಸೀಪುರ, ಅರಕಲಗೂಡು ತಾಲೂಕುಗಳಿಗೆ ಸಂಚರಿಸಲು ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಮಡಕೇರಿ ಜಿಲ್ಲೆಗೆ ತೆರಳಲು 50 ರಿಂದ 60 ಕಿ.ಮೀ. ಕಡಿಮೆಯಾಗುತ್ತದೆ. ಇದರಿಂದಎಲ್ಲಾ ಭಾಗದ ಜನರಿಗೂ ಬಹಳ ಅನುಕೂಲವಾಗಿದೆ. ಕೆಆರ್‌ಡಿಸಿಎಲ್ (ಕರ್ನಾಟಕ ರಸ್ತೆ ಸಾರಿಗೆ ನಿಗಮ)ನಿಂದ 16 ಕೋಟಿ ರೂ. ಅನುದಾನದಲ್ಲಿ ಬಿಎಸ್‌ಆರ್ ಕಂಪನಿ ಕಾಮಗಾರಿ ನಿರ್ವಹಿಸುತ್ತಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡು 9 ತಿಂಗಳು ಕಳೆದಿವೆ. ಪಿಲ್ಲರ್‌ಗಳ ನಿರ್ಮಾಣ ಹಂತ ಭಾಗಶಃ ಅರ್ಧಷ್ಟು ಮುಕ್ತಾಯಗೊಂಡಿದೆ. ಕಾಮಗಾರಿಯು ಮಳೆ ಹಾಗೂ ಕೊರೊನಾ ಸೋಂಕಿನ ಕಾರಣದಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯನ್ನು ಸ್ವಲ್ಪ ಚುರುಕುಗೊಳಿಸಿದರೆ ಮುಂದಿನ ಮೂರ್ನಾಲ್ಕುತಿಂಗಳುಗಳಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕರ ಸಂಚಾರಕ್ಕೆ ಬಹುಬೇಗನೆ ಸಿಗುತ್ತದೆ ಎಂಬುವುದು ಸಾರ್ವಜನಿಕರ ಆಶಯ.
ಸೇತುವೇಕಾಮಗಾರಿ ನಡೆಯುತ್ತಿದೆ ಎಂಬುವುದು ಮುಖ್ಯವಲ್ಲ. ಕಾಮಗಾರಿಯು ಯಾವ ಗುಣಮಟ್ಟದಲ್ಲಿದೆ ಸಾಗುತ್ತಿದೆ ಎಂಬುವುದು ಮುಖ್ಯವಾಗಿದೆ. ಆದ್ದರಿಂದ ಸೇತುವೆ ಕಾಮಗಾರಿಯ ಹೊಣೆ ಹೊತ್ತಿರುವ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಕಳಪೆ ಕಾಮಗಾರಿ ನಡೆಯದಂತೆ ಕ್ರಮ ವಹಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಈ ಸೇತುವೆ ನಿರ್ಮಾಣದಿಂದ ಎರಡು ತಾಲೂಕುಗಳ ಲಕ್ಷಾಂತರ ಜನರ ಸಂಪರ್ಕದಕೊಂಡಿಯಾಗಿದೆ. ಇದಕ್ಕೆ ಶ್ರಮಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜೇಗೌಡ್ರು, ಎಲ್ಲಾ ಪಕ್ಷದ ನಾಯಕರಿಗೆ ಗ್ರಾಮದ ಮುಖಂಡ ಕೃಷ್ಣೇಗೌಡ ಅಭಿನಂದನೆ ಸಲ್ಲಿಸಿದರು.
ಹಲವು ದಶಕಗಳಿಂದಲೂ ಸೇತುವೆ ನಿರ್ಮಾಣಕ್ಕಾಗಿ ಹೋರಾಟಮಾಡುತ್ತಬಂದಿದ್ದೆವು. ಸ್ಥಳೀಯರ ಬಹುದಿನಗಳ ಕನಸು ನನಸಾಗಿದೆ. ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ಕಾಮಗಾರಿಯನ್ನು ಚುರುಕುಗೊಳಿಸಿಬೇಕಿದೆ. -ಕೃಷ್ಣೇಗೌಡ, ಗ್ರಾಮದ ಮುಖಂಡ
-ಟಿ.ಕೆ.ಕುಮಾರಸ್ವಾಮಿ ಬೈರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.